ಟೌನ್‌ಹಾಲ್ ಪರಿಸ್ಥಿತಿಯನ್ನು ಸುಧಾರಿಸುವಂತೆ ಶಾಸಕ ರೆಡ್ಡಿ ಅಧಿಕಾರಿಗಳಿಗೆ ಸೂಚನೆ
ಗಂಗಾವತಿ : ನಗರದ ಟೌನ್‌ಹಾಲ್‌ಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಂಗಳವಾರದಂದು ಭೇಟಿ ನೀಡಿದರು, ಟೌನ್‌ಹಾಲ್ ಪರಿಸ್ಥಿತಿ ಕಂಡು ಶಾಸಕರು ಅಸಮಧಾನ ವ್ಯಕ್ತ ಪಡಿಸಿದರು.ಟೌನ್ ಹಾಲ್ ನಲ್ಲಿ ಮುರಿದು ಬಿದ್ದ ಬಾಗಿಲು, ಕಿತ್ತೋದ ಕಿಡಿಕಿಗಳು, ಬಾಗಿ ಬೆಂಡಾದ ಫ್ಯಾನಗಳನ್ನು ಕಂಡು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿ ಇದ್ದ ನಗರಸಭೆ ಪೌರಾಯುಕ್ತ ವಿರುಪಾಕ್ಷಿಮೂರ್ತಿ ಅವರು ಶಾಸಕರಿಗೆ ಸ್ಪಷ್ಟನೆ ನೀಡುತ್ತಾ ಅಪೂರ್ಣವಾಗಿ ನಿರ್ಮಾಣ ಮಾಡಲಾಗಿರುವ ಕಟ್ಟಡವನ್ನು ಈ ಹಿಂದೆ ನಗರಸಭೆ ಸುಪರ್ದಿಗೆ ನೀಡಲಾಗಿದೆ. ಹಿಂದಿನ ಪೌರಾಯುಕ್ತರು ಮತ್ತು ಲೋಕೋಪಯೋಗಿ ಇಲಾಖೆ ಇಂಜಿನಿಯರ್ಸ್ ಮಾಡಿದ ತಪ್ಪಿನಿಂದಾಗಿ ಕೋಟಿ ರೂಪಾಯಿಗಳ ಯೋಜನೆಯೊಂದು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ ಎಂದು ಮಾಹಿತಿ ನೀಡಿದರು. ಶಾಸಕರು ತಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಎಇಇ ಸುದೀಶ್ ಕುಮಾರ್ ಅವರನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತರಾಟೆಗೆ ತೆಗೆದುಕೊಂಡ ಪ್ರಸಂಗವು ನಡೆಯಿತು.ಅಷ್ಟೇ ಅಲ್ಲದೆ ಟೌನ್‌ಹಾಲ್ ಪರಿಸ್ಥಿತಿಯನ್ನು ಸುಧಾರಿಸಿ ಸಾರ್ವಜನಿಕ ಬಳಕೆಗೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮನೋಹರ ಗೌಡ ಹೇರೂರು, ಸಂಜಯ ಬೇಟಗೇರಿ, ವೀರೇಶ್ ಬಲಕುಂದಿ, ರಾಜೇಶ್ ರೆಡ್ಡಿ, ಎಂ ಡಿ ಗೌಸ್, ಬಾಷಾ, ಚಂದ್ರಶೇಖರ ಹಿರೂರು, ವೈ ಎಮ್ ಪುಂಡಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.