ಸಿಂಧಗಿ

ಕತ್ತಿಗಿಂತ ಲೇಖನಿ ಹರೀತ ಪತ್ರಿಕೋದ್ಯಮ ಪವಿತ್ರವಾದ ಕೆಲಸ: ಹಂಗರಗಿ

ಕತ್ತಿಗಿಂತ ಲೇಖನಿ ಹರೀತ ಪತ್ರಿಕೋದ್ಯಮ ಪವಿತ್ರವಾದ ಕೆಲಸ: ಹಂಗರಗಿ

ಸಿಂದಗಿ30:  ಕತ್ತಿಗಿಂತ ಲೇಖನಿ ಹರೀತ ಪತ್ರಿಕೋದ್ಯಮ ಬಹಳ ಪವಿತ್ರವಾದ ಕೆಲಸ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜನ ಹಂಗರಗಿ ಹೇಳಿದರು. 

ಪಟ್ಟಣದ ಸಂಗಮಬಾರ ಹತ್ತಿರವಿರುವ  ಭವನದಲ್ಲಿ ನೂತನವಾಗಿ ಕಾನಿಪ ಸಂಘಕ್ಕೆ ಆಯ್ಕೆಯಾದ ಅಧ್ಯಕ್ಷ ಆನಂದ ಶಾಬಾದಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲಾಪುರ,ಕಾರ್ಯದರ್ಶಿಯಾಗಿ ಬೀಮರಾಯ ಕೆಂಭಾವಿ, ಕಜಾಂಚಿಯಾಗಿ ವಿಜಯಕುಮಾರ ಪತ್ತಾರ ಹಾಗೂ ನೂತನವಾಗಿ ಸಿಂದಗಿಯ  ರಾಣಿಚನ್ನಮ ವಿಶ್ವವಿದ್ಯಾಲಯದಲ್ಲಿ. ಎಂ.ಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದ ವಿಭಾಗದ 2021-22ನೇಯ ಸಾಲಿನ ಪರೀಕ್ಷೆಯಲ್ಲಿ ದ್ವಿತೀಯ ರಾ​‍್ಯಂಕ್‌ನಲ್ಲಿ ಪಾಸಾದ ಶಾಂತವೀರ ಹಿರೇಮಠಗೆ ಸನ್ಮಾನಿಸಿ ಮಾತನಾಡಿ. ಪತ್ರಿಕೋದ್ಯಮ ಒಂದು ಸಮಾಜವನ್ನು ತಿದ್ದುವ ಬಹುಮುಖ್ಯವಾದ ಅಸ್ತ್ರವಾಗಿದೆ ಎಂದರು.  

ಬಳಿಕ ಚಂದ್ರಶೇಖರ ನಾಗರಬೆಟ್ಟ ಮಾತನಾಡಿ ಪತ್ರಕೆಯಲ್ಲಿ ಸಣ್ಣ ಪತ್ರಿಕೆ, ದೊಡ್ಡ, ಪತ್ರಕೆಯೆಂದು ಭೇದಭಾವ ಇರಬಾರದು ಎಂದರು. 

ಸಂಗನಗೌಡ ಪಾಟೀಲ, ಬಸಯ್ಯ ಹಿರೇಮಠ.(ಬಂದಾಳ) ಎಮ್‌.ಬಿ.ಯಡ್ರಾಮಿ, ಎಸ್‌.ಎಸ್‌.ಮಲ್ಲೇದ, ರಮೇಶ ಬಿರಾದಾರ, ಎ.ಮ್‌.ವಾಲಿಕಾರ, ಅಶೋಕ ಕುಂಬಾರ, ಶಿವರಾಯಬತಗೌಡರು, ಪೊಲೀಸ ಇಲಾಖೆ. ಕೊನೆಯಲ್ಲಿ ರಮೇಶ ಬಿರಾದಾರ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ