ಕರಾಟೆ ಸ್ಪರ್ಧೆ: ಪರುಶರಾಮ ಕೊಂಚಿಕೊರವರ ತಂಡ ಪ್ರಥಮ
ಜಮಖಂಡಿ 24: ನಗರದ ಕರಾಟೆ ಕೋಚಿಂಗ್ ಮಾಸ್ಟರ್ ಪರುಶರಾಮ ಕೊಂಚಿಕೊರವರ ಅವರ ತಂಡ ಸಿಂಧನೂರನಲ್ಲಿ ನಡೆದ ಆರ್.ಜೆ.ಸ್ಪೋರ್ಟ್ಸ ಕಫ್ ಸಹಯೋಗದಲ್ಲಿ ನಡೆದ ಮಾಸ್ಟರ್ ಕರಾಟೆ ಅಸೋಸಿಯೇಷನ್ ಇಂಡಿಯಾ(ಆರ್) 7ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ತಾಲೂಕಿನ ಕೀರ್ತಿಯನ್ನು ಕೊಂಚಿಕೊರವರ ಕರಾಟೆ ತಂಡ ಹೆಚ್ಚಿಸಿದೆ ಎಂದು ಅವರ ಅಭಿಮಾನಿ ಬಳಗ ಸಂತಸ ವ್ಯಕ್ತಪಡಿಸಿದ್ದಾರೆ.