ಇಂಡಿ

ಇಂಡಿ ಉಪನೋಂದಣಾಧಿಕಾರಿ ಕಚೇರಿ ಮೇಲೆ: ಲೋಕಾಯುಕ್ತ ದಾಳಿ ಎರಡಕ್ಕೆ

ಇಂಡಿ ಉಪನೋಂದಣಾಧಿಕಾರಿ ಕಚೇರಿ ಮೇಲೆ: ಲೋಕಾಯುಕ್ತ ದಾಳಿ ಎರಡಕ್ಕೆ

ಲೋಕದರ್ಶನ ವರದಿ 

 ಇಂಡಿ 02: ಸದಾ ಸುದ್ದಿಯಲ್ಲಿರುವ ಇಂಡಿ ಉಪನೋಂದಣಿ ಕಛೇರಿ ಹಾಗೂ ವಿವಾಹ ನೋಂದಣಾಧಿಕಾರಿಗಳ  ಕಛೇರಿ ಮೇಲೆ ವಿಜಯಪೂರ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಟಿ ಮಲ್ಲೇಶಿ ನೇತೃತ್ವದಲ್ಲಿ ನಿನ್ನೆ ದಾಳಿ ಮಾಡಲಾಯಿತು. ಇಂದು ಎರಡನೇ ದಿನವೂ ತನಿಖೆ ಮುಂದುವರಿಸಿದ್ದಾರೆ.ಬೆಳಗ್ಗೆ ಹತ್ತು ಗಂಟೆಗೆಯಿಂದ ಸಾಯಂಕಾಲ ಆರು ಗಂಟೆಗೆ ವರಿಗೆ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಟಿ ಮಲ್ಲೇಶಿ ನೇತೃತ್ವದಲ್ಲಿ ತಂಡ ಎಲ್ಲಾ ಕಡತಗಳನ್ನು ಪರೀಶೀಲಿಲನೆ ಮಾಡಿದರು. 

 ಇಂದು ತನಿಖೆಯಿಂದ ಇಸಿ ಫಂಡ್ ಮತ್ತು ಮೌಂಟೇನ್ ಫಂಡ್ ನೋಂದಣಿಯಾದ ಹಣ ಮುದ್ರಾಂಕ ಸೂಲ್ಕ್‌ ಗಳನ್ನು ಬರಸಿದ ಮೊತ್ತ ಹಾಗೂ ಬುಕ್ ನಂಬರ್ 1 ರಲ್ಲಿ  ನಮೂದಿಸಿ ಮೊತ್ತ ಹೋಲಿಕೆ ಆಗುತ್ತಿಲ್ಲ ಹಾಗೂ ಸಾಕಷ್ಟು ನೋಂದಣಿಯಾದ ದಾಖಲಾತಿಗಳು ಸಂಬಂಧ ಪಟ್ಟವರಿಗೆ ಕೊಡದೆ ತಾವೇ ಇಟ್ಟುಕೊಂಡಿದ್ದಾರೆ. ಮತ್ತು 2000 ಕ್ಕಿಂತ  ಹೆಚ್ಚು  ಪಿ ಡಿ ಪತ್ರಗಳು ತಹಶೀಲ್ದಾರಿಗೆ ಮಾಹಿತಿ ನೀಡಿದ್ದೆ.ತಮ್ಮ ಕಾರ್ಯಲದಲ್ಲಿ ಇಟ್ಟುಕೊಂಡಿದ್ದಾರೆ ಹಾಗೂ ತನಿಖೆ ಇನ್ನೂ ನಾಳೆನವರಿಗೆ ಮುಂದುವರಿಯಲಿದೆ ಎಂದು ಲೋಕಾಯುಕ್ತ ಸಿಪಿಐ ಆನಂದ ಟೆಕ್ಕನವರ ತಿಳಿಸಿದ್ದಾರೆ.

ಸ್ಕ್ಯಾನಿಂಗ್ ನಿನ್ನೆ ದಾಳಿಯಲ್ಲಿ ಸಂದರ್ಭದಲ್ಲಿ ಸುಮಾರು 50000 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಹಾಗೂ ಕಛೇರಿಯಲ್ಲಿ ಇದ್ದ ಖಾಸಗಿ ವ್ಯಕ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಹಾಗೂಬಾಂಡ್ ರೈಟರಗಳನ್ನು ಇಂದು ತನಿಖೆಗೆ ಒಳಪಡಿಸಲಾಯಿತು. ಕಡತಗಳನ್ನು ಪರೀಶೀಲಿಲನೆ ಮಾಡಲಾಯಿತು.ಹಾಗೂ ದಾಖಲಾತಿಗಳ ಪರೀಶೀಲನೆ ಮುಂದುವರಿಸಿದ್ದು..ಈ ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ ಸಿಪಿಐ ಆನಂದ ಡೊಣ್ಣಿ ಹಾಗೂ ಲೋಕಾಯುಕ್ತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. 


ಸುದ್ದಿ ಓದಿ