ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ರಾಜು ಕಾಗೆ ಚಾಲನೆ
ಸಂಬರಗಿ :ಗಡಿಭಾಗದ ಬಸವೇಶ್ವರ ಏತ ನಿರಾವರಿ ಯೋಜನೆಗೆ 15 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದು, ಬೆಳಗಾವಿ ಅಧಿವೇಶನದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನೀರಾವರಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇಲಾಖೆಯ ಇನ್ನೀತರ ಅಧಿಕಾರಿಗಳು ಸೇರಿ ಸಭೆ ನಡೆಸಿ, ಕಾಮಗಾರಿ ಕುರಿತು ಚರ್ಚೆ ನಡೆಸಿ, ಹೆಚ್ಚಿನ ಅನುದಾನ ಬಿಡುಗಡೆಗೆ ಒತ್ತಾಯಿಸಲಾಗುವುದು ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ತಾಂವಶಿ ಗ್ರಾಮದಲ್ಲಿ ಮಂಗಳವಾರ ತಾಂವಶಿ, ನಾಗನೂರ ಪಿ.ಏ ಗ್ರಾಮದ ವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿರು.
ಸದ್ಯದ ಪರಿಸ್ಥಿತಿಯಲ್ಲಿ 80 ಪ್ರತಿಶತ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದ 20 ಪ್ರತಿಶತ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ, ಪೂರ್ಣಗೊಳಿಸಿ ನೀರು ಹರಿಸಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ಕೃಷ್ಣ ನದಿ ನಿರಿನ ಮಟ್ಟ ಕಡಿಮೆಯಾಗಿದ್ದು,ನದಿ ತೀರದ ಪಂಪಸೆಟ್ಗಳು ವಾರದಲ್ಲಿ ವಿದ್ಯುತ್ ಕಡಿತಗೊಳಿಸಿ, ನೀರು ಸಂಗ್ರಹ ಮಾಡಲಾಗುವುದು. ಸದ್ಯದಲ್ಲಿ ಸಬ್ಸಿಡಿ ರೂಪದಲ್ಲಿ ರೈತರಿಗೆ ಸೌರ ಒಲೆ ಅಳೊಡಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸುತ್ತಿದ್ದೇವೆ.
ಈ ವೇಳೆ ದಿವ್ ಕಾಂಗ್ರೆಸ್ ಧುರೀಣ ವಿನಾಯಕ ಬಾಗಡಿ, ಅಥಣಿ ಪುರಸಭೆ ಸದಸ್ಯ ರಾವಸಾಬ ಐಹೋಳೆ, ಸಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಮಲ್ಲಿಕಾರ್ಜುನ ದಳವಾಯಿ,ಉಪಾಧ್ಯಕ್ಷ ಅಶೋಕ ಬಾಬು ಮಾನೆ ಬಸವರಾಜ ಅಂಗಡಿ, ಗುಳಪ್ಪಾ ಜತ್ತಿ, ಶಿದ್ರಾಯ ತೇಲಿ, ಮಲ್ಲಿಕಾರ್ಜುನ ದಳವಾಯಿ, ಗ್ರಾಂ.ಪ ಸದಸ್ಯ ಪಾಂಡು ಕಾಂಬಳೆ, ಶ್ರೀಶೈಲ ಪಾಟೀಲ ಪಿಕೆಪಿಎಸ್ ಅಧ್ಯಕ್ಷ ವಿಲಾಸ ಟೋಣೆ, ಪಿಕೆಪಿಎಸ್ ಉಪಾಧ್ಯಕ್ಷ ಅಣ್ಣಾಸಾಹೇಬ ಮಿಸಾಳ, ಚನಗೌಡ ಇಮಗೌಡರ್, ಶಿವಾನಂದ ಖೋತ,ಮುತ್ತಣ್ಣ ಪಾಟೀಲ, ಅಪ್ಪು ಕೆಂಚಗೌಡರ್,ಬಸಪ್ಪ ತಳವಾರ,ಕಾಡು ಪಾಟೀಲ ಎಪಿಎಮ್ ಸಿ ಮಾಜಿ ಅಧ್ಯಕ್ಷ ಶಿವಾನಂದ ಮಗದುಮ್, ಬಂಡು ಜಾಧವ,ಅಭಿಯಂತರು ಮಲ್ಲಿಕಾಜರ್ುನ ಮಗದುಮ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.