ಬಸವಣ್ಣನವರ ವಚನ ಸಾಹಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವದು ಮುಖ್ಯ: ಹರ್ಷಾನಂದ ಸ್ವಾಮೀಜಿ
ಜಮಖಂಡಿ 23: ಕಾಮದೇನು ಕಲ್ಪವೃಕ್ಷ ನಂಬಿದವರಿಗೆ ಬೇಡಿದ ವರವನ್ನು ನೀಡುವ ಶಕ್ತಿಯನ್ನು ಹೊಂದಿದೆ. ಅದರಂತೆ ಬಸವನ್ನವರ ವಚನ ಸಾಹಿತ್ಯ ಭಂಡಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಬಹಳ ಮುಖ್ಯವಾಗಿದೆಂದು ಹುಲ್ಯಾಳದ ಹರ್ಷಾನಂದ ಸ್ವಾಮೀಜಿ ಹೇಳಿದರು.
ನಗರದ ಓಲೇಮಠದಲ್ಲಿ ನಡೆದ ಶ್ರಾವಣ ಮಾಸದ ಪ್ರಯುಕ್ತ ಬಸವ ಸಮಕಾಲಿನ ಶರಣರ ಚರಿತಾಮೃತ ಪ್ರವಚನ ಚಿಂತಕರಿಂದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನ್ನವರ ಮನಸಿನಲ್ಲಿ ಒಳ್ಳೆಯ ಭಾವನೆಗಳು ತುಂಬಿಕೊಂಡಿದ್ದವು. ಅವರಲ್ಲಿ ಕೆಟ್ಟ ಭಾವನೆೆಗಳು ಇರಲಿಲ್ಲ. ಕೇವಲ ಲಿಂಗವನ್ನು ಕಟ್ಟಿಕೊಂಡರೆ ಮನಸ್ಸು ಪರಿವರ್ತನೆ ಆಗುತ್ತದೆ ಎಂದು ತಿಳಿದುಕೊಂಡಿರುವ ಜನತೆಯಲ್ಲಿ, ಕೆಲವರು ಕಲ್ಲು, ಬದನೆಕಾಯಿ ಕಟ್ಟಿಕೊಂಡು ಅವರ ಬಳಿಗೆ ಬಂದಿದ್ದರು. ಆದರೆ ಅವರಿಗೆ ತಿಳಿ ಹೇಳಿ. ನಿಮ್ಮ ಮನಸಿನ ಭಾವನೆಯಲ್ಲಿ ಅದುವೇ ಲಿಂಗವಾಗಿದೆ. ನೀವುಗಳು ಭಕ್ತಿಯಿಂದ ಕೂಡಲಸಂಗಮನ ಪೂಜಿಸಿದರೆ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು. ಸಮಾನತೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಶರಣರು ಯಾರಾದರು ಇದ್ದರೆ ಅದು ಅಣ್ಣ ಬಸವಣ್ಣನವರು. ಪ್ರತಿಯೊಂದು ವಚನ ಸಾಹಿತ್ಯದಲ್ಲಿ ಸಮಾನತೆ ಬಗ್ಗೆ ತಿಳಿಸಿದ್ದಾರೆ. ಅವರ ವಚನ ಭಂಡಾರವನ್ನು ತಿಳಿದುಕೊಳ್ಳುವದು ಅವಶ್ಯವಾಗಿದೆ ಎಂದರು.
ಓಲೇಮಠದ ಡಾ, ಚನ್ನಬಸವ ಶ್ರೀಗಳು ಮಾತನಾಡಿ, ಜೀವನದಲ್ಲಿ ಆಹಾರವನ್ನು ಹಿತಬುಕ್. ಮಿತಬುಕ್, ಋತುಬುಕ್ ಸೇವಿಸಿದರೆ ಮಾತ್ರ ದೇಹ ಆರೋಗ್ಯಕರವಾಗಿರುತ್ತದೆ. ಜ್ಞಾನ, ಯೋಗ, ಪ್ರಾಣಾಯಾಮ, ಭಜನೆ, ಶಾಸ್ತ್ರ, ಪುರಾಣಗಳನ್ನು ಕೇಳುವದರಿಂದ ಮನಸು ಪರಿವರ್ತನೆಯಾಗುತ್ತದೆ. ಋತುವಿಗೆ ತಕ್ಕಂತೆ ಆಹಾರ ಸೇವನೆ ಮಾಡಬೇಕು. ನೆನೆಸಿರುವ ಕಾಳುಗಳನ್ನು ತಿನ್ನುವದರಿಂದ ದೇಹ ಸದೃಡವಾಗುತ್ತದೆ. ಸಾಧನೆ ಮಾಡಬೇಕಾದರೆ ದೇಹ ಸದೃಡವಾಗಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಇಂದಿನ ತಾಯಂದಿಯರು ಕೆಲಸದ ಒತ್ತಡದಲ್ಲಿ ಸರಿಯಾಗಿ ಆಹಾರವನ್ನು ಸೇವಿಸುವದು ಕಂಡಿಮೆಯಾಗುತ್ತಿದೆ. ಅದಕ್ಕಾಗಿ ದೇಹ ಚನ್ನಾಗಿ ಇದ್ದರೆ ಮಾತ್ರ ಎಲ್ಲವೂ ಒಳ್ಳೆಯದಾಗಿರುತ್ತದೆ ಎಂದು ಆರ್ಶಿವಚನ ನೀಡಿದರು.
ಡಾ,ಜಿ,ಎಚ್,ದಡ್ಡಿ ಉಪನ್ಯಾಸವನ್ನು ನೀಡಿದರು. ತಾಯಿ ಭಾರತಿ ಅಮ್ಮನವರು ಆರ್ಶೀವಚನ ನೀಡಿದರು. ಶಂಕರ ಲಮಾಣಿ ನಿರೂಪಿಸಿದರು. ಶಿವಾನಂದ ಕೊಣ್ಣುರ ವಂದಿಸಿದರು.