ಜಮಖಂಡಿ

ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕಿದೆ: ಶಾಸಕ ಜಗದೀಶ ಗುಡಗುಂಟಿ

ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕಿದೆ: ಶಾಸಕ ಜಗದೀಶ ಗುಡಗುಂಟಿ

ಜಮಖಂಡಿ 03: ಇಂದಿನ ದಿನಮಾನದಲ್ಲಿ ಸಂಶೋಧನೆ, ಸಾಹಿತ್ಯಗಳು ಹುಟ್ಟಿಕೊಳ್ಳವ ಜೊತೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕು. ಜಮಖಂಡಿ ಕನ್ನಡ ಸಂಘವು ಹುಟ್ಟಿ 56 ವರ್ಷಗಳ ಕಾಲ ಪೊರೈಸಿದೆ. ಶ್ರದ್ಧೆ, ಭಕ್ತಿಯಿಂದ ಕನ್ನಡ ಸಂಘವನ್ನು ಕಟ್ಟಿದ್ದಾರೆ. ಇದೊಂದು ಐತಿಹಾಸಿಕ ಸ್ಥಳವಾಗಿದೆಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು. 

ನಗರದ ಹೊಕ್ಕಲ್‌ಬಾವಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭೂವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ. ಕನ್ನಡ ಧ್ವಜಾರೋಹನ ನೆರವೇರಿಸಿ ಮಾತಾನಾಡಿದ ಅವರು, ಜಮಖಂಡಿಯಲ್ಲಿ ಮೊದಲು ಮರಾಠಿಗರ ಸಂಸ್ಥಾನವಾಗಿತ್ತು. ಕೆಲವಂದಿಷ್ಟು ಹಿರಿಯರು ಸೇರಿಕೊಂಡು ಕನ್ನಡವನ್ನು ಕಟ್ಟಲು ಭದ್ರ ಬುನಾದಿಯನ್ನು ಹಾಕಿದ್ದಾರೆ. ಕೃಷಿಯಲ್ಲಿ, ಸಾಹಿತ್ಯದಲ್ಲಿ, ಕ್ರೀಡೆಯಲ್ಲಿ. ಶೈಕ್ಷಣಿಕತೆಯಲ್ಲಿ, ಉದ್ಯೋಗದಲ್ಲಿ ಮುಂದೆ ಸಾಗುವ ಜೊತೆಯಲ್ಲಿ ಕನ್ನಡ ಉಳಿಸಿ ಬೆಳಸಬೇಕಾಗಿದೆ ಎಂದರು.  

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಜಮಖಂಡಿ ಸಂಘವನ್ನು ಕಟ್ಟಿ ಇಂದು 57 ವರ್ಷಗಳು ಕಳೆದಿವೆ. ಕೇವಲ ಮೆರವಣಿಗೆ ಮಾಡುವ ಮೂಲಕ ಆಚರಣೆ ಮಾಡಿದರೆ ಸಾಲದು. ಕನ್ನಡದ ಬಗ್ಗೆ ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ದಿನವಾಗಿದೆ. ಜಮಖಂಡಿಯಲ್ಲಿ ಮೊದಲು ಮರಾಠಿ ಭಾಷೆಯಲ್ಲಿ ವ್ಯಾಪಾರ ವಹಿವಾಟಗಳು. ಮನೆಯ ಖರೀದಿಯ ಕಾಗದ ಪತ್ರಗಳು ಎಲ್ಲವೂ ಮರಾಠಿ ಭಾಷೆಯಲ್ಲಿ ನಡೆಯುತ್ತಿದ್ದವು. ಅದಕ್ಕಾಗಿ ಹಿರಿಯರು ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಸಂಘವನ್ನು ಕಟ್ಟಿ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿದ್ದಾರೆ. ಕನ್ನಡ ಸಂಘಕ್ಕೆ ಒಂದು ಭವನವನ್ನು ನಿರ್ಮಾಣ ಮಾಡಲು ಮನವಿ ಸಲಿಸಲಾಗಿದೆ. ಅದು ಸರಕಾರದ ಮಟ್ಟದಿಂದ ಮತ್ತು ಜಿಲ್ಲಾಡಳಿತದಿಂದ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ನಾನು ಕೂಡಾ ಹೋರಾಟ ಮಾಡುತ್ತೇನೆ ಎಂದರು.  

ಮಾಜಿ ವಿಪ ಸದಸ್ಯ ಜಿ,ಎಸ್,ನ್ಯಾಮಗೌಡ ಮಾತನಾಡಿ, ಕನ್ನಡ ಸಂಘವನ್ನು ಕಟ್ಟಿ ಸುಮಾರು ವರ್ಷಗಳು ಕಳೆದರು ಸಹ ನಮ್ಮ ಸಂಘಕ್ಕೆ ಕನ್ನಡ ರಾಜೋತ್ಸವ ಪ್ರಶಸ್ತಿ ದೊರೆಯದೆ ಇರುವದು ನಮ್ಮ ದುರ್ದೈವದ ಸಂಗತಿಯಾಗಿದೆ. ಪ್ರತಿ ವರ್ಷವೂ ಕೂಡಾ ಮನವಿಯನ್ನು ಸಲಿಸಿದರು ಪ್ರಯೋಜನವಾಗುತ್ತಿಲ್ಲ. ಇಲ್ಲಿರುವ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದ ಪ್ರಶಸ್ತಿ ದೊರೆಯುತ್ತಿಲ್ಲ ಎಂದು ತಮ್ಮ ನೋವವನ್ನು ವ್ಯಕ್ತ ಪಡಿಸಿದರು. 

ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ಮಾತನಾಡಿ, ತಾಯಂದಿರು ಮಕ್ಕಳಿಗೆ ಕನ್ನಡ ನಾಡು,ನುಡಿಯ ಬಗ್ಗೆ ತಿಳುವಳಿಕೆ ನೀಡಬೇಕು. ಕನ್ನಡಕ್ಕಾಗಿ ಸಾಕಷ್ಟು ಮಹನೀಯರು ಹೋರಾಟವನ್ನು ಮಾಡುವ ಮೂಲಕ ಕನ್ನಡ ಭಾಷೆಯನ್ನು ಕಟ್ಟಿ ಇಂದು ಕರ್ನಾಟಕವಾಗಿದೆ, ಇಂದು 50 ವರ್ಷ ಪೂರೈಸಿದೆ. ರಾಜ್ಯ ಸಿಎಂ ಅವರು ಕನ್ನಡದ ಲಾಂಛನವನ್ನು ಬಿಡುಗಡೆ ಮಾಡಿದ್ದಾರೆ. ಸರಕಾರದ ಆದೇಶದಂತೆ ಕಡ್ಡಾಯವಾಗಿ 5 ಕನ್ನಡ ಸಾಹಿತಿಗಳು ಬರೆದ ಹಾಡುಗಳನ್ನು ಹಾಡಬೇಕು. ನ್ಯಾಯಾಲಯದ ಕಲಪಾಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಬೇಕೆಂದು ಮನವಿಯನ್ನು ಸಲಿಸಲಾಗಿದೆ ಎಂದರು. 

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಿಎಸ್‌ಪಿ, ಶಾಂತವೀರ ಈ ಅವರು ಡಾ, ರಾಜಕುಮಾರ ಅವರ ಚಲನಚಿತ್ರದ ಮಯೂರ ಚಿತ್ರದ ಅಭಿನಯ ಮಾಡುವ ಮೂಲಕ ಡಾ. ರಾಜ ಅವರ ಡೈಲಾಗ್ ಹೊಡೆದು ಕನ್ನಡ ಸಂಘದ ವೇದಿಕೆಯನ್ನು ಧೂಳೆಬ್ಬಿಸಿದರು. 

ಅರುಣಕುಮಾರ ಶಹಾ ಮಾತನಾಡಿದರು. ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ, ಬಿಇಒ ಅಶೋಕ ಬಸನ್ನವರ, ಸಿಡಿಪಿಒ ದಾಸರ, ಪಿ.ಬಿ. ಅಜ್ಜನ್ನವರ, ಸಂತೋಷ ತಳಕೇರಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ ಸದಾಶಿವ ಮಕ್ಕೋಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರವಿ ತೇಲಿ ನಿರೂಪಿಸಿದರು.  

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ. ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳು ಸಾಹಿತಿಗಳು, ಹೋರಾಟಗಾರರು, ದಾಸರು, ಸಂತರು,ಶರಣರ ವೇಷಭೂಷನವನ್ನು ಧರಿಸಿದ್ದರು. ಮಹಿಳೆಯರು ಕುಂಭ ಮೇಳವನ್ನು ಹೊತ್ತಿದರು. ವಿವಿಧ ವಾದ್ಯಮೇಳಗಳೊಂದಿಗೆ ನಗರದ ಪ್ರಮೂಕ ರಸ್ತೆಯಲ್ಲಿ ಭವ್ಯವಾದ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸಂಚರಿಸಿ ಬಸವ ಭವನವನ್ನು ತಲುಪಿತು. 


ಸುದ್ದಿ ಓದಿ