ವಿದ್ಯಾರ್ಥಿಗಳು ಸಾಧನೆಯ ಗುರಿಯನ್ನು ಇಟ್ಟುಕೊಳ್ಳುವದು ಬಹಳ ಮುಖ್ಯ: ಎಸ್ಪಿ, ಅಮರನಾಥ ರೆಡ್ಡಿ
ಜಮಖಂಡಿ 29: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧನೆಯ ಗುರಿಯನ್ನು ಇಟ್ಟುಕೊಳ್ಳುವದು ಬಹಳ ಮುಖ್ಯವಾಗಿದೆ. ಯಾರು ಗುರಿಯನ್ನು ಇಟ್ಟುಕೊಳ್ಳುತ್ತಾರೆ ಅವರು ಸಾಧನೆಯನ್ನು ಮಾಡಲು ಸಾಧ್ಯ ಎಂದು ಜಿಲ್ಲಾ ಎಸ್ಪಿ, ಅಮರನಾಥ ರೆಡ್ಡಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಅಪರಾದ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿದಿನ ವಿದ್ಯಾರ್ಥಿಗಳು ನ್ಯೂಸ್ ಪೇಪರಗಳನ್ನು ಓದುವದನ್ನು ರೂಡಿಸಿಕೊಳ್ಳಬೇಕು. ಹೆತ್ತ ತಂದೆ,ತಾಯಿಗಳಿಗೆ ನಮಸ್ಕರಿಸುವದನ್ನು ರೂಡಿಸಿಕೊಳ್ಳಬೇಕು. ತಿನ್ನುವ ಆಹಾರದಲ್ಲಿ ತರಕಾರಿ ಪಲ್ಲೆಗಳನ್ನು ತಿನ್ನುವ ಮೂಲಕ ತಲೆಯು ಚುರುಕು ಆಗುತ್ತದೆ. ಇದರಿಂದ ಗಣ ತ ಹಾಗೂ ಇಂಗ್ಲೀಷ ಓದಲು ಮತ್ತು ಬರೆಯಲು ಸರಳವಾಗುತ್ತದೆ. ಪ್ರತಿನಿತ್ಯ ನಸುಕಿನ ಜಾವದಲ್ಲಿ ಎದ್ದು. ಅಭ್ಯಾಸವನ್ನು ಮಾಡಿದರೆ. ಮುಂಬರುವ ಪರಿಕ್ಷೇಗಳನ್ನು ಗೆಲ್ಲಲು ಸಾದ್ಯವಾಗುತ್ತದೆ ಎಂದರು.
ಪ್ರಕೃತಿ ಹೇಗೆ ಎಲ್ಲರನ್ನು ಪ್ರೀತಿಸುತ್ತದೆ ಹಾಗೆ ಅಭ್ಯಾಸ ಮಾಡುವ ಸಮಯದಲ್ಲಿ ಪುಸ್ತಕಗಳನ್ನು ಪ್ರೀತಿಸಬೇಕು. ಶಿಕ್ಷಣಕ್ಕೆ ಜಾತಿ, ಮತ ಎಂದು ಭೇಧ,ಭಾವವಿಲ್ಲ. ಅದು ಎಲ್ಲರನ್ನು ಪ್ರೀತಿಸುತ್ತದೆ. ಮಹಾನ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಅವರ ಜೀವನ ಚರಿತ್ರೆಯ ಪಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಳ್ಳುವ ಅತೀ ಅವಶ್ಯಕವಾಗಿದೆ. 25 ವರ್ಷದ ವಯಸ್ಸಿನಲ್ಲಿ ಮಾತ್ರ ಗುರಿಯನ್ನು ಮುಟ್ಟಿ ಸಾಧನೆಯನ್ನು ಸಾಧಿಸಲು ಸಾಧ್ಯ. ಯಾವುದೇ ಪದವಿಯನ್ನು ಮುಗಿಸಬೇಕಾದರೆ ಶ್ರದ್ದೆ, ಭಕ್ತಿಯಿಂದ, ಶಿಸ್ತಿನಿಂದ ಇದ್ದರೆ ಮಾತ್ರ ನಿಮ್ಮ ಸಾಧನೆಯ ಗುರಿಯನ್ನು ತಲುಪಲು ಸಾಧ್ಯ ಎಂದರು.
ಅಪರಾಧ ತಡೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ತಮ್ಮ ಗಮನಕ್ಕೆ ಯಾವುದೇ ಅಪರಾದಗಳು ನಡೆದರೆ ಭಯ ಪಡದೆ ಪೋಲಿಸ್ ಇಲಾಖೆಗೆ ಮಾಹಿತಿಯನ್ನು ನೀಡಬಹುದು. ಅಮವಾಸೆ ದಿನದಂದು ದೇವರಿಗೆಂದು ಕೆಲವಂದಿಷ್ಟು ಜನರು ಬೇರೆ ಊರುಗಳಿಗೆ ಹೋಗಬೇಕಾದರೆ. ಪಕ್ಕದ ಮನೆಯವರಿಗೆ ಮಾಹಿತಿಯನ್ನು ನೀಡಬೇಕು. ಅದರ ಜೊತೆಯಲ್ಲಿ ತಾವುಗಳು ವಾಸಿಸುವ ಸ್ಥಳದ ಬೀಟ್ ಪೋಲೀಸ್ರಿಗೆ ಮಾಹಿತಿ ನೀಡಬೇಕು. ಇದರಿಂದ ಕಳ್ಳತನ ಪ್ರಕರಣವನ್ನು ತಡೆಯಲು ಸಾಧ್ಯವಾಗುತ್ತದೆ, ತಾವುಗಳು ಯಾವುದೆ ತೊಂದರೆಯಲ್ಲಿ ಸಿಲುಕಿದರೆ ಹಾಗೂ ವಾಸಿಸುವ ಸ್ಥಳದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದರೆ. ನಮ್ಮ ಪೋಲಿಸ್ ಇಲಾಖೆಗೆ 112 ನಂ,ಕರೆ ಮಾಡಿದರೆ ಸಾಕು. ಹತ್ತು ನಿಮಿಷ್ಯದಲ್ಲಿ ನಮ್ಮ ಪೋಲಿಸ್ರು ತಮ್ಮಲ್ಲಿಗೆ ಬರುತ್ತಾರೆ. ಇದರಿಂದ ಸಾಕಷ್ಟು ಅಪರಾದ ತಡೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡದರು.
ಡಿಎಸ್ಪಿ, ಶಾಂತವೀರ ಈ, ಮುಧೋಳ ಸಿಪಿಐ ಮಾದೇವ ಶಿರಹಟ್ಟಿ, ಜಮಖಂಡಿ ಸಿಪಿಐ ಮಲ್ಲಪ್ಪ ಮಡ್ಡಿ, ರಬಕವಿ-ಬನಹಟ್ಟಿ ಸಿಪಿಐ ಸಂಜು ಬಳಗಾರ, ಬಿಈಓ, ಅಶೋಕ ಬಸನ್ನವರ, ಸಿಆರಿ್ಸಎಸ್ ರಮೇಶ ಅವಟ್ಟಿ, ಕಾಲೇಜ ಪ್ರಾಚಾರ್ಯ ಜೆ.ಪಿ.ದೊಡಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.