ಜಮಖಂಡಿ

ನಮ್ಮ ಮಣ್ಣು ನಮ್ಮ ದೇಶ ಅಭಿಯಾನಕ್ಕೆ ಶಾಸಕ ಜಗದೀಶ ಚಾಲನೆ

ನಮ್ಮ ಮಣ್ಣು ನಮ್ಮ ದೇಶ ಅಭಿಯಾನಕ್ಕೆ  ಶಾಸಕ ಜಗದೀಶ ಚಾಲನೆ

ಲೋಕದರ್ಶನ ವರದಿ,

ಜಮಖಂಡಿ 13: ಕಳೆದ 75 ವರ್ಷಗಳ ಹಿಂದೆ ಬ್ರಿಟಿಷರು ಇಟ್ಟ ಹೆಸರನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಬದಲಿಸಿ ನಮ್ಮ ಸಾಂಪ್ರದಾಯಿಕ, ಸನಾತನವಾಗಿ ಬೆಳೆದು ಬಂದ ಭಾರತ ಎಂಬ ಹೆಸರನ್ನಿಟಿದ್ದು ದೇಶದ ಪ್ರತಿಯೊಬ್ಬ ಪ್ರಜೆ ಸಂತೋಷ ತಂದಿಗೆ. ಆದರೆ ವಿರೋಧ ಪಕ್ಷದ ಕೆಲ ನಾಯಕರು ಅದನ್ನು ವ್ಯಂಗ್ಯವಾಡುತ್ತಿದ್ದು, ಅವರಿಗೆ ಭಾರತ ದೇಶದ ಹಿಂದೂ ಧರ್ಮದ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ ಎಂಬುವುದನ್ನು ತೋರಿಸುತ್ತದೆಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದ ಛಟ್ಟೂಸಿಂಗ್ ಉದ್ಯಾನವನದಲ್ಲಿ ನಡೆದ ನಮ್ಮ ಮಣ್ಣು ನಮ್ಮ ದೇಶ ಅಭಿಯಾನಕ್ಕೆ ಮಣ್ಣು ಸಂಗ್ರಹಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸನಾತನ ಧರ್ಮ ಯಾವುದಾದಿದ್ದರೆ ಅದೂ ಹಿಂದು ಧರ್ಮವಾಗಿದೆ. ಭಾವನಾತ್ಮಕವಾಗಿ ನಾವೆಲ್ಲರೂ ಒಂದು ಎಂಬುದನ್ನು ತೋರಿಬೇಕು. ನಮ್ಮ ಮಣ್ಣು ನಮ್ಮ ದೇಶ ಅಭಿಯಾನ ಈ ಮಣ್ಣನ್ನು ಗ್ರಾಮ, ತಾಲೂಕು, ಜಿಲ್ಲೆಗಳಿಂದ ದೆಹಲಿಯಲ್ಲಿ ಸುಂದರ ಉದ್ಯಾನವನ ನಿಮರ್ಾಣ ಕಾರ್ಯಕ್ಕೆ ಪ್ರಧಾನಿ ಸಂಕಲ್ಪಿಸಿದ್ದು, ನಮ್ಮೆಲ್ಲರಿಗೂ ಹೆಮ್ಮೆ ತರುವ ಸಂಗತಿಯಾಗಿದೆ. ಇಡೀ ಜಗತ್ತೇ ಮೆಚ್ಚುವಂತಹ ಜಿ-20 ಕಾರ್ಯಕ್ರಮವನ್ನು ಅತೀ ಸುವ್ಯವಸ್ಥಿತವಾಗಿ ದೆಹಲಿಯಲ್ಲಿ ಆಯೋಜಿಸಿ,ವಿಶ್ವವೇ ಭಾತರದೆಡೆ ನೋಡುವಂತೆ ಮಾಡಿದ್ದನ್ನು ನಾವೂ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಅಭಿಯಾನದ ಜಿಲ್ಲಾ ಸಂಚಾಲಕ ನಂದು ಗಾಯಕವಾಡ ಮಾತನಾಡಿ, ದೇಶದ ಪ್ರತಿ ಬೂತ ಮಟ್ಟದಲ್ಲಿನ ಮಣ್ಣನ್ನು ಜಿಲ್ಲಾ ಕೇಂದ್ರ ಮೂಲಕ ದೆಹಲಿಗೆ ಕಳಿಸಿಕೊಡಲಾಗುವುದು. ಮುಂದಿನ ದಿನಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೂ ನಮ್ಮ ದೇಶದ ಮಣ್ಣಿನ ಮಹತ್ವ ಅರಿಯುವ ಉದ್ದೇಶದಿಂದ ಶಾಲಾ ಮಕ್ಕಳು ಮಣ್ಣನ್ನು ಸಂಗ್ರಹಿಸಿ, ಉತ್ತಮ ಉದ್ಯಾನವನ ನಿಮರ್ಾಣ ಮಾಡುವ ಸಂಕಲ್ಪ ಹೊಂದಬೇಕಾಗಿದೆ. ಮಣ್ಣಿನ ಶಕ್ತಿ ಮನೆ-ಮನೆಗೆ ತಲುಪ ಬೇಕಾಗಿದೆ.ರೈತನಲ್ಲದೆ ಪತಿಯೊಬ್ಬರೂ ಮಣ್ಣಿನೊಂದಿಗೆ ಭಾವನಾತ್ಮಕ ಬಾಂಧವ್ಯ ಹೊಂದಬೇಕಾಗಿದೆ ಎಂದರು.

ಉದ್ಯಮಿ ಡಾ.ಉಮೇಶ ಮಹಾಬಳಶೆಟ್ಟಿ, ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಶಶಿ ವಿಶ್ವಬ್ರಾಹ್ಮಣ, ಮಲ್ಲು ದಾನಗೌಡ, ಅಜೇಯ ಕಡಪಟ್ಟಿ, ಗಣೇಶ ಶಿರಗನ್ನವರ, ಈಶ್ವರ ಆದೆಪ್ಪನ್ನವರ, ಶಂಕರ ಕಾಳೆ, ಶಿವು ನಾಯಿಕ, ಕುಶಾಲ ವಾಘ್ಮೋರೆ, ಪೂಜಾ ವಾಳ್ವೇಕರ, ಅನೀಲ ಬಾಗೇವಾಡಿ, ವಿಜಯಲಕ್ಷ್ಮೀ ಉಕುಮನಾಳ, ಯಮನೂರ ಮೂಲಂಗಿ, ಶ್ರೀಧರ ಕಂಬಿ, ರಾಜೇಸಾಬ ಕಡಕೋಳ, ಸರ್ವೋತ್ತಮ ಗಲಗಲಿ, ಶಾಮ ಗಣಾಚಾರಿ, ಪರೀಟ್, ರಾಜು ಹಂಚಿನಾಳ, ರಮೇಶ ಆಲಬಾಳ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ