ಗಂಗಾವತಿ

ಜಮೀತ್ ಯೂತ್ ಸ್ಕೌಟ್ಸ್ ಗೈಡ್ಸ್ ಪ್ರಥಮ ಸ್ಥಾನ

ಜಮೀತ್ ಯೂತ್ ಸ್ಕೌಟ್ಸ್ ಗೈಡ್ಸ್ ಪ್ರಥಮ ಸ್ಥಾನ

ಗಂಗಾವತಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಸಾರ್ವಜನಿಕ ರಾಷ್ಟ್ರಧ್ವಜಾರೋಹಣದ ಪಥ ಸಂಚಲನದಲ್ಲಿ ಭಾಗವಹಿಸಿದ್ದ ಜಿಮಿತ್ ಯೂತ್ ಕ್ಲಬ್ ಭಾರತ್ ಸ್ಕೌಟ್ ಅಂಡ್ ಗೈಡ್ಸ್ಗೆ ಪ್ರಥಮ ಸ್ಥಾನ ಲಭಿಸಿದ್ದು, ಶಾಸಕ ಗಾಲಿ ಜನಾರ್ಧನರೆಡ್ಡಿ, ತಹಶೀಲ್ದಾರ ಮಂಜುನಾಥ ಭೋಗಾವತಿ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ತಂಡದ ನಾಯಕ ಕಲಂದರ್ ಮತ್ತು ತರಬೇತುದಾರ ಸೈಯದ್ ಸಮೀರ್ ಮತ್ತಿತರಿಗೆ ಅಭಿನಂದನಾ ಪತ್ರ ನೀಡಿ ಕ್ಲಬ್ ಸದಸ್ಯರನ್ನು ಸನ್ಮಾನಿಸಿದರು. 

ಸೆ.17 ಭಾನುವಾರ  ನಗರದ  ಚನ್ನಬಸವಸ್ವಾಮಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.  ತಹಶೀಲ್ದಾರ ಮಂಜುನಾಥ ಧ್ವಜಾರೋಹರಣ ಮಾಡಿದ ನಂತರ ಶಾಸಕ ಗಾಲಿ ಜನಾರ್ಧನರೆಡ್ಡಿಗೆ ಪೊಲೀಸ್, ಎನ್ಸಿಸಿ, ಹೋಂಗಾರ್ಡ್ , ಭಾರತ ಸ್ಕೌಟ್ ಮತ್ತು ಗೈಡ್ಸ್, ಭಾರತ ಸೇವಾ ದಳ ಸೇರಿದಂತೆ ವಿವಿಧ ಶಾಲೆಯ ವಿದ್ಯಾಥರ್ಿಗಳು ಪಥ ಸಂಚಲನ ನಡೆಸಿ ಧ್ವಜ ವಂದನೆ ಸಲ್ಲಿಸಿದರು.  ಜಮಿತ್ ಯೂತ್ ಕ್ಲಬ್ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯ ತರಬೇತುದಾರ ಸೈಯದ್ ಸಮೀರ್, ತಂಡದ ನಾಯಕ ಕಲಂದರ್  ನೇತೃತ್ವದಲ್ಲಿ ಪತ ಸಂಚಲನದಲ್ಲಿ ಶಿಸ್ತು ಬದ್ಧವಾಗಿ ಭಾಗವಹಿಸಿದ್ದರು.  ಪಥ ಸಂಚಲನದ ನಂತರ ತಾಲೂಕು ಆಡಳಿತ ಸಂಚಲನದಲ್ಲಿ ಭಾಗವಹಿಸಿದ್ದ ಸಂಸ್ಥೆಗಳಿಗೆ ಅಭಿನಂದನಾ ಪತ್ರ ನೀಡಲಾಯಿತು. ಜಮಿತ್ ಯೂತ್ ಕ್ಲಬ್ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಗೆ ಪ್ರಥಮ ಸ್ಥಾನ ನೀಡಲಾಯಿತು.  ನಂತರ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಕಲಂದರ್ ಅವರು ನಮ್ಮ ಜಮೀತ್ ಭಾರತ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ವಿವಿಧ ಕಾಲೇಜ್ ಶಾಲೆ, ಕಾಲೇಜ್ ವಿದ್ಯಾರ್ಥಿಗಳ ಮೂಲಕ ಭಾರತ್ ಸ್ಕೌಟ್ ಗೈಡ್ಸ್ ತರಬೇತಿ ನೀಡುತ್ತಿದೆ.  ಈಗಾಗಲೇ ನಮ್ಮ ಭಾರತ್ ಗೈಡ್ಸ್ ಸಂಸ್ಥೆ ಸದಸ್ಯರು ದೇಹಲಿಯಲ್ಲೂ ತರಬೇತಿ ಪಡೆದುಕೊಂಡು ಬಂದಿದ್ದಾರೆ.  ನಗರದಲ್ಲಿ ನಡೆದ ಪಥ ಸಂಚಲನದಲ್ಲಿ ಶಿಸ್ತುಬದ್ಧವಾಗಿ ಪೆರೇಡ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.  ತಾಲೂಕು ಆಡಳಿತಕ್ಕೆ ನಾವು ಅಭಿನಂದಿಸುತ್ತೇವೆ ಎಂದರು.  ಪತಸಂಚಲನದಲ್ಲಿ ಸ್ಕೌಟ್ಸ್ ವಿದ್ಯಾಥರ್ಿಗಳಾದ ಆಸಿಫ್, ಪವನ್, ಯಾಸಿನ್, ಚಿರಂಜೀವಿ, ಅಹದ್, ವಿಕ್ರಂ, ಫರಾನ್, ವಿಜಯ್, ಸಾಕಿಬ್,  ಶಮಿದ್, ಇಸ್ಮಾಯಿಲ್,  ರಿಹಾನ್, ಇಬ್ರಾಹಿಂ ಮತ್ತಿತರು ಇದ್ದರು.  


ಸುದ್ದಿ ಓದಿ