ಜಮಖಂಡಿ

ಇಂದು ಜಮಖಂಡಿ ಬಂದ್ ಕರೆ

ಇಂದು ಜಮಖಂಡಿ ಬಂದ್ ಕರೆ

ಲೋಕದರ್ಶನ ವರದಿ,

ಜಮಖಂಡಿ: 29: ಮೀಸಲಾತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ ಜಗದೀಶ ಗುಡಗುಂಟಿ ಸುದ್ದಿಗೋಷ್ಠಯಲ್ಲಿ ಕ್ಷೇಮೆಯಾಚನೆ ನೀಡುವಲ್ಲಿ ದಲಿತ ಸಮಾಜ ಒಂದು ಪೀಡಿತ ಸಮಾಜವಾಗಿದೆಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆ. ದಲಿತ ಸಮಾಜ ಯಾವ ರೋಗದಿಂದ ಪೀಡಿತವಾಗಿದೆಂದು ಶಾಸಕ ಬಹಿರಂಗವಾಗಿ ತಿಳಿಸಬೇಕೆಂದು ದಲಿತಪರ ಸಂಘಟನೆಯ ಒತ್ತಾಯಿಸಿ ಅ.30 ರಂದು ಜಮಖಂಡಿ ಬಂದ್ ಕರೆ ನೀಡಲಾಗುತ್ತದೆ ಎಂದು ವಿವಿಧ ದಲಿತಪರ ಸಂಘನೆಯ ಮುಖಂಡರು ಹೇಳಿದರು.

ನಗರದ ಸರಕಾರಿ ಪ್ರವಾಸಿ ಮಂದಿರ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೀಸಲಾತಿಗೆ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಶಾಸಕ ಜಗದೀಶ ಗುಡಗುಂಟಿ ಅವರ ವಿರುದ್ಧ ವಿವಿಧ ದಲಿತಪರ ಸಂಘಟನೆಗಳು ಹೋರಾಟ ನಡೆಸಿರುವದೊಂದು ಹಾಸ್ಯಾಸ್ಪದವಾಗಿದೆ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ. ದಲಿತ ಸಮಾಜವನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.

ಕೇವಲ ನಾಲ್ಕು ಗೋಡೆಗಳ ಮಧ್ಯ ಕಾಟಾಚಾರಕ್ಕೆ ಸುದ್ದಿಗೋಷ್ಠಿಯನ್ನು ನಡೆಸಿ. ಕ್ಷೇಮೆಯಾಚನೆ ಮಾಡಿದ್ದಾರೆ ಸಾಲದು. ಅವರು ಬಹಿರಂಗವಾಗಿ ದಲಿತ ಸಮಾಜದ ಮುಂದೆ ಕ್ಷೇಮೆಯಾಚನೆ ಮಾಡಬೇಕು. ಮತ್ತು ದಲಿತ ಸಮಾಜ ಒಂದು ಪೀಡಿತ ಸಮಾಜವಾಗಿದೆಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ದಲಿತ ಸಮಾಜ ಯಾವ ರೋಗದಿಂದ ಪೀಡಿತವಾಗಿದೆಂದು ಅದನ್ನು ಸಹ ಬಹಿರಂಗವಾಗಿ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದರು.

ಅ.30ರಂದು ರಾಜ್ಯದ ವಿವಿಧ ದಲಿತಪರ ಸಂಘಟನೆಯ ನಾಯಕರು ಆಗಮಿಸಿ. ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಮಖಂಡಿ ಬಂದ್ ಕರೆಯನ್ನು ನೀಡಲಾಗುತ್ತದೆ. ಮೀಸಲಾತಿ ಕೇವಲ ದಲಿತ ಸಮಾಜಕ್ಕೆ ಅಷ್ಟೇ ಸೀಮಿತವಾಗದೆ. ಎಲ್ಲ ಸಮಾಜದವರು  ಮೀಸಲಾತಿ ಹೊಂದಿದ್ದಾರೆ. ಮೀಸಲಾತಿ ಪಡೆಯುವ ಎಲ್ಲ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಜಾಪರಿವರ್ತನೆ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಗೋಪೀನಾಥ ಮೀಶಿ, ಭೀಮ ಆರ್ಮಿ ಏಕತಾ ಸಮಿತಿ ಜಿಲ್ಲಾಧ್ಯಕ್ಷ ರಮೇಶ ಬಳೋಲಗಿಡದ, ಚನ್ನಬಸು ಗುಣದಾಳ, ಕುಮಾರ ಆಲಗೂರ, ಕಿರಣ ಶಿಂಗೆ ಇದ್ದರು.


ಸುದ್ದಿ ಓದಿ