ಗ್ರಾಮಗಳಲ್ಲಿ ಸುರಕ್ಷತಾ ಜಾಥಾ ನಡೆಸಿದ ಜೆ.ಎಸ್.ಡಬ್ಲ್ಯೂ. 11000 ಶಾಲಾ ವಿದ್ಯಾಥರ್ಿಗಳು ಭಾಗಿ

ಗ್ರಾಮಗಳಲ್ಲಿ ಸುರಕ್ಷತಾ ಜಾಥಾ ನಡೆಸಿದ ಜೆ.ಎಸ್.ಡಬ್ಲ್ಯೂ. 11000 ಶಾಲಾ ವಿದ್ಯಾಥರ್ಿಗಳು ಭಾಗಿ

 ಬಳ್ಳಾರಿ 02:ಜೆ.ಎಸ್.ಡಬ್ಲ್ಯೂ.ನಲ್ಲಿ ಸುರಕ್ಷತೆಯು ಅತ್ಯಮೂಲ್ಯ. ಸುರಕ್ಷತೆಯನ್ನು ಬಲಪಡಿಸುವ ಸಲುವಾಗಿ ಹೊಸ ವರ್ಷದ ದಿನದಂದು ಜೆ.ಎಸ್.ಡಬ್ಲ್ಯೂ. ತನ್ನ ಮೂರು ಟೌನ್ಶಿಪ್ ಹಾಗೂ  ವಡ್ಡು, ಬಸಾಪುರ ಮತ್ತು ತಾಳೂರು ಗ್ರಾಮಗಳಲ್ಲಿ ಸುರಕ್ಷತಾ ಜಾಥಾ ನಡೆಸಿತು. ಟಿ.&ಸಿ ಉಪಸಮಿತಿಯು, ಸುರಕ್ಷತೆಯ ಬಗ್ಗೆ ಚಚರ್ೆ, ಮೆರವಣಿಗೆ, ಸಂಕ್ಷಿಪ್ತ ಮಾಹಿತಿ, ಚಚರ್ೆ ಹಾಗೂ ಸ್ಕಿಟ್ಗಳನ್ನು ನಡೆಸಿತು. ಸುತ್ತಮುತ್ತಲಿನ ಗ್ರಾಮದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಜಾಥಾವನ್ನು ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಮೂರು ಗ್ರಾಮಗಳ ಗ್ರಾಮ ಪಂಚಾಯತ್ಗಳು ಬೆಂಬಲಿಸಿದ್ದವು. ಮಕ್ಕಳ ಹೊರತಾಗಿ ಸುರಕ್ಷತೆಯ ಉತ್ತಮ ಪ್ರತಿಪಾದಕರು ಯಾರು? ಪೋಷಕರಿಗೆ ಅವರ ಮಕ್ಕಳೇ ನಿಧಿ. ಅವರ ಮನವಿಯು ಪೋಷಕರಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಸಾಮಾನ್ಯವಾಗಿ ಹೊಸ ವರ್ಷದ ಮೊದಲ ದಿನದಂದು ಅನೇಕರು ಹೊಸ ನಿರ್ಣಯಗಳು ತೆಗೆದುಕೊಳ್ಳುತ್ತಾರೆ. 8 ಶಾಲೆಯಿಂದ ಸಮಾರು 11000ಕ್ಕೂ ಹೆಚ್ಚು ಮಕ್ಕಳು ಸುರಕ್ಷತಾ ಮೌಲ್ಯಗಳು ಮತ್ತು ವಿಧಾನಗಳುಳ್ಳ ಶುಭಾಶಯ ಪತ್ರಗಳನ್ನು ತಮ್ಮ ಪೋಷಕರಿಗೆ ನೀಡಿ ಸುರಕ್ಷೆಯ ಸಂದೇಶ ಸಾರಿದರು. ಈ ಹೊಸ ವರ್ಷದ ಮೊದಲ ದಿನದಂದು ನಡೆದ ಜಾಥಾದಲ್ಲಿ, ಜೆ.ಎಸ್.ಡಬ್ಲ್ಯೂ. ನಿರ್ವಹಿಸುವ ಶಾಲೆಗಳು ಮತ್ತು ಸುತ್ತಲಿನ ಗ್ರಾಮಗಳ ವಿದ್ಯಾಥರ್ಿಗಳು ಭಾಗವಿಸಿದ್ದರು.  ಜೆ.ಎಸ್.ಡಬ್ಲ್ಯೂ. ವಿವಿಧ ಇಲಾಖೆಯ ಉದ್ಯೋಗಿಗಳು ಗೃಹ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜಾಥಾ ನಡೆಸಿ ಸುರಕ್ಷತೆಯ ಬಗ್ಗೆ ವಿವರಿಸಿದರು. ಸುರಕ್ಷತೆಯ ಸದ್ಗುಣ ಮತ್ತು ಸಂದೇಶ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಎಲ್ಲರೂ ಸುರಕ್ಷಿತರಾಗಿರಬಹುದು. ಸುತ್ತಮುತ್ತಲಿನ ಗ್ರಾಮಸ್ಥರು ಸುರಕ್ಷಿತವಾಗಿರಲು ಜೆ.ಎಸ್.ಡಬ್ಲ್ಯೂ. ಎಲ್ಲ ತರಹದ ಪ್ರಯತ್ನಗಳು/ವಿಧಾನಗಳು ರೂಪಿಸಿದೆ 

ಸುದ್ದಿ ಓದಿ