ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕ ಚುನಾವಣೆ
ಜಮಖಂಡಿ 24: ದಿ. ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕ ಆಡಳಿತ ಮಂಡಳಿ ಸದಸ್ಯರ ಚುನಾವಣೆ ತುರಿಸಿನಿಂದ ನಡೆಯಿತು. ಒಟ್ಟು 12394 ಮತದಾರರ ಪೈಕಿ 9290 ಮತದಾನವಾಗಿ ಶೇ 74.95 ರಷ್ಟು ಮತದಾನವಾಗಿದೆ. ಇದರಲ್ಲಿ 7941 ಅರ್ಹ ಮತದಾರರ ಪೈಕಿ 6620 ಮತದಾನವಾಗಿದ್ದು, 4453 ಕೋರ್ಟಿನ ಮೂಲಕ ಮತದಾನ ಹಕ್ಕು ಪಡೆದ ಮತದಾರರ ಪೈಕಿ 2670 ಮತದಾನವಾಗಿದೆ.
ನಗರದಲ್ಲಿ ಕಳೆದ ಒಂದು ತಿಂಗಳಿಂದ ಜಮಖಂಡಿ ಪ್ರತಿಷ್ಟಿತ ಅರ್ಬನ್ ಬ್ಯಾಂಕಿನ ಚುನಾವಣೆ ಅಖಂಡ ತಾಲ್ಲೂಕಿನಲ್ಲಿ ಪ್ರತಿಷ್ಠೆ ಮತ್ತು ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಮಾಜಿ ವಿಪ ಸದಸ್ಯ ಜಿ,ಎಸ್, ನ್ಯಾಮಗೌಡ ಪೆನಾಲ್ನಲ್ಲಿ 17 ಜನ ಹಾಗೂ ಮುಖಂಡ ಅರುಣಕುಮಾರ ಶಹಾ ಅವರ ಪೆನಾಲ್ನಲ್ಲಿ 17 ಜನ, ಹಾಗೂ 21 ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಕಳೆದ 25 ದಿನಗಳಿಂದ ಎಲ್ಲ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದರು.
ಕೋರ್ಟ್ ಆದೇಶ ಬಂದ ನಂತರ ಮತ ಎಣಿಕೆ ನಡೆಯಲಿದ್ದು. ನಗರದ ಪಿ,ಬಿ, ಹೈಸ್ಕೂಲ್ನಲ್ಲಿ 32, ಜಿ,ಜಿ, ಹೈಸ್ಕೂಲನಲ್ಲಿ 19 ಒಟ್ಟು 51 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚುನಾವಣೆ ಕಾರ್ಯಕ್ಕೆ 400 ಶಿಕ್ಷಕರು, 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು ಎಂದು ಚುನಾವಣಾಧಿಕಾರಿ ತಹಶೀಲ್ದಾರ ಸದಾಶಿವ ಮಕ್ಕೋಜಿ ತಿಳಿಸಿದರು.
ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ ವಿಲ್ಚೇರ್ ಸೇರಿದಂತೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ, ಬಸವ ಭವನದ ಆವರಣದಲ್ಲಿ ನಿರ್ಮಿಸಲಾದ ಮತಗಟ್ಟೆ ಗುರುತಿನ ಚೀಟಿ ಕೊಡುವಲ್ಲಿ ವಿಳಂಬವಾದ ಹಿನ್ನಲೆಯಲ್ಲಿ ಹಲವಾರು ಮತದಾರರು ಗೊಂದಲಕ್ಕಿಡಾಗಿ ಗುರುತಿನ ಚೀಟಿ ಸಿಗದೆ ಮತದಾನ ಮಾಡದೆ ಕೇಲವಂದಿಷ್ಟು ಜನರು ಮರಳಿ ತೆರಳಿದರು. ಹಾಗೂ ಸಮಯದ ಅಭಾವದಿಂದ ಹಲವಾರು ಜನ ಮತದಾನದಿಂದ ಹೊರಗುಳಿದರು.