ಗೋಕಾಕ್

ಕಿತ್ತೂರು ಕರ್ನಾಟಕ ಸಂಭ್ರಮಾಚರಣೆ

ಕಿತ್ತೂರು ಕರ್ನಾಟಕ ಸಂಭ್ರಮಾಚರಣೆ

ಲೋಕದರ್ಶನ ವರದಿ 


ಗೋಕಾಕ 10: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂಬೈ ಕರ್ನಾಟಕಕ್ಕೆ ‘ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣವಾದುದು ಸ್ವಾಗತಾರ್ಹವಾದುದು. ಜಿಲ್ಲೆಯ ಕನ್ನಡಿಗರೆಲ್ಲರ ಹೋರಾಟದ ಪ್ರತಿಫಲವಾಗಿ ಇಂದು ‘ಕಿತ್ತೂರು ಕರ್ನಾಟಕ’ ಮರುನಾಮಕರಣವಾದುದಕ್ಕೆ ಗೋಕಾಕ ಸಾಹಿತಿಗಳು ರಾಣಿ ಚನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.  

ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಜಾನಪದ ಪರಿಷತ್ತು ಹಾಗು ಭಾವಯಾನ ಮಹಿಳಾ ವೇದಿಕೆಗಳ ಆಶ್ರಯದಲ್ಲಿ ಮದಭಾವಿ ಸಭಾಭವನದಲ್ಲಿ ಹಮ್ಮಿಕೊಂಡ ಸಂಭ್ರಮಾಚರಣೆಯಲ್ಲಿ ಜಾನಪದ ವಿದ್ವಾಂಸ ಡಾ. ಸಿ.ಕೆ.ನಾವಲಗಿ ಮಾತನಾಡುತ್ತ ಇಲ್ಲಿಯವರೆಗೆ ಆಚರಿಸುತ್ತ ಬಂದ ಜಿಲ್ಲಾ ಮಟ್ಟದ ಕಿತ್ತೂರ ಉತ್ಸವ ರಾಷ್ಟ್ರಮಟ್ಟದ ಉತ್ಸವವಾಗಬೇಕು ಮತ್ತು ಬೆಳಗಾವಿ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿ.ವಿ. ಹೆಸರಿಗೆ ಕಿತ್ತೂರು ಸೇರಿಸಿ, ‘ಕಿತ್ತೂರು ರಾಣಿ ಚನ್ನಮ್ಮ ವಿ.ವಿ.’ ಎಂದು ಮರುನಾಮಕರಣ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದರು. ಇದಕ್ಕೆ ಗೋಕಾಕ ಸಾಹಿತಿಗಳೆಲ್ಲ ಒಕ್ಕೊರಲಿನ ಒಪ್ಪಿಗೆ ನೀಡಿದ್ದಾರೆ. 

ಜಯಾನಂದ ಮಾದರ, ಭಾರತಿ ಮದಭಾವಿ, ಮಹಾನಂದಾ ಪಾಟೀಲ, ಶಿವಲೀಲಾ ಪಾಟೀಲ, ವಿನೂತಾ ನಾವಲಗಿ, ಪುಷ್ಪಾ ಮುರಗೋಡ, ಈಶ್ವರ ಮಮದಾಪೂರ, ಪಾರ್ವತಿ ಅಲಾಸೆ, ರತ್ನಕ್ಕ ವರದಾಯಿ, ವಸುಂಧರಾ ಕಾಳೆ, ಶಕುಂತಲಾ ಅಂಗಡಿ ಮೊದಲಾದವರು “ಹೆಸರಾಯಿತು ಕಿತ್ತೂರು ಕರ್ನಾಟಕ, ಉಸಿರಾಗಲಿ ಅಭಿವೃದ್ಧಿ” ಎಂದು ಮನದುಂಬಿ ಮಾತನಾಡಿದರು. 

ರಾಜಶ್ರೀ ಬಿರಾದಾರ ‘ಕಿತ್ತೂರ ಲಾವಣಿ’ ಹಾಡಿದರು. ಈಶ್ವರಚಂದ್ರ ಬೆಟಗೇರಿ ನಿರೂಪಿಸಿದರು. ರಾಜಶ್ರಿ ತೋಟಗಿ ವಂದಿಸಿದರು. 


ಸುದ್ದಿ ಓದಿ