ಜಮಖಂಡಿ

ವಾಯುವಿಹಾರದ ವೇಳೆ ವ್ಯಾಪಾರಸ್ಥರ ಜೊತೆ ಶಾಸಕ ಎಸ್‌. ಸುರೇಶಕುಮಾರ ಮಾತುಕತೆ

ವಾಯುವಿಹಾರದ ವೇಳೆ ವ್ಯಾಪಾರಸ್ಥರ ಜೊತೆ ಶಾಸಕ ಎಸ್‌. ಸುರೇಶಕುಮಾರ ಮಾತುಕತೆ

ಜಮಖಂಡಿ 10 : ನಗರದಲ್ಲಿ ನಸುಕಿನ ಜಾವದಲ್ಲಿ ಮಾಜಿ ಸಚಿವ ಶಾಸಕ ಎಸ್‌. ಸುರೇಶಕುಮಾರ ಪ್ರಮುಖ ರಸ್ತೆಯಲ್ಲಿ ವಾಯುವಿಹಾರ ನಡೆಸಿದರು.  

ಪುಟ್ ಪಾತ್ ಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಿರುವ ವ್ಯಾಪಾರಿಗಳನ್ನು ಮಾತನಾಡಿಸುವ ಮೂಲಕ ಬಸ್ ನಿಲ್ದಾಣ ಹತ್ತಿರದಲ್ಲಿ ಇರುವ ಉಪಾಹಾರ ಹೋಟೆಲ್ ಮಾಲೀಕ ಚಂದ್ರಶೇಖರ ಶೆಟ್ಟಿ ಹಾಗೂ ಸಂತೋಷ ಶೆಟ್ಟಿ ಅವರ ಜೊತೆಯಲ್ಲಿ ವ್ಯಾಪಾರ ವಹಿವಾಟದ ಬಗ್ಗೆ ಹಾಗೂ ಕುಟುಂಬದವರ ಬಗ್ಗೆ ವಿಚಾರಿಸಿ ಮಾತುಕತೆ ನಡೆಸಿದರು. ಶಾಸಕ ಎಸ್ ಸುರೇಶಕುಮಾರ ಅವರ ವಾಯುವಿಹಾರದ ಜೊತೆಯಲ್ಲಿ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ನಗರಸಭೆ ಸದಸ್ಯ ಕುಶಾಲ ವಾಗಮೋರೆ, ಪುರೋಹಿತ ಗಲಗಲಿ, ಪ್ರಶಾಂತ ಕಲರ್ಬುಗಿ ಸೇರಿದಂತೆ ಅನೇಕರು ಇದ್ದರು.   


ಸುದ್ದಿ ಓದಿ