ಲಚ್ಯಾಣ ಗ್ರಾ.ಪಂ ಅಧ್ಯಕ್ಷರಾಗಿ ಕೌಸರಬಾನು ಆಯ್ಕೆ
ಇಂಡಿ 20: ತಾಲೂಕಿನ ಲಚ್ಯಾಣ ಗ್ರಾ.ಪಂಗೆ ಕೌಸರಬಾನು ರಾಜೇಸಾಬ ನದಾಫ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಹಿರಗಪ್ಪ ಯಳಮೇಲಿ ರಾಜೀನಾಮೆ ನೀಡಿದ ಪ್ರಯುಕ್ತ ಚುನಾವಣೆ ನಡೆದಿತ್ತು. ಕೌಸರಬಾನು ರಾಜೇಸಾಬ ಸದಾಫ್ ಮತ್ತು ಮಹಾನಂದ ಕಾಸಿನಾಥ ಅವಜಿ ನಾಮಪತ್ರ ಸಲ್ಲಿಸಿದ್ದರು. ನದಾಫ್ ಇವರಿಗೆ 8 ಮತಗಳು ಮತ್ತು ಮಹಾನಂದಾ ಇವರಿಗೆ 7 ಮತಗಳು ದೊರೆತು ಕೌಸರಬಾನು ಅಧ್ಯಕ್ಷರಾಗಿ ಆಯ್ಕೆಯಾದರು.ಚುನಾವಣೆ ಅಧಿಕಾರಿ ಸುನೀಲ ಮದ್ದೀನ ಅಧ್ಯಕ್ಷರಾಗಿ ಕೌಸರಬಾನು ರಾಜೇಸಾಬ ಸದಾಫ್ ಅವರು ಆಯ್ಕೆಯಾದರೆಂದು ಘೋಷಿಸಿದರು.ಪಿಡಿಓ ಪ್ರದೀಪಕುಮಾರ ಮಾನೆ, ಜಿ.ಕೆ.ಲಾಳಸೇರಿ ಉಪಸ್ಥಿತರಿದ್ದರು.