ಸಾಮಾನ್ಯ ಹೋಟೆಲ್ ವ್ಯಾಪಾರಿ ಕಪಡೆವಾಲೆಗೆ ಜೆಡಿಎಸ್ ಟಿಕೆಟ್: ಹರ್ಷ
ಲೋಕದರ್ಶನ ವರದಿ,
ಜಮಖಂಡಿ 20: ನಗರದ ಸಾಮಾನ್ಯ ಹೋಟೆಲ್ ಅಂಗಡಿಯ ವ್ಯಾಪಾರಿ, ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಜಮಖಂಡಿ ಕ್ಷೇತ್ರದ ಟಿಕೆಟ್ ನೀಡಿದ್ದಾರೆ.
ಇಲ್ಲಿನ ಯಾಕುಬ ಕಪಡೆವಾಲೆ ಅವರು ಜೆಡಿಎಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತಾ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಇಚ್ಚೆಯಿಂದ ಪಕ್ಷದ ಮುಖಂಡರಿಗೆ ಮನವಿ ಪತ್ರ ಸಲ್ಲಿಸಿದ್ದರು, ಇದಕ್ಕೆ ಪಕ್ಷದ ಮುಖಂಡರು ಸ್ಪಂದಿಸಿ ಟಿಕೆಟ್ ನೀಡಿದ್ದು ಯಾಕುಬ ಕಪಡೆವಾಲೆ ಅವರಲ್ಲಿ ಬಹಳಷ್ಟು ಸಂತೋಷ ಮೂಡಿಸಿದೆ.
ಪಕ್ಷದ ಮುಖಂಡರು ನನಗೆ ಟಿಕೆಟ್ ನೀಡಿದ್ದು ಬಹಳಷ್ಟು ಸಂತೋಷ ಮೂಡಿಸಿದೆ, ಕ್ಷೇತ್ರದ ತುಂಬೆಲ್ಲ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನಪರ ಕಾರ್ಯಗಳನ್ನು ಜನರ ಬಳಿ ಹೇಳಿಕೊಂಡು ಮತಯಾಚಿಸುತ್ತೆನೆ ಇದಕ್ಕೆ ಎಲ್ಲರು ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು.