ಮಹಾರಾಣಾ ಪ್ರತಾಪ್ಸಿಂಹ ಜೀವನ ಚರಿತ್ರೆಯನ್ನು ಯುವ ಜನಾಂಗ ತಿಳಿದುಕೊಳ್ಳಲಿ: ಸಾಳುಂಕೆ
ಇಂಡಿ: ಮಹಾರಾಣಾ ಪ್ರತಾಪ್ಸಿಂಹ ಸ್ವದೇಶ, ಸ್ವಧರ್ಮ, ಸಂಸ್ಕೃತಿ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಇವುಗಳನ್ನು ರಕ್ಷಣೆ ಮಾಡಲು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ್ದಾರೆ. ಹಿಂದೂ ಪರಂಪರೆಯಲ್ಲಿ ಇವರ ಹೆಸರು ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ ಹೇಳಿದರು.
ಸೋಮವಾರ ಪಟ್ಟಣದ ವೀರಮಹಾರಾಣಾ ಪ್ರತಾಪ್ ಸಿಂಹರ ವೃತ್ತದಲ್ಲಿ ಮಹಾರಾಣಾ ಪ್ರತಾಪ್ ಸಿಂಹರ 482ನೇ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಾವಿರಾರು ಮುಸಲ್ಮಾನ ಸೈನಿಕರು ಸುತ್ತುವರಿದಿರುವ ಭದ್ರಕೋಟೆಯೊಳಗೆ ನುಗ್ಗಿ ನೇರವಾಗಿ ಸೇನಾಪತಿಯ ಮೇಲೆಯೇ ಹಲ್ಲೆ ಮಾಡುವ ರಾಣಾ ಪ್ರತಾಪಸಿಂಹರ ಶೌರ್ಯವು ಇಂದಿಗೂ ಪ್ರತಿಯೊಬ್ಬ ಹಿಂದೂವನ್ನು ರೋಮಾಂಚನಗೊಳಿಸುತ್ತದೆ. ಧರ್ಮಕ್ಕಾಗಿ ಪ್ರಾಣವನ್ನು ಪಣಕ್ಕಿಡಲು ಕಲಿಸುತ್ತದೆ ಮಹಾರಾಣಾ ಪ್ರತಾಪ ಸಿಂಹರ ಜೀವನ ಚರಿತ್ರೆಯನ್ನು ಇಂದಿನ ಯುವ ಜನಾಂಗ ಓದಿ ತಿಳಿದುಕೊಳ್ಳಬೇಕು ಎಂದರು.
ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಧೈರ್ಯ ಹಾಗೂ ಶೂರತನಕ್ಕೆ ಹೆಸರಾಗಿದ್ದ ರಾಷ್ಟ್ರವೀರ ಮಹಾರಾಣಾ ಪ್ರತಾಪ್ ಸಿಂಗ್ ಇಂದಿನ ಯುವಕರಿಗೆ ಮಾದರಿ ಎಂದರು.
ರಜಪೂತ ಸಮಾಜದ ಮುಖಂಡ ರಾಮಸಿಂಗ್ ಕನ್ನೊಳ್ಳಿ, ಅನೀಲಗೌಡ ಬಿರಾದಾರ, ದಶರಥ ಕೋರೆ, ಸತೀಶ ಕುಂಬಾರ, ಸೋಮು ನಿಂಬರಗಿಮಠ, ಯಲ್ಲಪ್ಪ ಹದರಿ, ಭೀಮಾಶಂಕರ ಮೂರಮನ, ಸಂಜು ರಾಠೋಡ, ಲಡುಮಾ ಓರಾಂಗಬಾದ, ಧರ್ಮರಾಜ ವಾಲಿಕಾರ, ಅರವಿಂದ ರಾಠೋಡ, ವಿಜು ರಾಠೋಡ, ಶಾಂತಿಲಾಲ ರಾಠೋಡ, ಶಂಕರ ಹಲವಾಯಿ, ಶ್ರೀಧರ ಕ್ಷತ್ರಿ, ಸಂಜು ದಶವಂತ, ಶಾಂತು ಕಂಬಾರ ಸೇರಿದಂತೆ ಅನೇಕರು ಇದ್ದರು.