ಜಮಖಂಡಿ ಕ್ಷೇತ್ರ : ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿದ ಬಿಜೆಪಿ
ಶಶಿಕಾಂತ ತೇರದಾಳ
ಜಮಖಂಡಿ 14: ವಿಧಾನಸಭಾ ಚುನಾವಣೆಗಳು ಆರಂಭಗೊಂಡ ದಿನದಿಂದ ಕಾಂಗ್ರೆಸ್ ಭದ್ರಕೋಟೆ ಜಮಖಂಡಿ ಕ್ಷೇತ್ರ ಮತ್ತೊಮ್ಮೆ ಛಿದ್ರಗೊಂಡಿದೆ. 50ವರ್ಷದ ರಾಜಕೀಯ ಅವಧಿಯಲ್ಲಿ ಒಂದುಸಲ ಜನತಾದಳ, ಎರಡುಸಲ ಬಿಜೆಪಿ ಪಕ್ಷದ ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಗೊಂಡಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಮತ್ತೊಂಮೇ ಗೆದ್ದಿದೆ.
ಕಳೆದ 2023ರಿಂದ ಎರಡು ವಿಧಾನಸಭೆ ಮತ್ತು ಉಪಚುನಾವಣೆ ಸಹಿತ ಮೂರು ಚುನಾವಣೆಯಲ್ಲಿ ನ್ಯಾಮಗೌಡ ಕುಟುಂಬ ವಿಭಿನ್ನ ತಂತ್ರಗಾರಿಕೆ ಮೂಲಕ ಗೆಲವು ಸಾಧಿಸುವ ಮೂಲಕ ಆಡಳಿತ ನೀಡಿದ ನಂತರ 2023ರ ಚುನಾವಣೆಯಲ್ಲಿ ನ್ಯಾಮಗೌಡ ಕುಟುಂಬಕ್ಕೆ ಮತದಾರರು ಪ್ರಥಮ ಸೋಲಿನ ರುಚಿ ನೀಡಿದ್ದಾರೆ. ಕ್ಷೇತ್ರದಲ್ಲಿ ಪಾರಂಪರಿಕ ಅಧಿಕಾರ ನಡೆಸುವುದನ್ನು ಮತದಾರ ಈ ಬಾರಿ ತಡೆಗಟ್ಟಿದ್ದು, ಸಕ್ಕರೆ ಕಾರ್ಖಾನೆ ಮಾಲಿಕನನ್ನು ಸಕ್ಕರೆ ಕಾರ್ಖಾನೆ ಮಾಲಿಕ ಸೋಲಿಸಿದ್ದು ಈ ಬಾರಿ ಚುನಾವಣೆ ವಿಶೇಷವಾಗಿದೆ.
ಗುಡಗುಂಟಿ ಜೋಳಿಗೆಗೆ ಮತದಾರನ ಹೋಳಿಗೆ ಎಂಬ ಮಾತು ಸತ್ಯವಾಗಿದ್ದು ಮತದಾರರು ಬಿಜೆಪಿಗೆ ಮತ ನೀಡಿದ್ದು ಆಶ್ಚರ್ಯವಾಗಿದೆ. ಗುಡಗುಂಟಿ ಮನೆಗೆ ಯಾರೇ ಹೋದರೂ ಅವರನ್ನು ಬರಿಗೈಯಲ್ಲಿ ಕಳಿಸಿರುವ ಉದಾಹರಣೆಗಳಿಲ್ಲ. ಕ್ಷೇತ್ರ ಎಲ್ಲ ವರ್ಗದ ಜನರಿಗೆ ದಾನ ಮಾಡುವ ಸ್ವಭಾವ ಹೊಂದಿದ ಗುಡಗುಂಟಿ ಅವರಿಗೆ ವರದಾನವಾಗಿದೆ. ಗುಡಗುಂಟಿ ಅವರು ಸಕ್ಕರೆ ಉದ್ಯಮದ ಜೊತೆಜೊತೆಯಾಗಿ ಸಾಮಾಜಿಕ, ರಾಜಕೀಯ ಸೇವೆ ಮಾಡುವುದನ್ನು ಮೈಗೂಡಿಸಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಲು ಮತದಾರ ಬಯಸುತ್ತಿದ್ದಾನೆ.
ಬಿಜೆಪಿ ಗೆಲುವಿಗೆ ಕಾರಣ-
ಬಿಜೆಪಿ ಸತತ ಸೋಲು ಅನಭವಿಸಿದ ನಂತರ ಕಳೆದ 15 ವರ್ಷಗಳಿಂದ ದಾನ-ಧರ್ಮ ಕಾಯಕದಲ್ಲಿದ್ದ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಗೆಲವು ಸಾಧಿಸುವ ಮೊದಲ ಪ್ರಯತ್ನದಲ್ಲಿ ವಿಧಾನಸೌಧ ಪ್ರವೇಶಿಸಿ ಜಾತಿ ರಾಜಕೀಯಕ್ಕೆ ತೆರೆ ಎಳೆದಿದ್ದಾರೆ. ಚುನಾವಣೆಯಲ್ಲಿ ಸರ್ವ ಜನಾಂಗದ ಶಾಂತಿ ತೋಟದ ಮಾದರಿಯಲ್ಲಿ ಪ್ರಚಾರ ಮಾಡುವ ಮೂಲಕ ಗೆಲವು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಗೆಲವಿನ ಅತೀಯಾದ ಆತ್ಮವಿಶ್ವಾಸ ಮುಂದೆ ಕಮಲ ಮುದಡುವ ಬದಲಾಗಿ ಅರಳಿ ನಿಂತಿದೆ. ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ 4597 ಮತಗಳ ಅಂತರದಿಂದ ಗೆಲುವ ಸಾಧಿಸಿದ್ದಾರೆ.
ಕಾಂಗ್ರೆಸ್ ಸೋಲಿನ ಕಾರಣ-
ಕಾಂಗ್ರೆಸ್ ಅಭ್ಯರ್ಥಿ ಆನಂದ ಸಿದ್ದು ನ್ಯಾಮಗೌಡ ಸೋಲಿನಲ್ಲಿ ಜಾತಿಗಳ ಆಧರಿತ ನಿರ್ಣಯ ಮತ್ತು ಪಕ್ಷೇತರ ಅಭ್ಯಥರ್ಿ (ಕಾಂಗ್ರೆಸ್ ಬಂಡಯ) ಸುಶೀಲಕುಮಾರ ಬೆಳಗಲಿ ಹಗೆತನ ಕೂಡ ಒಂದು ಅಂಶವಾಗಿದೆ. ಪಕ್ಷೇತರ ಅಭ್ಯರ್ಥಿ ಚುನಾವಣೆಯಲ್ಲಿ 5270 ಮತಗಳನ್ನು ಪಡೆದುಕೊಂಡಿದ್ದು, ಕಾಕತಾಳೀಯ ಅಂತೆ 4597 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಆರಂಭದಲ್ಲಿ ಬಂಡಾಯ ಅಭ್ಯರ್ಥಿಯನ್ನು ಹಗುರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಕೊನೆಯಲ್ಲಿ ಪಕ್ಷೇತರ ಪಡೆದ ಮತಗಳು ಸೋಲಿಗೆ ಕಾರಣವಾಯಿತು. ಆನಂದ ನ್ಯಾಮಗೌಡ ಪಕ್ಷದ ಹಿರಿಯ ಕಾರ್ಯಕರ್ತರನ್ನು ಕಡೆಗಣಿಸಿದ್ದು ಸೋಲಿಗೆ ಒಂದು ಅಂಶವಾಗಿದೆ. ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಿದರು ಮತದಾರನ ಮನದದಾಳಿಗೆ ತಲುಪದೇ ಇರಬಹುದು.
ಕ್ಷೇತ್ರದ ಅಭಿವೃದ್ಧಿಗಾರಿ ಶ್ರಮಿಸುವೇ......
ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿ ಸಹಿತ ಮತದಾರರ ಋಣ ತಿರಿಸುವ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದು ಹೊಸ ಆಯಾಮದಲ್ಲಿ ಅಭಿವೃದ್ಧಿ ಆರಂಭವಾಗಲಿದೆ. ನನ್ನ ಸಾಮಾಜಿಕ ಸೇವೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡಬೇಕು. ಮತಕ್ಷೇತ್ರದ ಎಲ್ಲ ಮತದಾರರಿಗೆ, ಬಿಜೆಪಿ ಮುಖಂಡರು, ಕಾರ್ಯಕರ್ತರು ನನ್ನ ಅಭಿನಂದನೆಗಳು
-ಜಗದೀಶ ಗುಡಗುಂಟಿ, ವಿಧಾನಸಭಾ ಚುನಾಯಿತ ಅಭ್ಯರ್ಥಿ ಜಮಖಂಡಿ.
ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವೆ......
ಮತಕ್ಷೇತ್ರದಲ್ಲಿ ಮೇ 13ರಂದು ಮತದಾರರು ನೀಡಿರುವ ತೀರ್ಪಿಗೆ ತಲೆಬಾಗಿದ್ದೇನೆ. ನಾವು ಯಾವ ರೀತಿ ಯಾವ ಸಂದರ್ಭದಲ್ಲಿ ಎಡವಿದ್ದೇವೆ ಅರಿತುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೈಜೋಡಿಸುತ್ತೇನೆ. ಶಾಸಕನಾಗಿ ಕ್ಷೇತ್ರದಲ್ಲಿ ಪ್ರಾಮಾಣಿಕನಾಗಿ ಕೆಲಸ ಮಾಡಿರುವ ತೃಪ್ತಿ ನನಗಿದೆ. ನನ್ನ ಕ್ಷೇತ್ರದಲ್ಲಿ ನಾವು ಸೋತಿರಬಹುದು, ಆದರೇ ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಆಡಳಿತಕ್ಕೆ ಬರಲಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಚಿವರ ಮೇಲೆ ಒತ್ತಡ ತಂದು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ.
-ಆನಂದ ಸಿದ್ದು ನ್ಯಾಮಗೌಡ ಕಾಂಗ್ರೆಸ್ ಮಾಜಿ ಶಾಸಕರು ಜಮಖಂಡಿ.