ನಗರಸಭೆ ಮತ್ತೊಂದು ಚಿರಶಾಂತಿ ವಾಹನದ ವ್ಯವಸ್ಥೆ ಮಾಡಲಿ
ಲೋಕದರ್ಶನ ವರದಿ,
ಜಮಖಂಡಿ: 12: ನಗರದ ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆಯ (ಚಿರಶಾಂತಿ ವಾಹನ) ಶವ ಸಾಗಿಸುವ ವಾಹನ 3-4 ವರ್ಷಗಳಿಂದ ಕೆಟ್ಟು ನಿಂತಿದ್ದು, ಬಡವರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಲವಾರು ಬಾರಿ ದುರಸ್ತಿ ಮಾಡಿಸಿದರೂ ಕೆಟ್ಟು ಹೋಗುತ್ತಿದ್ದು, ರೀಪೇರಿ ಮಾಡಲು ಆಗುವದಿಲ್ಲ ಎಂದಿದ್ದಾರೆ.
ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತೊಂದು ವಾಹನದ ವ್ಯವಸ್ಥೆ ಮಾಡಬೇಕು. ನಗರಸಭೆಯಲ್ಲಿ ಹಲವಾರು ಟಾಟಾ ಎಸ್ ವಾಹನಗಳು ಮತ್ತು ಕಸದ ಟ್ಯಾಕ್ಟರಗಳು ಕೆಟ್ಟು ನಿಂತಿವೆ. ದುರಸ್ತಿ ಮಾಡಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಸಬೇಕು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ತಾಲೂಕಾ ಜನತಾದಳ ಪಕ್ಷದ ತಾಲೂಕಾ ನಗರ ಘಟಕದ ಅಧ್ಯಕ್ಷರು ರಾಜೇಸಾಬ ಮಸಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.