‘ಪುಟ್ಟರಾಜ ಕವಿ ಗವಾಯಿಗಳ ಸಂಸ್ಥೆಗೆ ಒಂದು ನೆಲೆ ಇಲ್ಲದಿರುವುದು ಬೇಸರ ತರಿಸಿದೆ’
ಶಿಗ್ಗಾವಿ 11: ಪಟ್ಟಣದಲ್ಲಿ ಕಳೆದ 12 ವರ್ಷಗಳಿಂದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸಂಸ್ಥೆಗೆ ಒಂದು ನೆಲೆ ಇಲ್ಲದಿರುವುದು ಬೇಸರ ತರಿಸಿದೆ ಎಂದು ಸಂಸ್ಥೆ ಅಧ್ಯಕ್ಷ ಪಕ್ಕಿರೇಶ ಕೋಂಡಾಯಿ ಹೇಳಿದರು.
ಪಟ್ಟಣದ ತಾಲೂಕ ಪಂಚಾಯತ ಹಳೇ ಕೋರ್ಟ ಆವರಣದಲ್ಲಿ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕಲಾ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಲಿ.ಪಂ.ಪು.ಕ.ಗ.ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಬಳಿಗೆ ನಮ್ಮ ಕಲಾವಿದರೆಲ್ಲರೂ ಸೇರಿ ಹೋಗಿ ಬೇಟಿಯಾದರೂ ಹಾಗೂ ಅವರ ಧರ್ಮಪತ್ನಿ ಚೆನ್ನಮ್ಮ ಬಸವರಾಜ ಬೊಮ್ಮಾಯಿ ಹತ್ತಿರ ಮಹಿಳಾ ನಿರ್ದೇಶಕರು ಬೇಟಿಯಾಗಿ ಸಂಸ್ಥೆಯ ಬಹಳ ದಿನಗಳ ಕನಸಾದ ಸಾಂಸ್ಕೃತಿಕ ಭವನ ನಿರ್ಮಾಣದ ಬಗ್ಗೆ ವಿಷಯ ಪ್ರಸ್ತಾಪ ಪಡಿಸಿದರು ಮುಖ್ಯಮಂತ್ರಿಗಳು ಸುಮ್ಮನಿರುವುದು ನಮಗೆ ಬೇಸರ ತರಿಸಿದೆ ಆದ್ದರಿಂದ ನಾವು ರಾಜಕಾರಣಿಗಳನ್ನು ಹೊರತುಪಡಿಸಿ ಉಳಿದ ಜನಸಾಮಾನ್ಯರ ಹತ್ತಿರ ಹೋಗಿ ಪ್ರತಿ ವ್ಯಕ್ತಿಗೆ 11 ರೂಗಳಂತೆ ಹಣ ವಸೂಲಿ ಮಾಡಿ ಕಲಾವಿದರ ಭವನ ನಿರ್ಮಾಣ ಮಾಡಲು ಸಂಕಲ್ಪ ಮಾಡಿದ್ದೇವೆ ಎಂದರು.
ಪಿ.ಎಸ್.ಐ ಮಹದೇವ ಯಲಿಗಾರ ಮಾತನಾಡಿ ಕಲೆಗೆ ಬೆಲೆ ಬರಲು ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಕಾರಣ ಅಲ್ಲದೇ ನಮ್ಮದು ಡಿ.ಜೆ ಕಲೆಯಲ್ಲ ನಮ್ಮ ಸಂಸ್ಕೃತಿಯೂ ಅಲ್ಲ, ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಸಿಗಬೇಕು ಕಲಾವಿದರು ಎಂದಿಗೂ ಹೋರಾಟ ಮಾಡಬಾರದು ಆ ನಿಟ್ಟಿನಲ್ಲಿ ಸರಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಹಾಗೂ ಎಲ್ಲಿಯವರೆಗೂ ಕಲಾವಿದರು ಇರುತ್ತಾರೆ ಅಲ್ಲಿಯವರೆಗೆ ಕಲೆ ಇರುತ್ತದೆ ಎಂದರು.
ದಿವ್ಯಸಾನಿಧ್ಯವಹಿಸಿ ಶ್ರೀ ಸಂಗನಬಸವ ಮಹಾಸ್ವಾಮಿಗಳು ಆರ್ಶಿವದಿಸಿದರು, ಅಧ್ಯಕ್ಷತೆ ಕೋಟ್ರೇಶ ಮಾಸ್ತರ ಬೆಳಗಲಿ, ಜಯದೇವ ಅಗಡಿ, ಮಲ್ಲಪ್ಪ ರಾಮಗೇರಿ, ಡಾ.ಜೆ.ಸಿ.ನಿಡಗುಂದಿ, ಡಾ.ಸಿ.ಡಿಯತ್ನಳ್ಳಿ, ಕೇದಾರ್ಪ ಬಗಾಡೆ, ಪ್ರಕಾಶ ಹಾದಿಮನಿ, ಮಂಜುನಾಥ ಮಣ್ಣಣ್ಣವರ, ಎಸ್.ಎನ್.ಮುಗಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಲತಾ ನಿಡಗುಂದಿ, ಬಸನಗೌಡ್ರ ರಾಮನಗೌಡ್ರ, ರುದ್ರಗೌಡ ಪಾಟೀಲ, ವಿಜಯಲಕ್ಷ್ಮೀ ಹೆಸರೂರ, ಅನಿತಾ ಗೊಬ್ಬರಗುಂಪಿ, ಶಂಕರಣ್ಣಾ ಅಯ್ಯಣ್ಣವರ, ಶಂಕರ ಅರ್ಕಸಾಲಿ, ಸುರೇಶ ಅರ್ಕಸಾಲಿ, ಬಸವರಾಜ ಶಿಗ್ಗಾವಿ, ವಿರುಪಾಕ್ಷಪ್ಪ ಬಗಾಡೆ, ಎಸ್.ಕೆ.ಹೂಗಾರ, ವಾಯಲಿನ ವಾದಕ ಹನುಮಂತಪ್ಪ ತಿಮ್ಮಾಪೂರ, ಸೇರಿದಂತೆ ವಿವಿಧ ಕಲಾವಿದರು ಹಾಗೂ ಮಕ್ಕಳಿಂದ ಸಂಗೀತ ಸೇವೆ ನೇರವೇರಿತು. ಶಿಕ್ಷಕ ಎನ್.ಎ.ಚಲವಾದಿ ಸ್ವಾಗತಿಸಿದರು, ಸಹ ಪ್ರಾದ್ಯಾಪಕ ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು.