ಸಿರುಗುಪ್ಪ

‘ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆಗೆ ಜನಪ್ರತಿನಿಧಿಗಳು ಮುಂದಾಗಲಿ'

‘ಹಿರಿಯ ನಾಗರಿಕರ ಹಕ್ಕುಗಳ ಸಂರಕ್ಷಣೆಗೆ ಜನಪ್ರತಿನಿಧಿಗಳು ಮುಂದಾಗಲಿ'

ಸಿರುಗುಪ್ಪ 21: ರೈಲು ಮತ್ತು ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ವೆಚ್ಚದಲ್ಲಿ ರಿಯಾಯಿತಿ ನೀಡಲಾಗುತ್ತಿತ್ತು ಇದು ಬಸ್‌ಗಳಲ್ಲಿ ಈಗಲೂ ಮುಂದುವರಿದಿದೆ ಆದರೆ ರೈಲ್ವೆ ಇಲಾಖೆಯು ಕೊರೊನಾ ಹೆಸರಿನಲ್ಲಿ ಈಗ ಈ ಸೌಲಭ್ಯವನ್ನು ಸ್ಥಗಿತಗೊಳಿಸಿದಂತಿದೆ ಎಂದು ಹಿರಿಯ ನಾಗರಿಕ ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ ಹೇಳಿದರು. 

ಈ ಮೊದಲು ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವಾಗ ಅರುವತ್ತು ವರ್ಷಕ್ಕಿಂತ ಮೇಲಿನ ವಯಸ್ಸು ದಾಖಲಿ ಸುತ್ತಿದ್ದಂತೆ ರಿಯಾಯಿತಿ ತೋರಿಸಲಾಗುತ್ತಿದೆ. ಆ ನಂತರ ಅದರಲ್ಲಿ ಬದಲಾವಣೆ ಮಾಡಿ ಹಿರಿಯ ನಾಗರಿಕರ ರಿಯಾಯಿತಿಯನ್ನು ಬಯಸುತ್ತೀರಾ ಎಂಬ ಪ್ರಶ್ನೆಯನ್ನು ಸೇರಿಸಲಾಯಿತು ಹೌದು ಎಂದು ನಮೂದಿಸಿದವರಿಗೆ  ಮಾತ್ರ ದರದಲ್ಲಿ ರಿಯಾಯಿತಿ ನೀಡಲಾಗುತ್ತಿತ್ತು ಆದರೆ ಪ್ರಸ್ತುತ ಆನ್ ಲೈನ್ ಮೂಲಕ ಕಾಯ್ದಿ ರಿಸ ಹೊರಟರೆ ರಿಯಾಯಿತಿ ಎಂಬ ಪದವನ್ನೇ ತೆಗೆಯಲಾಗಿದೆ ರೈಲು ನಿಲ್ದಾಣಕ್ಕೆ ಹೋಗಿ ಕಾಯ್ದಿರಿಸಿದ್ದರೆ ಮಾತ್ರ ರಿಯಾಯಿತಿ ಎಂದು ತೋರಿಸುತ್ತದೆ ಎಂದು ಅಬ್ದುಲ್ ನಬಿ ತಿಳಿಸಿದರು.   

ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ, ಮೊಹಮ್ಮದ್  ಖಲೀಲ್, ಹಾಜಿ ಹಂಡಿ ಹುಸೇನ್ ಬಾಷಾ, ಬಿ.ಕೆ ಅಲ್ಲಾಭಕ್ಷಿ, ಸಾಮಾಜಿಕ ಕಾರ್ಯಕರ್ತರಾದ ಹಾಜಿ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ  ಅವರು ಮಾತನಾಡಿ ವಾಸ್ತವ ಎಂದರೆ ರೈಲು ನಿಲ್ದಾಣಕ್ಕೆ ಹೋಗಿ ವಿಚಾರಿಸಿದರೂ ಕರೋನಾ ಕಾರಣಕ್ಕೆ ಹಿರಿಯ ನಾಗರಿಕರ ರಿಯಾಯತಿ ತೆಗೆಯಲಾಗಿದೆ ಹಾಗಾಗಿ ಅವರು ಪೂರ್ಣ ವೆಚ್ಚವನ್ನು ಪಾವತಿಸಿ ಕಾಯ್ದಿರಿಸಬೇಕು ಎಂಬ ಉತ್ತರ ಬಂದಿದೆ .ರಿಯಾಯಿತಿ ತೆಗೆದಿದ್ದೀರಾ ಎಂದು ಪ್ರಶ್ನಿಸಿದರೆ ಸದ್ಯಕ್ಕೆ ಇಲ್ಲ ಮುಂದೆ ಬದಲಾಗಬಹುದು ಎಂಬ ಉತ್ತರ ನೀಡುತ್ತಾರೆ ಇದೆಲ್ಲದರ ಅರ್ಥವೆಂದರೆ ಎಲ್ಲಾ ರೀತಿಯ ಸಬ್ಸಿಡಿ ರಿಯಾಯಿತಿಗಳನ್ನು ತೆಗೆಯುವುದಾಗಿದೆ ಈ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ವಿಶೇಷವಾಗಿ ರಾಜ್ಯದ ಲೋಕಸಭಾ ಸದಸ್ಯ ರೂ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರು ಧ್ವನಿ ಎತ್ತಿ ಹಿರಿಯ ನಾಗರಿಕರ ಹಕ್ಕುಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಈ ಸಲಹೆ ನೀಡಿದ್ದಾರೆ. 


ಸುದ್ದಿ ಓದಿ