ಬಾಗಲಕೋಟೆ

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಸ್ಜಿಎಂ ವಿದ್ಯಾಲಯದ ಕ್ರೀಡಾಪಟುಗಳು

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಸ್ಜಿಎಂ ವಿದ್ಯಾಲಯದ ಕ್ರೀಡಾಪಟುಗಳು
Jillā maṭṭakke āykeyāda esji'eṁ vidyālayada tajñaru

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಸ್ಜಿಎಂ ವಿದ್ಯಾಲಯದ ಕ್ರೀಡಾಪಟುಗಳು  

ರನ್ನ ಬೆಳಗಲಿ 12: ಪಟ್ಟಣದ  ಗುರು ಮಹಾಲಿಂಗೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮುಧೋಳ ತಾಲೂಕಿನ ರನ್ನ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಬಾಲಕಿಯರ ಹಾಗೂ ಬಾಲಕರ ನೆಟ್ಬಾಲ್ ತಂಡಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿವೆ. ಅಥ್ಲೆಟಿಕ್ಸ್‌ ವಿಭಾಗದಲ್ಲಿಯೂ ಹಲವು ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.  

ಬಾಲಕಿಯರ ಗುಡ್ಡಗಾಡು ಓಟದಲ್ಲಿ ಭಾಗ್ಯಶ್ರೀ ಟಾಕಳೆ ಹಾಗೂ ಶೃತಿ ಧರಿಗೌಡರ, ಬಾಲಕರ ಗುಡ್ಡಗಾಡು ಓಟದಲ್ಲಿ ಶಿವಾನಂದ ಗುಡ್ಲಾರ್ ಹಾಗೂ ಶ್ರೀಮಂತ ಪೂಜಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭರ್ಚಿ ಎಸೆತದಲ್ಲಿ ಅನ್ವರ್ ನದಾಫ್ ಪ್ರಥಮ ಸ್ಥಾನ ಗಳಿಸಿದ್ದಾರೆ. 3000 ಮೀಟರ್ ಓಟದಲ್ಲಿ ಶಿವಾನಂದ ಗುಡ್ಲಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ ಪೋಲ್ವಾಲ್ಟ್ನಲ್ಲಿ ಶ್ರೀಧರ್ ಕಪಲಗುದ್ದಿ ಪ್ರಥಮ ಹಾಗೂ ರಮೇಶ ಹೊಸೂರ ದ್ವಿತೀಯ ಸ್ಥಾನ ಪಡೆದಿದ್ದಾರೆ.  

ಬಾಲಕಿಯರ 4ಥ400 ಮೀಟರ್ ರಿಲೇಯಲ್ಲಿ ಸುಧಾ ಲಾಲಿಬುಡ್ಡಿ, ಜ್ಯೋತಿ ಕುಗಾಟೆ, ಸವಿತಾ ಸವಳ್ಯಾಗೋಳ ಹಾಗೂ ಶೃತಿ ಧರಿಗೌಡರ ಅವರ ತಂಡ ಪ್ರಥಮ ಸ್ಥಾನ ಪಡೆದಿದೆ. 400 ಮೀಟರ್ ಓಟದಲ್ಲಿ ತ್ರಿವಿದ ಪ್ರಥಮ ಸ್ಥಾನ ಗಳಿಸಿದ್ದಾರೆ. ಉದ್ದಜಿಗಿತದಲ್ಲಿ ಕಾವೇರಿ ಸಂಕ್ರಟ್ಟಿ ದ್ವಿತೀಯ ಸ್ಥಾನ ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.  

ಸವಿತಾ ಸವಳ್ಯಾಗೋಳ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ, ಸವಿತಾ ಬಿರಾಜನವರ 400 ಮೀಟರ್ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ಪೋಲ್ವಾಲ್ಟ್ನಲ್ಲಿ ಸುಚಿತ್ರಾ ಲಾಲಿಬುಡ್ಡಿ ಪ್ರಥಮ ಹಾಗೂ ಸಂಧ್ಯಾ ಹಂಜಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಚೆಸ್ ಸ್ಪರ್ಧೆಯಲ್ಲಿ ಜಯಶ್ರೀ ಪೂಜಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ವಿದ್ಯಾಲಯದ ಚೇರ್ಮನ್ ಪಂಡಿತ ಪೂಜಾರಿ, ಪ್ರಾಚಾರ್ಯ ಪರಶುರಾಮ ನಾಯಕ, ದೈಹಿಕ ಶಿಕ್ಷಣ ನಿರ್ದೇಶಕ ರಾಘವೇಂದ್ರ ನಾಯಕ, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖರು ಅಭಿನಂದಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಮತ್ತಷ್ಟು ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ