ಶಾಸಕ ಹಿಟ್ನಾಳರಿಂದ ಸಾನಿಯಾ ಬೆಡ್ಡಿಂಗ್ ನೂತನ ಶೋರೂಮ್ ಶಾಖೆಯ ಉದ್ಘಾಟನೆ

ಶಾಸಕ ಹಿಟ್ನಾಳರಿಂದ ಸಾನಿಯಾ ಬೆಡ್ಡಿಂಗ್ ನೂತನ ಶೋರೂಮ್ ಶಾಖೆಯ ಉದ್ಘಾಟನೆ MLA Hitnal inaugurates new branch of Sania Bedding showroom


ಕೊಪ್ಪಳ 18 : ನಗರದ ಕಿನ್ನಾಳ ರಸ್ತೆ ರೈಲ್ವೆ ಬ್ರಿಜ್ ಹತ್ತಿರ  ಹಮ್ಜವಿ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಪ್ರಾರಂಭಿಸಲಾದ ಸಾನಿಯಾ ಬೆಡ್ಡಿಂಗ್ ವರ್ಕ್ಸ ಅಂಡ್ ಫರ್ನಿಚರ್ ಶೋರೂಮ್ ನ ಪ್ರಾರಂಭೋತ್ಸವ ಸಮಾರಂಭ ಶುಕ್ರವಾರ ಬೆಳಿಗ್ಗೆ ಜರುಗಿತು, ಶಾಸಕ ಕೆ ರಾಘವೇಂದ್ರ ಹಿಟ್ನಾಳ ಮತ್ತು ಮುಸ್ಲಿಂ ಧರ್ಮ ಗುರು ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ರವರು ಜಂಟಿಯಾಗಿ ಉದ್ಘಾಟನೆ ನೆರವೇರಿಸಿದರು, ನಂತರ ಸಂಘಟಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಗ್ರಾಹಕರಿಗೆ ಯೋಗ್ಯ ಮತ್ತು ನ್ಯಾಯ ಸಮ್ಮತವಾದ ಬೆಲೆಗೆ ಇಲ್ಲಿ ತಯಾರಿಸಲ್ಪಡುವ ಗೃಹ ಬಳಕೆಯ ಸಾಮಗ್ರಿಗಳನ್ನು ಮಾರಾಟ ಮಾಡಬೇಕು ಶೋ ರೂಂ ಗೆ ಬರುವ ಗ್ರಾಹಕ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಪರಸ್ಪರ ಸ್ನೇಹ ವಿಶ್ವಾಸದಿಂದ ವ್ಯವಹಾರ ಮಾಡಬೇಕು.

ನಿಮ್ಮ ಈ ವ್ಯವಹಾರದಲ್ಲಿ ಆ ಸೃಷ್ಟಿಕರ್ತ ಅಲ್ಲಾಹನು ಅಭಿವೃದ್ಧಿ ನೀಡಲಿ ನಿಮ್ಮ ವ್ಯವಹಾರದಲ್ಲಿ ವೃದ್ಧಿಯಾಗಲಿ ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರು ಶುಭ ಹಾರೈಸಿದರು, ಇದೆ ವೇಳೆ ಮೌಲಾನ ಮುಫ್ತಿ ನಜೀರ್ ಅಹಮದ್ ಖಾದ್ರಿ ತಸ್ಕಿನಿ ರವರು ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಸಿ ಶುಭ ಕೋರಿದರು, ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್, ನದಾಫ್ ಪಿಂಜಾರ್  ಸಂಘದ ರಾಜ್ಯ ಕೋಶಾಧ್ಯಕ್ಷ ಶಾಬುದ್ದೀನ್ ಸಾಬ್ ನೂರ್ ಬಾಷಾ, ಕರ್ನಾಟಕ ಮುಸ್ಲಿಂ ಯುನಿಟಿಯ ಜಿಲ್ಲಾಧ್ಯಕ್ಷ ಎಂಡಿ ಜಿಲಾನ್ ಕಿಲ್ಲೇದಾರ ಮೈ ಲೈಕ್  ಇಸ್ಮಾಯಿಲ್ ,ರಫಿ ಡಂಬ್ರಹಳ್ಳಿ, ಮೊಹಮ್ಮದ್ ಕೈಫ್, ಎಂ,ಡಿ, ನಬಿ. ನಿತೇಶ್ ಮಡಿವಾಳರ್, ಸಮೀರ್, ಚಾಂದ್ ಪಾಷಾ ಚಿಕ್ಕಿ, ಯಮನೂರ್ ಡಂಬ್ರಹಳ್ಳಿ ,ನೂರ್ ಮುಂಡರಗಿ, ಶರೀಫ್ ಮುಂಡರಗಿ, ಬಾಬುಸಾಬ್ ಲದಾಫ್, ಅಶ್ಪಾಕ್ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,