ಕಾಗವಾಡ

ಇದು ತಾಲೂಕಿಗೆ ಕನ್ನಡ ರಥಯಾತ್ರೆ: ಅದ್ದೂರಿ ಸ್ವಾಗತಕ್ಕೆ ಸಕಲ ಸಿದ್ಧತೆ: ರಾಜೇಶ ಬುರ್ಲಿ

ಇದು ತಾಲೂಕಿಗೆ ಕನ್ನಡ ರಥಯಾತ್ರೆ: ಅದ್ದೂರಿ ಸ್ವಾಗತಕ್ಕೆ ಸಕಲ ಸಿದ್ಧತೆ: ರಾಜೇಶ ಬುರ್ಲಿ

ಕಾಗವಾಡ 04: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ಶನಿವಾರ ದಿ. 5 ರಂದು ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಮುಖಾಂತರ ತಾಲೂಕಿಗೆ ಆಗಮಿಸಲಿದ್ದು, ತಾಲಾಕಾಡಳಿತದ ವತಿಯಿಂದ ಶಿರಗುಪ್ಪಿಯಲ್ಲಿ ರಥಕ್ಕೆ ಸ್ವಾಗತ ನೀಡಿ, ಪಟ್ಟಣಕ್ಕೆ ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದೆ ಎಂದು ತಹಶೀಲ್ದಾರ ರಾಜೇಶ ಬುರ್ಲಿ ತಿಳಿಸಿದ್ದಾರೆ. 

ಅವರು ಗುರುವಾರ ದಿ. 3ರಂದು ತಹಶೀಲ್ದಾರ ಕಾರ್ಯಾಲಯದಲ್ಲಿ ಅಧಿಕಾರಿಗಳ ಮತ್ತು ಕನ್ನಡ ಪರ ಸಂಘಟನೆಗಳ ಪೂರ್ವಿಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಪಟ್ಟಣದಲ್ಲಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿಕೊಂಡು, ಶಾಲಾ ವಿದ್ಯಾರ್ಥಿಗಳ ಭವ್ಯ ಮೆರವಣಿಗೆಯೊಂದಿಗೆ ಪಟ್ಟಣದಲ್ಲಿ ಸಂಚರಿಸಿ, ಅಥಣಿ ಕಡೆಗೆ ಬೀಳ್ಕೊಡಲಾಗುವುದು.  

ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಈಗಾಗಲೇ ತಾಲೂಕಿನ ಎಲ್ಲ ಅಧಿಕಾರಿಗಳೊಂದಿಗೆ ಮತ್ತು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ರಥಯಾತ್ರೆಯನ್ನ ಸ್ವಾಗತಿಸುವ ಕುರಿತು ಚರ್ಚಿಸಲಾಗಿದೆ. ಈ ಕುರಿತು ಶಾಸಕರಿಗೂ ಆಹ್ವಾನ ನೀಡಲಾಗಿದೆ. ಆದ್ದರಿಂದ ತಾಲೂಕಿನ ಎಲ್ಲ ಅಧಿಕಾರಿಗಳು, ತಾಲೂಕಿನ ಎಲ್ಲ ಸಂಘಟನೆಗಳು, ಕನ್ನಡಪರ ಸಂಘಟೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ರಥಯಾತ್ರೆಯನ್ನು ತಾಲೂಕಿನಲ್ಲಿ ಯಶಸ್ವಿಯಾಗಿಸೋಣವೆಂದು ರಾಜೇಶ ಬುರ್ಲಿ ತಿಳಿಸಿದ್ದಾರೆ. 

ತಾ.ಪಂ. ಎಇಓ ಸುರೇಶ ಕದ್ದು, ಸಿಡಿಪಿಓ ಸಂಜೀವಕುಮಾರ ಸದಲಗಿ, ಬಿಇಓ ಎಂ.ಆರ್‌. ಮುಂಜೆ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎ.ಕೆ. ಗಾವಡೆ, ಹೆಸ್ಮಾಂ ಅಧಿಕಾರಿ ದುರ್ಯೋಧನ ಮಾಳಿ, ಶಿರಸ್ತೆದಾರರಾದ ವಿಜಯಕುಮಾರ ಚೌಗುಲೆ, ಆರ್‌.ಟಿ. ಗುರವ, ಎಸ್‌.ಎ ಕುಷ್ಟಗಿ, ಜಾವೀದ ಮುಜಾವರ, ಜಯಕರ್ನಾಟಕ ಸಂಘಟನೆಯ ಬಸವರಾಜ ಮಗದುಮ್, ಮಹಾವೀರ ಪಾಟೀಲ ಸೇರಿದಂತೆ ತಾಲೂಕಿನ ಎಲ್ಲ ಅಧಿಕಾರಿಗಳು, ಪಿಡಿಓಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ