ಪತ್ರಕರ್ತರು ನಿರ್ಭಿಡೆ, ನಿಷ್ಠುರತೆ, ಚುರುಕು ಬುದ್ಧಿ ಹೊಂದಿರಬೇಕು: ಹೃದಯ ರೋಗ ತಜ್ಞ ಡಾ. ದಡ್ಡಿ
ಜಮಖಂಡಿ 09: ಪತ್ರಕರ್ತರು ನಿರ್ಭಿಡೆ, ನಿಷ್ಠುರತೆ ಮತ್ತು ತನಿಖೆಗಳಂತಹ ಚುರುಕು ಬುದ್ಧಿ ಹೊಂದಿರಬೇಕು. ವೃತ್ತಿಯಲ್ಲಿ ಬರುವ ಸಂಕಷ್ಟಗಳನ್ನು ಎದುರಿಸುವ ಎದೆಗಾರಿಕೆವುಳ್ಳವರಾಗಬೇಕೆಂದು ಹೃದಯ ರೋಗ ತಜ್ಞ ಡಾ.ಹೆಚ್.ಜಿ.ದಡ್ಡಿ ಹೇಳಿದರು.
ನಗರದ ಅನ್ನಪೂಣೇಶ್ವರಿ ಸಭಾಭವನದಲ್ಲಿ ಲಯನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲ ಅಂಗಗಳ ಜೊತೆ ಪತ್ರಿಕಾರಂಗ ಕೂಡಾ ಮಹತ್ವ ಹೊಂದಿದೆ. ಇವುಗಳು ಒಂದಕ್ಕೊಂದು ಪೂರಕವಾಗಿ ಕೆಲಸ, ಕಾರ್ಯ ಮಾಡಿದರೆ ಮಾತ್ರ ದೇಶದ ಅಭಿವೃದ್ದಿ ಸಾಧಿಸಲು ಸಾದ್ಯ. ನಮ್ಮಲ್ಲಿ ಕೌಟುಂಬಿಕ,ಸಾಮಾಜಿಕ, ರಾಜಕೀಯ ವ್ಯವಸ್ಥೆಗಳು ಹದಗೆಟ್ಟಿವೆ. ಇವುಗಳಲ್ಲಿನ ಕೊರತೆಯನ್ನು ಗುತರ್ಿಸಿ ನಿರ್ಭಯವಾಗಿ, ಯಾವುದೇ ಮುಲಾಜಿಗೆ ಮಣಿಯದೇ ಸುದ್ದಿ ಮಾಡುವವನೇ ನಿಜವಾದ ಪತ್ರಕರ್ತ ಎನಿಸಿಕೊಳ್ಳಬಲ್ಲ ಎಂದರು.
ಪತ್ರಿಕಾ ವೃತ್ತಿ ಸಮಾಜದಲ್ಲಿ ಜವಬ್ದಾರಿಯುತ ಕೆಲಸವಾಗಿದೆ .ಪತ್ರಕರ್ತರು ಸಮಾಜದ ಅಂಕು, ಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ಇದನ್ನು ಬಿಟ್ಟು ಹೊಂದಾಣಿಕೆ ಪತ್ರಿಕಾವೃತ್ತಿ ನಡೆಸಬಾರದು. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಯಥಾವತ್ತಾಗಿ ಜನರಿಗೆ ನೀಡವ ಕಾರ್ಯವನ್ನು ಪತ್ರಕರ್ತರು ಮಾಡಲು ಮುಂದಾಗಬೇಕೆಂದರು.
ಪತ್ರಕರ್ತ ಗುರುರಾಜ ವಾಳ್ವೇಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಆಗು ಹೋಗುವ ಘಟನೆಗಳನ್ನು ಯಥಾವತ್ತಾಗಿ ಓದುಗರಿಗೆ ತಿಳಿಸಿ, ಸಮಾಜ ಸುಧಾರಕರಲ್ಲೊಬ್ಬರಾಗಬೇಕು. ಪತ್ರಕರ್ತರಿಗೂ ಅನೇಕ ಬಾರಿ ಬೆದರಿಕೆ, ಧಮ್ಮಕಿಗಳು ಬರುವುದು ಸಹಜ. ಅವುಗಳನ್ನು ಎದುರಿಸಿ ನೇರ, ದಿಟ್ಟ, ನಿರಂತರವಾಗಿ ಸುದ್ದಿಗಳನ್ನು ನೀಡುವುದು ಪತ್ರಕರ್ತನ ಕರ್ತವ್ಯವಾಗಿದೆ.ಇಂದು
ಪೋಟೋ : ಜಮಖಂಡಿ ನಗರದ ಅನ್ನಪೂಣೇಶ್ವರಿ ಸಭಾಭವನದಲ್ಲಿ ಲಯನ್ಸ್ ಸಂಸ್ಥೆ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಆಚರಿಸಲಾಯಿತು,