ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಹಾಗೂ ಯುಕೆಜಿ: ಅಂಗನವಾಡಿ ಕಾರ್ಯಕರ್ತಿಯರು ಬೇಜಾರು

ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಹಾಗೂ ಯುಕೆಜಿ: ಅಂಗನವಾಡಿ ಕಾರ್ಯಕರ್ತಿಯರು ಬೇಜಾರು LKG and UKG in Karnataka government schools: Anganwadi workers upset


ಲೋಕದರ್ಶನ ವರದಿ 

 ಇಂಡಿ  05: ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ  ಹಾಗೂ ಯುಕೆಜಿ ತರಗತಿಗಳನ್ನು ಪ್ರಾರಂಭಿಸಿರುವುದು ಮತ್ತು ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ವಿಷಯವು ಪ್ರಸ್ತುತ ಪ್ರಮುಖ ಚರ್ಚೆಯಾಗಿದೆ.ಇದರಿಂದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳು ಬರುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕ ಸಮಿತಿ ಇಂಡಿ ಹಾಗೂ ಸಿಐಟಿಯು ಸಂಘಟನೆಯ ಇಂಡಿ ಘಟಕ ಅಧ್ಯಕ್ಷರಾದ ಶ್ರೀಮತಿ ಭಾರತಿ ವಾಲಿ ಅವರ ನೇತೃತ್ವದಲ್ಲಿ ಇಂದು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಇವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ ವಾಲಿ ಅವರು ಅಂಗನವಾಡಿಗಳ ಮೇಲಾದ ಪರಿಣಾಮಗಳುಮಕ್ಕಳ ಸಂಖ್ಯೆಯಲ್ಲಿ ಇಳಿತ: 3 ರಿಂದ 6 ವರ್ಷದ ಮಕ್ಕಳು ನೇರವಾಗಿ ಸರ್ಕಾರಿ ಶಾಲೆಗಳ ಐಏಉ/ಗಏಉಗೆ ದಾಖಲಾಗುತ್ತಿರುವುದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ.ಅಂಗನವಾಡಿ ಕಾರ್ಯಕರ್ತೆಯರು ಆತಂಕಕ್ಕೆ ಒಳಗಾಗಿದ್ದಾರೆ.  

ಮಕ್ಕಳ ಸಂಖ್ಯೆ ಕಡಿಮೆಯಾದರೆ ಅಂಗನವಾಡಿ ಕೇಂದ್ರಗಳು ಮುಚ್ಚಲ್ಪಡಬಹುದು ಅಥವಾ ತಮ್ಮ ಉದ್ಯೋಗಕ್ಕೆ ಭಂಗ ಬರಬಹುದು ಎಂಬ ಭಯ ಭೀತಿಯಲ್ಲಿ ನಮ್ಮ ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ.ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ನಡುವೆ ಸಮನ್ವಯ ಸಾಧಿಸಿ, ಎರಡೂ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ಮಕ್ಕಳ ಪೌಷ್ಟಿಕತೆ ಮತ್ತು ಪ್ರಾಥಮಿಕ ಶಿಕ್ಷಣ ಎರಡಕ್ಕೂ ಧಕ್ಕೆಯಾಗದಂತೆ ನೋಡುವುದು  ಅಗತ್ಯವಿದೆ ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಗೀರಿಜಾ ಸಕ್ಕ್ರಿ ರೇಖಾ ಕಬಾಡೆ ಶೇಂಕ್ರೇಮ್ಮ ಪುಟಾಣಿ ಸುನಂದಾ ಶಿವೂರ ರೇಣುಕಾ ವನಂಜಿಕರ ಬುದ್ದವ್ವ ಬ್ಯಾಕೊಡ ಸಾವಿತ್ರಿ ಬಿರಾದಾರ ಯಲ್ಲಮ್ಮ ಮಡ್ಡಿಮನಿ ಸವಿತಾ ನಾಟಿಕಾರ ಆರ್ ಎಲ್ ನಾಟಿಕಾರ ಮಿನಾಕ್ಷೀ ಚವ್ಹಾಣ ದಾನಮ್ಮ ಮಸೂತಿ ರೇಣುಕಾ ಮ್ಯಾಗೇರಿ ರೇಖಾ ದೂಳೆ ರೇಣುಕಾ ನಾರಾಯಣಪೂರ ಕಲಾವತಿ ಮಲಗೊಂಡ ಸುಜಾತಾ ತಿಕೋಟಾ ಸಾವಿತ್ರಿ ಜೇವೂರ ದೀಪಾ ಚಿಂಚ್ಚೊಳಿ ಶೃತಿ ಮಂಗಳೂರ ಸ್ವಾತಿ ಪಾಟೀಲ ಎಲ್ ಎಂ ಆಳೂರ ಬಿ ಎಂ ಬೆಣ್ಣೆಸೂರ ಕವಿತಾ ತೋರವಿ ಅಲ್ಪಯಾ ಮುಜಾವಾರ ಭಾಗಮ್ಮ ಕಟಕದೊಂಡ ಸೌಂದರ್ಯ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.