ಜಮಖಂಡಿ

ಡಿ. 3 ರಿಂದ ಮುಕ್ತ ಕಬಡ್ಡಿ ಪಂದ್ಯಾವಳಿ

ಡಿ. 3 ರಿಂದ ಮುಕ್ತ ಕಬಡ್ಡಿ ಪಂದ್ಯಾವಳಿ

ಜಮಖಂಡಿ 27: ತಾಲೂಕಿನ ಲಿಂಗನೂರ ಗ್ರಾಮದ ಶ್ರೀಗುಡಿದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಬಾಗಲಕೋಟ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ, ಶ್ರೀಕಾಡಸಿದ್ದೇಶ್ವರ ಸ್ಪೋರ್ಟ್ಸ ಮತ್ತು ಕಲ್ಚರಲ್ ಸೇವಾ ಸಮಿತಿ ಲಿಂಗನೂರ ಸಹಯೋಗದಲ್ಲಿ ಅಂತರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಗಳು ಡಿ, 3 ಮತ್ತು 4 ರಂದು ಜರುಗಲಿದ್ದು. 

ಲಿಂಗನೂರ ಶಿವಪುತ್ರ ಅವಧೂತ ಮಠದ ಶಿವಪುತ್ರಾವಧೂತ ಶ್ರೀಗಳು, ಬಬಲಾದಿಯ ಬಸಯ್ಯ ಹಿರೇಮಠ ಶ್ರೀಗಳು ದಿವ್ಯ ಸಾನಿದ್ಯವಹಿಸಲಿದ್ದು. ಶಾಸಕ ಜಗದೀಶ ಗುಡಗುಂಟಿ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಆನಂದ ನ್ಯಾಮಗೌಡ, ಎನ್‌.ಎಸ್‌.ಎಸ್‌.ಕೆ ಕೃಷ್ಣಾನಗರ ಅಧ್ಯಕ್ಷ ಕುಮಾರ ದೇಸಾಯಿ ಕಾರ್ಯಕ್ರಮ ಉದ್ಘಾಟಿಸುವರು, ಅಬಕಾರಿ ಇಲಾಖೆ ಸಚಿವ ಆರ್‌.ಬಿ. ತಿಮ್ಮಾಪೂರ, ಮಾಜಿ ಭೂಸೇನಾ ನಿಗಮ ಅಧ್ಯಕ್ಷ ಶ್ರೀಶೈಲ ದಳವಾಯಿ ಜ್ಯೋತಿ ಬೆಳಗಿಸುವರು. ಶ್ರೀಗುಡಿದೇವಿಯ ಗದ್ದುಗೆ ಪೂಜಾರಿಗಳು, ಭೀಮನಗೌಡ ಬಡಗೌಡರ ಮೈದಾನ ಪೂಜೆ ನೇರವೆರಿಸುವರು. 

ಬಸನಗೌಡ ಪಾಟೀಲ, ಅಶೋಕ ಲೆಂಕೆನ್ನವರ, ಅದೃಶಪ್ಪ ದೇಸಾಯಿ, ಶಂಕ್ರೆಪ್ಪ ಪಟೇದಾರ, ಶ್ರೀಶೈಲ ಕಡಗದ, ಬಸವರಾಜ ಗಂಗರಡ್ಡಿ, ವಿಜಯಲಕ್ಷ್ಮೀ ಕಾಗಿ, ಭರತಗೌಡ ಪಾಟೀಲ, ರಾಯಪ್ಪ ಕರಿಗಾರ ಇತರರು ಭಾಗವಹಿಸಲಿದ್ದಾರೆಂದು ಮಹಾದೇವ ಮಿರ್ಜಿ ಹಾಗೂ ರಮೇಶ ವಜ್ಜರಮಟ್ಟಿ ಪ್ರಕಟಣೆಗೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೋನ್ ನಂ, : 9980790857, 9964421691. 


ಸುದ್ದಿ ಓದಿ