ಜಮಖಂಡಿ

ಮತದಾನ ಜಾಗೃತಿ ಅಭಿಯಾನಕ್ಕೆ ಲಕ್ಷ್ಮೀ ಅಸ್ಟಗಿ ಚಾಲನೆ

ಮತದಾನ ಜಾಗೃತಿ ಅಭಿಯಾನಕ್ಕೆ ಲಕ್ಷ್ಮೀ ಅಸ್ಟಗಿ ಚಾಲನೆ

 ಜಮಖಂಡಿ 06: ನಗರದ ಜನತೆಯಲ್ಲಿ ಮತದಾನದಿಂದ ಯಾವ ವ್ಯಕ್ತಿಯು ಕೂಡಾ ವಂಚಿತರಾಗದೆ. ಮತದಾನದಿಂದ ದೂರ ಉಳಿಯಬಾರದು ಎಲ್ಲರು ಕೂಡಾ ತಮ್ಮ ಮತವನ್ನು ಚಲಾಯಿಸಬೇಕೆಂದು ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಕರೆ ನೀಡಿದರು. 

ನಗರಸಭೆ ಸಹಯೋಗದಲ್ಲಿ ನಡೆದ ಮತದಾನ ಜಾಗೃತಿ ಅಭಿಯಾನಕ್ಕೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳಿಂದ ನಗರದ ಪ್ರಮುಖ ರಸ್ತೆಯಲ್ಲಿ ವಿವಿಧ ಬಣ್ಣಗಳ ರಂಗೋಲಿಯಿಂದ ಚಿತ್ರಗಳನ್ನು ಬಿಡಿಸುವ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಪರಿಸರ ಅಭಿಯಂತರು ಕುಸಮ್ಮಾ ಸೊಪಲ್ಡ್‌, ಕಂದಾಯ ಅಧಿಕಾರಿ ಅಸ್ಲಂ ಮುಜಾವರ, ಹಿರಿಯ ಆರೋಗ್ಯ ನೀರೀಕ್ಷಕರು ವಿಜಕುಮಾರ ವಂದಾಲ,  ಮ್ಯಾನೇಜರ್ ಯಲ್ಲಪ್ಪ ಬಿದರಿ, ವಿನಾಯಕ ನಡೋಣಿ, ಮಂಜುನಾಥ ಹಡಪದ, ಸೋಮನಾಥ ದೇವರಮನಿ, ರೂಪೇಶ ಘಾಟಗೆ, ಶಶಿಕಲಾ ಮಾಳಿ ಹಾಗೂ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ