ಕಂಪ್ಲಿ: ದೇವಸಮುದ್ರ ಗ್ರಾಮದಲ್ಲಿ ವೀರಅಭಿಮನ್ಯು ಕಾಳಗ

ಕಂಪ್ಲಿ: ದೇವಸಮುದ್ರ ಗ್ರಾಮದಲ್ಲಿ ವೀರಅಭಿಮನ್ಯು ಕಾಳಗ

ಲೋಕದರ್ಶನ ವರದಿ

ಕಂಪ್ಲಿ 27: ಸಮೀಪದ ದೇವಸಮುದ್ರದ ಬಲಕುಂದೆಪ್ಪ ತಾತಾನವರ ರಥೋತ್ಸವದ ನಿಮಿತ್ತ ಗ್ರಾಮದ ಅಗಸರ ಪಕ್ಕೀರಪ್ಪ ಕುಟುಂಬದವರೇ ಸೇರಿ ಎಲ್ಲ ಪುರುಷ ಪಾತ್ರಗಳನ್ನು ಮಾಡಿ ಪ್ರದಶರ್ಿಸಿದ ಬಯಲಾಟ ವೀರ ಅಭಿಮನ್ಯು ಕಾಳಗ ಶನಿವಾರ ರಾತ್ರಿ ಎಲ್ಲರನ್ನು ರಂಜಿಸಿತು.

ಗ್ರಾಮದ ಮಡಿವಾಳ ಸಮುದಾಯದ ಪಕ್ಕೀರಪ್ಪ ಕುಟುಂಬದವರು ಹೊಲ, ಗದ್ದೆಗಳಿಗೆ ನೀರು ಮಾಡುವುದನ್ನು ಗುತ್ತಿಗೆ ಹಿಡಿದು ಜೀವನ ನಡೆಸುತ್ತಾರೆ. ಜತೆಗೆ ಮೂಲ ವೃತ್ತಿಯನ್ನು ಮಾಡುತ್ತಾರೆ. ಬಯಲಾಟದ ಅಭಿಮಾನಿಗಳಾದ ಇವರ ಕುಟುಂಬ, ಈ ಸಲ ಬಲಕುಂದೆಪ್ಪ ತಾತಾನವರ ರಥೋತ್ಸವದ ವೇಳೆ ಪ್ರದಶರ್ಿಸಿದ ಬಯಲಾಟದಲ್ಲಿ ಕೆಲವರು ಈಗಾಗಲೇ ಹಲವು ಪಾತ್ರಗಳನ್ನು ಮಾಡಿ ಪರಿಣಿತರರಾಗಿದ್ದರೆ, ಇನ್ನೂ ಕೆಲವರು ಇದೇ ಮೊದಲ ಸಲ ಪಾತ್ರಗಳನ್ನು ಮಾಡಿ, ನಾವು ಯಾರಿಗಿಂತ ಕಡಿಮೆ ಇಲ್ಲ ಎನ್ನುವಂತೆ ಅಭಿನಯಿಸಿ ನೋಡುಗರ ಮೆಚ್ಚುಗೆ ಪಾತ್ರರಾದರು. 

ಅಜರ್ುನರಾಗಿ ಎಂ.ವೀರೇಶಪ್ಪ, ಎಂ.ಬಸಪ್ಪ ಕೃಷ್ಣನಾಗಿ, ಎಂ.ಶೇಖರಪ್ಪ ಭೀಮಸೇನರಾಗಿ, ಎಂ.ಗಾದಿಲಿಂಗ ಜಯದ್ರಥ, ಎ.ನಾಗರಾಜ ಕರ್ಣ, ಎಂ.ಬಸಪ್ಪ ಅಭಿಮನ್ಯು, ಎಂ.ಪ್ರವೀಣ ಧರ್ಮರಾಯ, ಎಂ.ಚಂದ್ರಶೇಖರ ದ್ರೋಣ, ಎಂ.ಗಣೇಶ ಬಾಲಕೃಷ್ಣ, ಎಂ.ತುಕರಾಮ್ ದುಯರ್ೋಧನರಾಗಿ ಉತ್ತಮವಾಗಿ ಅಭಿನಯಿಸಿದರು. ಉತ್ತಮ ರಂಗಸಜ್ಜಿಕೆ, ಸಂಗೀತದಿಂದ ಕೂಡಿದ ಬಯಲಾಟ ನೋಡುಗರರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳ ಗಾಯಕರಾದ ಹೇಮರೆಡ್ಡಿ, ದೊಡ್ಡಬಸಪ್ಪ, ಹೊಸೂರಪ್ಪ, ತಬಲಾ ಸಾಥ್ ನಾಗೇಶಪ್ಪ, ಕರಿಬಸವನಗೌಡ ಪ್ಯಾಡ್, ಎಮ್ಮಿಗನೂರು ಸಣ್ಣ ಜಡೆಪ್ಪ ಸಾರಥಿಯಾಗಿ ಬಯಲಾಟಕ್ಕೆ ಮೆರಗು ತಂದಿತ್ತು. ಇಡೀ ರಾತ್ರಿ ಪ್ರದರ್ಶನಗೊಂಡ ಬಯಲಾಟವನ್ನು ಪ್ರೇಕ್ಷಕರು ನಿದ್ದೆ ಮಾಡದೆ ಹಾಗೇ ವೀಕ್ಷಿಸಿದರು. ಈ ಕುರಿತು ಎಪಿಎಂಸಿ ಮಾಜಿ ಅಧ್ಯಕ್ಷ ಅಳ್ಳಳ್ಳಿ ವೀರೇಶ ಮಾತನಾಡಿ, ಗ್ರಾಮದ ಅಗಸರ ಪಕ್ಕೀರಪ್ಪ ಕುಟುಂಬದವರು ಸೇರಿ ಬಯಲಾಟ ಪ್ರದಶರ್ಿಸಿರುವುದು ಹೆಮ್ಮೆ ಸಂಗತಿ. ಪ್ರದರ್ಶನಕ್ಕೆ ಗ್ರಾಮದ ಎಲ್ಲ ಮುಖಂಡರು ಎಲ್ಲ ರೀತಿಯಿಂದ ಸಹಕರಿಸಿದ್ದಾರೆ ಎಂದರು.


ಸುದ್ದಿ ಓದಿ