ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ಶಾಸಕ ರಾಜು ಕಾಗೆ
ಉಗಾರ ಖುರ್ದ ಪಟ್ಟಣದಲ್ಲಿ ರೂ. 1.73 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಕಾಗವಾಡ 26: ಎಲ್ಲ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ, ಸ್ಥಳೀಯ ಜನಪತ್ರಿನಿಧಿಗಳು ಕಾಮಗಾರಿಗಳ ಗುಣಮಟ್ಟವನ್ನು ಕಾಮಗಾರಿ ನಡೆಯುವಾಗ ಪರೀಶೀಲನೆ ಮಾಡಬೇಕೆಂದು ಶಾಸಕ ರಾಜು ಕಾಗೆ ಜನಪ್ರತಿನಿಧಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ಅವರು ಬುಧವಾರ ದಿ. 26 ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಇಲಾಖೆಯಡಿ 1.73 ಕೋಟಿ ರೂಪಾಯಿ ವೆಚ್ಚದ 7 ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು.
ಬೆಂಗಳೂರು ಮಟ್ಟದಲ್ಲಿ ಇಲಾಖಾವಾರು ಅನುದಾನಗಳನ್ನು ತಂದು ಕ್ಷೇತ್ರದ ತುಂಬೆಲ್ಲ ಅನುಷ್ಠಾನಗೊಳಿಸುತ್ತಿದ್ದೇನೆ. ಸ್ಥಳೀಯ ಜನಪ್ರತಿನಿಧಿಗಳು ಕಾಮಗಾರಿಗಳ ಬಗ್ಗೆ ನಿಗಾವಹಿಸಬೇಕು. ಗುಣಮಟ್ಟ ಪರೀಶೀಲಿಸಿ, ಕಳಪೆಯಾದರೆ ಸರಿಪಡಿಸಬೇಕು. ಮತ್ತು ನಮ್ಮ ಗಮನಕ್ಕೆ ತರಬೇಕು. ತಾವು ಈ ಕುರಿತು ನಿಗಾ ವಹಿಸದಿದೇ ಹೋದರೇ ಕಾಮಗಾರಿಗಳು ಕಳಪೆಯಾಗುವ ಆತಂಕವಿರುತ್ತದೆ ಎಂದರು. ಅಲ್ಪಸಂಖ್ಯಾತರ ಇಲಾಖೆಯಡಿ, ಜೈನ್, ಮುಸ್ಲಿಂ, ಸಮಾಜದ ಬಾಂಧವರು ವಾಸ ಮಾಡುವ ಉಗಾರ ಖುರ್ದ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಸುಸಜ್ಜಿತವಾದ ಸಿಮೆಂಟ್ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಜುಗೂಳ, ಶಿರಗುಪ್ಪಿ, ಗುಂಡೇವಾಡಿ, ಪಾರ್ಥನಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿ, ಅನುದಾನ ತರುತ್ತೇನೆ. ಜೊತೆಗೆ ಎಸ್ಸಿ/ಎಸ್ಟಿ ವಾರ್ಡಗಳಿಗೆ ಹಾಗೂ ಇನ್ನುಳಿದ ಸಮುದಾಯದವರಿಗೂ ವಿಶೇಷ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಗುರಿ ಹೊಂದಿದ್ದೇನೆ ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಸುನೀಲ ಬಬಲಾದಿ, ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೊಡೆ, ಮುಖಂಡರಾದ ಡಾ. ಅರವಿಂದರಾವ ಕಾರ್ಚಿ, ಮಹಾದೇವ ವಡಗಾಂವೆ, ವಿನಾಯಕ ಕಾಂಬಳೆ, ವೀರಭದ್ರ ಕಟಗೇರಿ, ಬಾಳಾಸಾಬ ವಿಸಾಪುರೆ, ಸುರೇಶ ವಾಘಮೊಡೆ, ಬಾಳಕೃಷ್ಣ ಪಾಟೀಲ, ಸತೀಶ ಜಗತಾಪ, ಹಾರುಣ ಮುಲ್ಲಾ, ಗಂಗಾಧರ ಜೋರಾಪುರ, ಸರೋಜನಿ ಕಿತ್ತೂರೆ, ಮದನ ದೇಶಿಂಗೆ, ಸಂದೀಪ ಖರಾಡೆ, ಬಸವರಾಜ ಪಾಟೀಲ, ರೋಹಣ ನಾಯಿಕ, ಬಸವರಾಜ ಸಾಂಗಾಂವೆ, ಸಂದೀಪ ಚಿಂಚವಾಡೆ, ಸಚೀನ ಜಗತಾಪ, ಅಮರ ಜಗತಾಪ, ರಾಜು ಪೂಜಾರಿ, ಅಶೋಕ ಕಾಂಬಳೆ, ಫಿರೋಜ ಸನದಿ, ರಾಘವೇಂದ್ರ ಜಾಯಗೊಂಡೆ, ರಾಜೇಶ ದಾನೊಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.