ಅಥಣಿ

ಪೈಪ ಲೈನ್ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ

ಪೈಪ ಲೈನ್ ಕಾಮಗಾರಿಗೆ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ

ಅಥಣಿ 10: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಅಥಣಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಉದ್ಯಾನವನ ಸೇರಿದಂತೆ ಅನೇಕ ಮೂಲ ಭೂತ ಸೌಲಭ್ಯಗಳನ್ನು ಪುರಸಭೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಅಥಣಿ ಪಟ್ಟಣದ ಜನತೆಯ ಅನುಕೂಲಕ್ಕಾಗಿ ಈಗಾಗಲೇ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ 24*7 ಪೂರೈಕೆಯಾಗುವ ಕುಡಿಯುವ ನೀರಿನ ಕಾಮಗಾರಿಯೂ ಕೂಡ ಇಷ್ಟರಲ್ಲಿಯೇ ಪ್ರಾರಂಭಗೊಳ್ಳುವುದು ಎಂದು ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ಹೇಳಿದರು.  

ಅಥಣಿ ಪುರಸಭೆ ವ್ಯಾಪ್ತಿಯ ವಾರ್ಡ 20 ಮತ್ತು 21ರಲ್ಲಿ ನಗರೋತ್ಥಾನ ಯೋಜನೆಯಡಿ 3ನೇ ಹಂತದ 1 ಕೋಟಿ 17 ಲಕ್ಷ ರೂಪಾಯಿ ಅನುದಾನದ ಪೈಪ ಲೈನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಪಟ್ಟಣದ ವ್ಯಾಪ್ತಿಯಲ್ಲಿರುವ ಜೋಡು ಕೆರೆಗಳ ಅಭಿವೃದ್ಧಿಗಾಗಿ 15. ಕೋಟಿ ರೂ.ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಎರಡೂ ಕೆರೆಗಳ ಸುತ್ತ ತಡೆಗೊಡೆ, ಉದ್ಯಾನವನ, ವಾಕ್ ಪಥ, ವಿದ್ಯುತ್ ದೀಪಗಳ ಅಲಂಕಾರ ಸೇರಿದಂತೆ ಅನೇಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದ ಅವರು ಪಟ್ಟಣದ ಹೊರ ವಲಯದಲ್ಲಿ ಹರಿದು ಹೋಗಿರುವ ಭಾಗೀರಥಿ ಹಳ್ಳ ಅಥವಾ ನಾಲಾ ಅಭಿವೃದ್ಧಿಗಾಗಿ 10 ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಭಾಗೀರಥಿ ನಾಲಾವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು ಎಂದರು.      

ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸದಸ್ಯರಾದ ರಾಜಶೇಖರ ಗುಡೋಡಗಿ, ವೀಲೀನರಾಜ ಯಳಮೇಲಿ, ಮಲ್ಲೇಶ ಹುದ್ದಾರ, ದತ್ತಾ ವಾಸ್ಟರ್ ದೀಲೀಪ ಲೋಣಾರೆ, ಕಲ್ಲೇಶ ಮಡ್ಡಿ, ಸಂತೋಷ ಸಾವಡಕರ, ರಿಯಾಜ ಸನದಿ, ತಿಪ್ಪಣ್ಣ ಭಜಂತ್ರಿ, ಬೀರ​‍್ಪ ಯಂಕಂಚಿ, ಧುರೀಣರಾದ ಆನಂದ ದೇಶಪಾಂಡೆ, ಅಜಿತ ಇನಾಮದಾರ, ರಾಜು ಢಾಲೆ, ರಾಜು ಚೌಗಲಾ, ದೀಪಕ್ ಟಿಕಾರೆ, ಅಮರ ದುರ್ಗಣ್ಣವರ, ಗುತ್ತಿಗೆದಾರ ಆನಂದಕುಮಾರ ಆರ್, ಇಸ್ಮಾಯಿಲ್ ಲಾಡಖಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ