ಓಬವ್ವ ಜಯಂತ್ಯೋತ್ಸವಕ್ಕೆ ಜನಾರ್ದನರೆಡ್ಡಿ ಚಾಲನೆ: ಬಸವರಾಜ
ಗಂಗಾವತಿ 10: ನಗರದ ಹೊಸಳ್ಳಿ ರಸ್ತೆಯಲ್ಲಿರುವ ಓಬವ್ವ ವೃತ್ತದಲ್ಲಿ ನವೆಂಬರ್ 11 ಶನಿವಾರ ಬೆಳಗ್ಗೆ 10.00 ಗಂಟೆಗೆ ವೀರಮಾತೆ ವನಿಕೆ ಓಬವ್ವ ಜಯಂತ್ಯೋತ್ಸವವನ್ನು ಛಲವಾದಿ ಸಮಾಜದ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು ಉತ್ಸವಕ್ಕೆ ಶಾಸಕ ಗಾಲಿ ಜನಾರ್ದನರೆಡ್ಡಿ ಚಾಲನೆ ನೀಡಲಿದ್ದಾರೆ ಎಂದು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ಮಾಳೆಮನಿ, ಉಪಾಧ್ಯಕ್ಷ ಪರಶುರಾಮ ಕಿರಿಕಿರಿ, ಪ್ರಧಾನ ಕಾರ್ಯದರ್ಶಿ ಆಂಜನೇಯ್ಯ ಸೋಮನಾಳ, ಮಲ್ಲಿಕಾರ್ಜುನ ನಂದಾಪುರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷಕ್ಕಿಂತ ಈ ಬಾರಿ ವಿಜೃಂಭಂಣೆಯಿಂದ ಆಚರಿಸಲಾಗುತ್ತಿದೆ, ವೀರ ವನಿತೆ ವನಿಕೆ ಓಬವ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9 ಗಂಟೆಗೆ ತಾಶಾ ಬಾಜಭಜಂತ್ರಿಯೊಂದಿಗೆ ಭವ್ಯ ಮೆರವಣಿಗೆಯು ಆರಂಭಗೊಳ್ಳಲಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಜಗಜೀವನ್ ರಾಮ್ ವೃತ್ತ, ಶ್ರೀಕೃಷ್ಣ ದೇವರಾಯ ವೃತ್ತ, ಶ್ರೀ ನೀಲಕಂಠೇಶ್ವರ ವೃತ್ತ ಹೊಸಳ್ಳಿ ರಸ್ತೆಯ ಮೂಲಕ ಮೆರವಣಿಗೆಯು ವೀರ ವನಿತೆ ವನಿಕೆ ಓಬವ್ವ ವೃತ್ತ ತಲುಪಲಿದೆ ಬಳಿಕ ವೇದಿಕೆ ಕಾರ್ಯಕ್ರಮ ಜರುಗಲಿದೆ.
ವೇದಿಕೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರ್ಪ, ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಇಕ್ಬಾಲ್ ಅನ್ಸಾರಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್ ನಂದಾಪುರ, ತಹಶೀಲ್ದಾರ್ ಮಂಜುನಾಥ್, ನಗರಸಭೆ ಪೌರಾಯುಕ್ತ ವಿರುಪಾಕ್ಷ ಮೂರ್ತಿ, ಛಲವಾದಿ ಸಮಾಜದ ಮುಖಂಡರಾದ ಮರಿಯಪ್ಪ ಕುಂಟೋಜಿ, ದೊಡ್ಡಬೋಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ, ನಗರಸಭಾ ಸದಸ್ಯರಾದ ಎಫ್ ರಾಘವೇಂದ್ರ, ಹುಲಿಗೆಮ್ಮ ಕಿರಿಕಿರಿ, ಅಬೀದಾ ಮುದ್ದಾಬಳ್ಳಿ, ನವೀನಕುಮಾರ್ ಪಾಟೀಲ್, ಮುಖಂಡರಾದ ಹುಸೇನಪ್ಪ ಹಂಚಿನಾಳ, ಹುಲುಗಪ್ಪ ಮಾಗಿ ಹಾಗು ತಿಮ್ಮಣ್ಣ ಕನಕಗಿರಿ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ.