ಗ್ರಂಥಾಲಗಳು ಜ್ಞಾನದ ಅಕ್ಷಯ ಭಂಡಾರಗಳಾಗಿವೆ: ಸಂಗಮೇಶ ಉಟಗಿ
ಜಮಖಂಡಿ 13: ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುವಂತೆ, ಪುಸ್ತಕಗಳನ್ನು ಹೊಂದಿರುವ ದೇವಸ್ಥಾನ ಗ್ರಂಥಾಲಯವಾಗಿದ್ದು, ಮನುಷ್ಯನ ಜೀವನ ರೂಪಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಷ್ಟಪಟ್ಟು ಓದಲು ಬರುವವರೆಗೆ ಜ್ಞಾನದ ಹೊಸ ಹೊಳವನ್ನು ನೀಡುವ ಅಕ್ಷಯ ಭಂಡಾರಗಳಾಗಿವೆಂದು ಶಿಕ್ಷಕ ಸಂಗಮೇಶ ಉಟಗಿ ಹೇಳಿದರು.
ತಾಲೂಕಿನ ಹುನ್ನೂರು ಗ್ರಾಮದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಡಾ.ಎಸ್.ಆರ್.ರಂಗನಾಥನ್ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಮೊಬೈಲ್ದಿಂದ ದೂರ ಉಳಿದು ಗ್ರಂಥಾಲಯದ ಕಡೆ ಮುಖ ಮಾಡಬೇಕು. ಗ್ರಂಥಾಲಯದಲ್ಲಿರುವ ಪುಸ್ತಕಗಳು, ದೈನಂದಿನ ಪತ್ರಿಕೆಗಳು ಓದಿ ಜ್ಞಾನವನ್ನು ಹೆಚ್ಚಿಸಿ ಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಜನವಾಡ, ಉಪಾಧ್ಯಕ್ಷೆ ಅನ್ನಪೂರ್ಣ ಯಾದವಾಡ, ಸದಸ್ಯ ಗೀರೀಶ ಮೈಗೂರ, ದಯಾನಂದ ದೇಸಾಯಿ, ಪಿಡಿಓ ಮಲ್ಲಪ್ಪ ರೂಗಿ, ಗ್ರಂಥಪಾಲಕ ಶಂಕರ್ ಚಿಂಚಖಂಡಿ ಅನೇಕರು ಇದ್ದರು.
ಪೋಟೋ : ತಾಲೂಕಿನ ಹುನ್ನೂರು ಗ್ರಾಮದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಡಾ.ಎಸ್.ಆರ್.ರಂಗನಾಥನ್ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆ ಆಚರಣೆ ಮಾಡಲಾಯಿತು,