ಸಂಘಟನೆಗಳು ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡಲಿ: ಡಾ.ರಾಜೇಂದ್ರ ಸಣ್ಣಕ್ಕಿ
ಬೆಟಗೇರಿ 12: ಸಂಘಟನೆಗಳು ಹೆಸರಿಗೆ ಮಾತ್ರ ಸಂಘಟನೆಗಳಾಗಿ ಇರಬಾರದು, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಗೋಕಾಕ ತಾಲೂಕಿನ ಕೌಜಲಗಿ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಇತ್ತೀಚೆೆಗೆ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೂಡಲಗಿ ತಾಲೂಕಾ ಘಟಕ ಮತ್ತು ಜಿಲ್ಲಾ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗ ಸನ್ಮಾನ ನೆರವೇರಿಸಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುವ ಸೇವೆ ಅಗ್ರಗಣ್ಯವಾಗಿದೆ. ಶೈಕ್ಷಣಿಕ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಸಿ, ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದರು.
ಮೂಡಲಗಿ ತಾಲೂಕಾ ಘಟಕದ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಮ್.ಜಿ.ಮಾವಿನಗಿಡದ, ಗೌರವಾಧ್ಯಕ್ಷರಾದ ಎಲ್.ಎಮ್.ಬಡಕಲ್, ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘಕ್ಕೆ ಸದಸ್ಯರಾಗಿ ಆಯ್ಕೆಯಾದ ಎಮ್.ವೈ.ಸಣ್ಣಕ್ಕಿ, ಡಿ.ಜೆ ಕಲಾರಕೊಪ್ಪ, ಎಸ್.ಎಸ್.ಕುರನಗಿ ಹಾಗೂ ಕೌಜಲಗಿ ಗ್ರಾಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಉದ್ದಪ್ಪನವರ, ಜಿಲ್ಲಾ ಸಂಘಕ್ಕೆ ಸದಸ್ಯರಾಗಿ ಆಯ್ಕೆಯಾದ ಎಸ್.ಎನ್.ಪಾಟೀಲ, ಎಸ್.ಎಮ್.ದಬಾಡಿ ಅವರನ್ನು ಕೌಜಲಗಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಸತ್ಕರಿಸಲಾಯಿತು.
ಎಸ್.ಎಮ್. ಲೋಕನ್ನವರ, ಎಂ.ಆರ್.ಭೋವಿ, ಎ.ಎ.ಪರಸನ್ನವರ, ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ ಉದ್ದಪ್ಪನ್ನವರ, ಎಸ್.ಬಿ.ಹಳ್ಳೂರ, ನೀಲಪ್ಪ ಕೇವಟಿ, ಕೆ.ಆರ್.ಅಜ್ಜಪ್ಪನ್ನವರ, ಬಿ.ಬಿ.ಕೇವಟಿ, ವಿ.ಐ.ಮಿಲ್ಲಾನಟ್ಟಿ, ಮಹಾದೇವ ಶಿವಾಪುರ, ಎ.ಎಸ್.ದಳವಾಯಿ, ಮುಸ್ತಾಕ್ ಅಹ್ಮದ, ಪಿ.ವೈ.ಸಾತಗುಣಿ, ಶಿಕ್ಷಕರು, ಸಂಘದ ಪದಾಧಿಕಾರಿಗಳು, ಗಣ್ಯರು, ಸ್ಥಳೀಯರು ಇದ್ದರು.