ಸೌಂದತ್ತಿ

ಕೆಎಲ್‌ಇ ಸಂಸ್ಥೆಯಲ್ಲಿ ಎಸ್‌ವಿಎಸ್ ಬೆಳ್ಳುಬ್ಬಿ ಅವರ ಜಯಂತಿ ಕಾರ್ಯಕ್ರಮ

ಕೆಎಲ್‌ಇ ಸಂಸ್ಥೆಯಲ್ಲಿ ಎಸ್‌ವಿಎಸ್ ಬೆಳ್ಳುಬ್ಬಿ ಅವರ ಜಯಂತಿ ಕಾರ್ಯಕ್ರಮ

ಸವದತ್ತಿ 30: ಭೂಮಿಯ ಮೇಲೆ ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲದಾಗಿದ್ದು, ಬದುಕಿದ ಅವಧಿ ಎಷ್ಟು ಸಾರ್ಥಕ ಎಂಬುವಂತಹ  ಬದುಕನ್ನು ಬದುಕಿದವರು ಶ್ರೀಮಂತ ವಿರುಪಾಕ್ಷಪ್ಪ ಶಾಂತವೀರ​‍್ಪಅಣ್ಣಾ ಬೆಳ್ಳುಬ್ಬಿ ಎಂದು ಪ್ರಾಚಾರ್ಯ ಪ್ರೊ. ಮಾರುತಿ ದೊಂಬರ ಹೇಳಿದರು.  

ಪಟ್ಟಣದ ಕೆ.ಎಲ್‌.ಇ. ಸಂಸ್ಥೆಯ ಎಸ್‌.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಏರಿ​‍್ಡಸಿದ ಶ್ರೀಮಂತ ವಿರುಪಾಕ್ಷಪ್ಪ ಶಾಂತವೀರ​‍್ಪ ಅಣ್ಣಾ ಬೆಳ್ಳುಬ್ಬಿ ಅವರ 125ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ಕೆಲವರು ಹೆಸರು ಮತ್ತು ಕೀರ್ತಿಗಾಗಿ ದಾನ ಮಾಡುವವರಿದ್ದು, ಅಂತಹ ದಾನ ಶ್ರೇಷ್ಠತೆಗೆ ಸಲ್ಲುವಂತದಲ್ಲ. ನಿಸ್ವಾರ್ಥ ಮನೋಭಾವನೆಯಿಂದ ಮಾಡಿದ ದಾನ ಶ್ರೇಷ್ಠವಾದುದು ಎಂದರು. ತಾಯಿಯ ಗರ್ಭದಿಂದ ನಮ್ಮದು ಮೊದಲ ಜನ್ಮ ಎನಿಸಿದರೆ, ಶಿಕ್ಷಣದ ಮೂಲಕ ನಮಗೆ ಎರಡನೇ ಜನ್ಮ ಸಿಗುತ್ತದೆ. ಆ ಶಿಕ್ಷಣದ ಮೂಲಕ ಪ್ರತಿಯೊಬ್ಬ ಮನುಷ್ಯನ ಬದುಕು ಉಜ್ವಲವಾಗುತ್ತ ಸಾಗುತ್ತದೆ. ಅದಕ್ಕಾಗಿ ಬೆಳ್ಳುಬ್ಬಿ ಅವರ ಮಕ್ಕಳಾದ  ಗೌರಮ್ಮನವರು ಮತ್ತು  ಗಂಗಮ್ಮನವರು 1978ರಲ್ಲಿ ಕೆ.ಎಲ್‌.ಇ.ಸಂಸ್ಥೆಗೆ ವಿಶೇಷವಾದಂತ ಕೊಡುಗೆಯನ್ನು ನೀಡುವುದರ ಮೂಲಕ ಈ ಭಾಗದ ಶಿಕ್ಷಣದ ಕೊರತೆಯನ್ನು ನೀಗಿಸಿರುವ ಕಾರ್ಯ ಶ್ಲಾಘನೀಯ ಎಂದರು. ಇಂತಹ ಕಾರ್ಯಗಳಿಂದ ಮನುಷ್ಯ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು ಎಂದರು. 

ಮಹಾಂತೇಶ ಕಲ್ಯಾಣಿ, ಬೆಳ್ಳುಬ್ಬಿಯವರ ಅಭಿಮಾನಿಗಳು, ಗಣ್ಯರು ಹಾಗೂ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಉಪಸ್ಥಿತರಿದ್ದರು.  

ಕು. ಪಲ್ಲವಿ ಪ್ರಾರ್ಥಿಸಿದರು. ಪ್ರೊ ಕೆ.ರಾಮರೆಡ್ಡಿ ಸ್ವಾಗತಿಸಿದರು. ಡಾ. ಪ್ರೊ ಮೋಹನ್ ಬೆಣಚಮರ್ಡಿ ನಿರೂಪಿಸಿದರು. ಎ.ಎಫ್‌.ಬದಾಮಿ ವಂದಿಸಿದರು. 


ಸುದ್ದಿ ಓದಿ