ಯುವಕರು ರಕ್ತದಾನ ಮಾಡಲು ಮುಂದೆ ಬರಲಿ: ಬಳ್ಳೂರ
ಯರಗಟ್ಟಿ 19: ರಕ್ತದಾನದಿಂದ ಒಬ್ಬರ ಪ್ರಾಣ ಉಳಿಯುತ್ತದೆ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಮುಖ್ಯ ವೈಧ್ಯಾಧಿಕಾರಿ ಡಾ.ಭುವನೇಶ್ವರ ಬಳ್ಳೂರ ಹೇಳಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ಈ ಶಿಬಿರದಲ್ಲಿ 55 ಜನರು ರಕ್ತದಾನ ಮಾಡಲು ಮುಂದಾಗಿರುವುದು ಸಂತಸ ಎಂದರು.
ಈ ಸಂಧರ್ಭದಲ್ಲಿ ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಡಾ.ಲತಾ, ಡಾ.ಸ್ವರೂಪಾ ಬಿರಾದಾರ, ಡಾ.ಭಗವಂತ ಪಾಟೀಲ, ಪ್ರಕಾಶ ಮಾಂಗ, ಎಮ್.ಟಿ.ಕುಂಬಾರ, ಮಹಾಂತೇಶ ಕತ್ತಿ, ಮಹಾಂತೇಶ ಹಿರೇಮಠ, ಅಶೋಕ ನೀಲನ್ನವರ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.