ಶಾಸಕ ಪಠಾಣ್ ಜನ್ಮದಿನ: ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕ ವಿತರಿಸಿದ ಹಜರತಲಿ
ಶಿಗ್ಗಾವಿ 22: ಕ್ಷೇತ್ರದ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ್ ಅವರ 45 ನೇ ಜನ್ಮದಿನದ ಅಂಗವಾಗಿ ಹಜರತ್ ಅಲಿ ಚೂಡಿಗಾರ ಬಳಗದಿಂದ ಮೌಲಾಲಿ ನಗರದ ಉರ್ದು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೆನ್ನು ಮತ್ತು ಪುಸ್ತಕಗಳನ್ನು ವಿತರಿಸುವ ಮೂಲಕ ಅರ್ಥಗಭಿತವಾಗಿ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗೌಸಖಾನ ಮುನಶಿ, ಜಾಫರಖಾನ ಪಠಾಣ, ವಸಂತಾ ಬಾಗೂರ, ಮುನ್ನಾ ಲಕ್ಷ್ಮೇಶ್ವರ, ಮಲ್ಲಮ್ಮ ಸೋಮನಕಟ್ಟಿ, ಲಕ್ಷ್ಮೀ ಕಟ್ಟಿಮನಿ,ಶಂಬು ನೆರ್ತಿ, ಖಾಜಾ ಶ್ಯಾಬಾಳ, ಆಸೀಫ್ ಕಣವಿ, ಆಸೀಫ್ ಮಾರಂಬಿಡ್ ಸೇರಿದಂತೆಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.