ಕ್ಷತ್ರಿಯ ಸಮುದಾಯ ಒಂದಾಗಲು ಕೃಷ್ಣಮೂತರ್ಿ ಮನವಿ

ಕ್ಷತ್ರಿಯ ಸಮುದಾಯ ಒಂದಾಗಲು ಕೃಷ್ಣಮೂತರ್ಿ ಮನವಿ

ಲೋಕದರ್ಶನ ವರದಿ

ಬಳ್ಳಾರಿ16: ನಾನಾ ಕಾರಣಗಳಿಂದ ಹರಿದು ಹಂಚಿಹೋಗಿರುವ ಕ್ಷತ್ರಿಯ ಸಮುದಾಯಗಳು ಇಂದು ಸಾಮಾಜಿಕವಾಗಿ ಒಗ್ಗೂಡುವ ಮೂಲಕ ಸಂಘಟಿತರಾಗಬೇಕಿದೆ ಎಂದು ಎಸ್ಎಸ್ಕೆ ಸಮಾಜದ ರಾಜ್ಯ ಜಂಟಿ ಕಾರ್ಯದಶರ್ಿ ಕೃಷ್ಣಮೂತರ್ಿ ಟಿ.ರಂಗ್ರೇಜಿ ಮನವಿ ಮಾಡಿದರು.

  ಸಿರುಗುಪ್ಪ ರಸ್ತೆಯ ಅಂಬಾಭವಾನಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಪರಸ್ಪರ ಶುಭಾಶಯ ಕೋರುವ ಸಲುವಾಗಿ ಆಯೋಜಿಸಿದ್ದ ಕನರ್ಾಟಕ ಕ್ಷತ್ರಿಯ ಒಕ್ಕೂಟದ ಸಭೆಯಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದರು.

    ಬಳ್ಳಾರಿ ನಗರವೊಂದರಲ್ಲಿಯೇ ಕ್ಷತ್ರಿಯ ಒಕ್ಕೂಟದ 11 ಸಮುದಾಯದ 1 ಲಕ್ಷ ಜನರಿದ್ದಾರೆ. ಆಥರ್ಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಸಮುದಾಯ ಇಂದು ಒಗ್ಗೂಡಬೇಕಾಗಿದೆ. ಇನ್ನೂ 15 ದಿವಸದೊಳಗೆ ಕನರ್ಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಮಟ್ಟದ ವೇದಿಕೆ ನಿಮರ್ಾಣವಾಗಬೇಕು. ಅದಕ್ಕಾಗಿ ಸಮುದಾಯಗಳ ಚಿಂತಕರು ಪರಸ್ಪರ ಚಚರ್ಿಸಿ ಒಂದು ನಿಧರ್ಾರಕ್ಕೆ ಬರಬೇಕೆಂದರು. ಕ್ಷತ್ರಿಯರ ಯಾವುದೇ ಸಭೆ, ಸಮಾರಂಭಗಳಿದ್ದಲ್ಲಿ ಎಲ್ಲರೂ ಭಾಗವಹಿಸಬೇಕು. ಮುಂಬರುವ ಶಿವಾಜಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಾಚರ್್ ನಲ್ಲಿ ರಾಜ್ಯಾದ್ಯಂತ ಸಂಚರಿಸುವ ಕ್ಷತ್ರಿಯ ಮಹಾರಥ ಯಾತ್ರೆ ಯಶಸ್ವಿಗೊಳಿಸುವ ಸಭೆಗಳನ್ನು ಆಯೋಜಿಸಬೇಕೆಂದು ಹೇಳಿದರು.

        ಕ್ಷತ್ರಿಯ ಒಕ್ಕೂಟದ ಮುಖಂಡರಾದ ನಾಗರಾಜರಾವ್ ಚವ್ಹಾಣ್, ರುದ್ರೋಜಿರಾವ್ ಸಿಂಧೆ, ವಿ.ಎನ್.ರಾಜ್, , ಕೆ.ಎಲ್ಲಪ್ಪ, ಕೃಷ್ಣೋಜಿರಾವ್ ಗಾಯಕವಾಡ, ರಾಜಶೇಖರ್ ಜುಜಾರೆ ಇನ್ನಿತರರು ಮಾತನಾಡಿದರು. ಈ ಸಂದರ್ಭಧಲ್ಲಿ ಕ್ಷತ್ರಿಯ ಒಕ್ಕೂಟದ ವಿವಿಧ ಸಮುದಾಯಗಳ ಮುಖಂಡರಾದ ಶ್ರೀಧರ್ ಸಫಾರೆ, ಬನ್ಸಿಲಾಲ್ ಹದಗಲ್, ಶ್ರೀನಿವಾಸ್ ಬಂಕಾಪುರ, ವಿಜಯೇಂದ್ರ, ಶೇಷಗಿರಿ ಏಕಬೋತೆ, ಸೂರ್ಯನಾರಾಯಣ ಸರೋದೆ, ಸುದರ್ಶನ್ ಸಫಾರೆ, ಸುರೇಶ್ ರಾವ್ ಜವಳಕರ್, ಬಾಳುಸಾ ಟಿ.ರಂಗ್ರೇಜ್, ಸುರೇಶ್ ಪಾಚಂಗೆ, ಉತ್ತರಕರ್ ರಮೇಶ್, ಎಂ.ಕೃಷ್ಣೋಜಿರಾವ್, ಎಂ.ಜಗಧೀಶ್ವರರಾವ್ ಚವ್ಹಾಣ್, ಸುರೇಶ್ ರಾಜ್, ಪ್ರಕಾಶ್ ಸಿದ್ಲಿಂಗ್, ಮೋತಿಲಾಲ್ ಸಾ ಭರಾಡೆ, ಶ್ರೀನಿವಾಸ್ ಚೌಡಿಮನೆ ಮತ್ತು ಐ ವಿಠಲ್ ಇನ್ನಿತರರು ಇದ್ದರು.

ಸುದ್ದಿ ಓದಿ