ಮನೆಬಾಗಿಲಿಗೆ ನ್ಯಾಯ ಕಾರ್ಯಕ್ರಮ

ಮನೆಬಾಗಿಲಿಗೆ ನ್ಯಾಯ ಕಾರ್ಯಕ್ರಮ

ಬಳ್ಳಾರಿ16: ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ನಿಮಿತ್ತ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನ.9ರಿಂದ 18ರವರೆಗೆ ಆಯೋಜಿಸಲಾಗಿರುವ 'ಮನೆಬಾಗಿಲಿಗೆ ನ್ಯಾಯ'ಎಂಬ ವಿನೂತನ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಪ್ಯಾನಲ್ ವಕೀಲರು, ಅರೇಕಾಲಿಕ ಕಾನೂನು ಸ್ವಯಂ ಸೇವಕರು ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳ ಜತೆಗೂಡಿ ಮನೆಮನೆಗೆ ತೆರಳಿ ನ್ಯಾಯದ ಬಗ್ಗೆ ತಿಳಿಸುವ ಮತ್ತು ಸರಕಾರದ ಸೌಲಭ್ಯಗಳ ಬಗ್ಗೆ ತಿಳಿಸುವ ಈ ಕಾರ್ಯ ಜಿಲ್ಲೆಯ 36 ಗ್ರಾಮಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನಡೆದಿದ್ದು, ಎಲ್ಲೆಡೆ ಅದ್ಬುತ ಸ್ಪಂದನೆ ದೊರೆತಿದೆ.

      ಮನೆಬಾಗಿಲ ನ್ಯಾಯದ ಮೂಲಕ ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳು ಮತ್ತು ಅದರಿಂದ ದೊರೆಯುವ ಸೇವೆಗಳ ಕುರಿತು ಪ್ಯಾನಲ್ ವಕೀಲರು ಮತ್ತು ಅರೇಕಾಲಿಕ ಸ್ವಯಂ ಸೇವಕರು ವಿವರಿಸಿದರು.

     ಉಚಿತ ಕಾನೂನು, ಉಚಿತ ಕಾನೂನು ನೆರವು ಪಡೆಯುವುದು ಹೇಗೇ..?, ಜನತಾ ನ್ಯಾಯಾಲಯದ ಕುರಿತು ವಿವರಣೆ, ಸರಕಾರದ ವಿವಿಧ ಸೌಲಭ್ಯಗಳ ಕುರಿತು ವಿವರಿಸುವ ಕೆಲಸವನ್ನು ಅವರು ಮಾಡಿದರು.

ಪ್ರತಿ ಗ್ರಾಪಂಗಳಲ್ಲಿ ಕಡ್ಡಾಯವಾಗಿ ಮಕ್ಕಳ ಗ್ರಾಮಸಭೆ ಕಡ್ಡಾಯವಾಗಿ ನಡೆಸುವಂತೆ ಸೂಚಿಸಲಾಯಿತು.

       ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳು ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಬಿ.ಹಂದ್ರಾಳ್ ಅವರು ಕಪಗಲ್ನ ಸಮುದಾಯಭವನದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಭಾಗವಹಿಸಿದ್ದರು.

     ಮಕ್ಕಳು ಶೌಚಾಲಯ, ಬಸ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಒದಗಿಸುವಂತೆ ಮಕ್ಕಳು ಗ್ರಾಮಸಭೆಯಲ್ಲಿ ಪಟ್ಟು ಹಿಡಿದರು.

        ಇವುಗಳ ಕೊರತೆಯಿಂದ ನಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

       ಇದನ್ನು ಅತ್ಯಂತ ತದೇಕಚಿತ್ತದಿಂದ ಆಲಿಸಿದ ನ್ಯಾ.ಹಂದ್ರಾಳ್ ಅವರು ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳು ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದರು.

       ಮನೆಬಾಗಿಲ ನ್ಯಾಯದ ಮೂಲಕ ಅರಿವು ಮೂಡಿಸಿದ ಗ್ರಾಮಗಳಿವು: ಬೇವಿನಹಳ್ಳಿ,ಕಕ್ಕಬೇವಿನಹಳ್ಳಿ, ಅಮರಾಪುರ, ಪರಮದೇವನಹಳ್ಳಿ, ಗೋಡೆಹಾಳೆ, ಟಿ.ಬೂದಿಹಾಳ್, ಹಗರಿಪೋಸ್ಟ್, ಯಾಳ್ಪಿ ಕಗ್ಗಲ್, ಯಾಳ್ಪಿ, ಕುಂಟನಾಳ್, ರಾಯಾಪುರ,ಮಿಂಚೇರಿ, ಚರಕುಂಟೆ,ಜಾನೇಕುಂಟೆ, ಸಂಗನಕಲ್, ಸಿರಿವಾತ,ಕಪಗಲ್, ಬಾಲಾಜಿ ಕ್ಯಾಂಪ್, ಮೀನಹಳ್ಳಿ, ಗೊಲ್ಲನಾಗೇನಹಳ್ಳಿ, ದಾಸರ ನಾಗೇನಹಳ್ಳಿ, ತಂಬ್ರಹಳ್ಳಿ,ಬ್ಯಾಲಚಿಂತೆ, ಯರಗುಡಿ, ಬೆಣಕಲ್, ಗೊಟೂರ, ಕಲ್ಲುಗುಟುಗಿನಹಾಳ್,ಮಸೀದಿಪುರ, ವಣೇನೂರ್, ಬಸರಕೋಡು, ಕಚರ್ೇಡು, ಎಂ.ಗೋನಾಳು,ಸಿಂಧುವಾಳ್, ಜಾಲಿಹಾಳ್, ಬೊಮ್ಮನಹಾಳ್,ತೊಲಮಾಮಿಡಿ ಮಾಹಿತಿ ನೀಡಲಾಯಿತು.

ಸುದ್ದಿ ಓದಿ