ಸಿಂಧಗಿ

ಕಿತ್ತೂರು ರಾಣಿ ಚೆನ್ನಮ್ಮನ ವೀರಗಾಥೆಯನ್ನು ಮಕ್ಕಳಿಗೆ ತಿಳಿಸೋಣ: ಭೂಸನೂರ

ಕಿತ್ತೂರು ರಾಣಿ ಚೆನ್ನಮ್ಮನ ವೀರಗಾಥೆಯನ್ನು ಮಕ್ಕಳಿಗೆ ತಿಳಿಸೋಣ: ಭೂಸನೂರ
ಕಿತ್ತೂರ ರಾಣಿ ಚೆನ್ನಮ್ಮನ ಭಾವಚಿತ್ರಕ್ಕೆ ಪೂಜೆ ನೇರವೆರಿಸಿ ಶಾಸಕ ರಮೇಶ ಭೂಸನೂರ ಮಾತನಾಡಿದರು

ಸಿಂದಗಿ: ಕಿತ್ತೂರು ರಾಣಿ ಚೆನ್ನಮ್ಮನ ವೀರಗಾಥೆಯನ್ನು ನಮ್ಮ ಮಕ್ಕಳಿಗೆ ತಿಳಿಸೋಣ, ನಮ್ಮ ನಾಡಿನ, ನಮ್ಮ ದೇಶದ ವೀರಪರಂಪರೆಯ ಕಥೆಯನ್ನು, ವೀರವನಿತೆಯರ ಜೀವನಗಾಥೆಗಳನ್ನು ಮುಂದಿನ ತಲೆಮಾರುಗಳಿಗೆ ದಾಟಿಸೋಣ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

             ನಗರದ ತಾಲೂಕಾಡಿಳಿತ ಭವನದಲ್ಲಿ ರವಿವಾರದಂದು ಹಮ್ಮಿಕೊಂಡ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯ ಭಾವಚಿತ್ರಕ್ಕೆ ಪೂಜೆ ನೇರವೆರಿಸಿ ಮಾತನಾಡಿದಡಿದರು.

         ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹಾಗೂ ಈ ವೇಳೆ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು.

        ಪೋಟೋ ಪೂಜೆಯ ನಂತರ ತಾಲೂಕು ಪಂಚಮಸಾಲಿ ಸಂಘದ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬೈಕ್ ರ್ಯಾಲಿ ಚನ್ನಮ್ಮ ವೃತ್ತಕ್ಕೆ ತಲುಪಿತು. 

         ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಸಾಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ, ಪ್ರಧಾನ ಕಾರ್ಯದಶರ್ಿ ಆನಂದ ಶಾಬಾದಿ, ನೌಕರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಸಮಾಜದ ಪ್ರಮುಖರಾದ ಸಿದ್ದರಾಮ ಪಾಟೀಲ್ ಸೋಮನಗೌಡ ಬಿರಾದರ್, ಸಂಗನಗೌಡ ಪಾಟೀಲ್, ಚಂದ್ರಶೇಖರ್ ನಾಗರಬೆಟ್ಟ, ಮಲ್ಲನಗೌಡ ಪಾಟೀಲ್, ರವಿ ಬಿರಾದಾರ್, ಚನ್ನು ಹೊಡ್ಲಾ, ರವಿ ದೇಸಾಯಿ, ಬಸವರಾಜ್ ಬಾಗೆವಾಡಿ, ವಿಶ್ವನಾಥ್ ಕುರುಡೆ, ಗುರಣ್ಣ ಬಸರಕೋಡ, ಎಸ್ ಬಿ ಪಾಟೀಲ್, ಶಾಂತೇಶ ನಾವದಗಿ, ಕುಮಾರ ದೇಸಾಯಿ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಪಂಚಮಸಾಲಿ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ