ಗೋಕಾಕ್

ಗೋಕಾಕ: ಈಶ್ವರ ಮಮದಾಪೂರ "ಪ್ರೇಮದ ಪ್ರವಾದಿ"ಯಾಗಿ ಕಾಣುತ್ತಾರೆ: ಕವಿ ಡಾ.ಸಿ.ಪಿ.ಕೆ

ಗೋಕಾಕ: ಈಶ್ವರ ಮಮದಾಪೂರ "ಪ್ರೇಮದ ಪ್ರವಾದಿ"ಯಾಗಿ ಕಾಣುತ್ತಾರೆ: ಕವಿ ಡಾ.ಸಿ.ಪಿ.ಕೆ

ಲೋಕದರ್ಶಣ ವರದಿ

ಗೋಕಾಕ 23:  ಪ್ರೇಮ ಮತ್ತು ವಿರಹದ ಸಂವೇದನೆಗಳನ್ನು "ಮಮದಾಪೂರ ಹನಿಗವಿತೆ" ಗಳನ್ನು ದಟ್ಟವಾಗಿದ್ದರೂ ಕೂಡ ಪ್ರೀತಿಯೇ ಇವರ ಹನಿಗವಿತೆಗಳ ಮೂಲ ಸೆಲೆಯಾಗಿದೆ. ಮಾನವೀಯತೆ ಮತ್ತು ಒಲವು ಇವರ ಬಹುತೇಕ ಚುಟುಕು ಮತ್ತು ಹನಿಗವಿತೆಗಳಲ್ಲಿ ದಟ್ಟವಾಗಿದ್ದರಿಂದ ಈಶ್ವರ ಮಮದಾಪೂರ "ಪ್ರೇಮದ ಪ್ರವಾದಿ"ಯಾಗಿ ಕಾಣುತ್ತಾರೆ ಎಂದು ಹಿರಿಯ ಕವಿ ಡಾ.ಸಿ.ಪಿ.ಕೆ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಮೈಸೂರಿನ ಜಿಲ್ಲಾ ಕಸಾಪ ಸಭಾಭವನದಲ್ಲಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾಚುಟುಕು ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಜರುಗಿದ ಈಶ್ವರ ಮಮದಾಪೂರ ಇವರ "ಮಮದಾಪೂರ ಹನಿಗವಿತೆಗಳು" ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇವರ ಬಹುಪಾಲು ಚುಟುಕಿಗೆ ಪ್ರಿತಿಯೇ ಮೂಲವಾಗಿದ್ದು ಸ್ನೇಹ-ವಾತ್ಸಲ್ಯಕೂಡ ಪ್ರೀತಿಯ ಮುಖಗಳೇ ಆಗಿವೆ. ಈ ಹಿಂದೆಇವರಚುಟುಕು ಸಂಕಲನ ಬಿಡುಗಡೆ ಸಂದರ್ಭದಲ್ಲಿಈಶ್ವರ ಮಮದಾಪೂರ ಇವರಿಗೆ "ಪ್ರೇಮದ ಪ್ರವಾದಿ" ಎಂಬ ಬಿರುದು ನೀಡಿದ್ದೇನೆಎಂದರು.

ಕೃತಿಕುರಿತು ಮಾತನಾಡಿದ ಅನ್ವೇಷಣಾ ಸೇವಾ ಟ್ರಸ್ಟ ಅಧ್ಯಕ್ಷ ಡಾ. ಎಂ ಜಿ ಆರ್ಅರಸ್- "ಮಮದಾಪೂರ ಹನಿಗವಿತೆಗಳಲ್ಲಿ ಒಲವಿನ ಜೇನುಗೂಡೇ ತುಂಬಿಕೊಂಡಿದ್ದು ಭಾವತೀರ್ವತೆ ದಟ್ಟವಾಗಿದೆ ಎಂದು ಅಭಿಪ್ರಾಯಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ. ವೈ ಡಿ ರಾಜಣ್ಣ ಮಾತನಾಡುತ್ತಾ-"ಪ್ರಾಸವಿಲ್ಲದೆಕಾವ್ಯ ಮಿಮಾಂಸೆಯೇ ಇಲ್ಲಾ. ಆದರೆ ಬರಿ ಪ್ರಾಸದಿಂದಲೇ ರಚಿಸಿದ ಕವಿತೆಯುಒಬ್ಬ ಒಳ್ಳೆಯ ಕವಿಯನ್ನು ರೂಪಿಸುವುದಿಲ್ಲ. ಕವಿಗೆ ಕಂಡದ್ದನ್ನು, ಅನಿಸಿದ್ದನ್ನು ಹೇಳುವ ಧೈರ್ಯವಿರಬೇಕು" ಎಂದರು.

ಕೃತಿಕಾರ ಈಶ್ವರ ಮಮದಾಪೂರ ಮಾತನಾಡುತ್ತಾ-"ಉತ್ತರಕನರ್ಾಟಕದ ಕವಿಗಳ ಕೃತಿಗಳು ದಕ್ಷಿಣ ಕನರ್ಾಟಕದಲ್ಲಿ, ದಕ್ಷಿಣಕನರ್ಾಟಕದ ಕೃತಿಗಳು ಉತ್ತರಕನರ್ಾಟಕದಲ್ಲಿ ಬಿಡುಗಡೆಗೊಳ್ಳಬೇಕು. ವಿಮಶರ್ೆ ಮತ್ತು ಮೆಚ್ಚುಗೆಯ ನುಡಿಗಳು ಹೊರಬರಬೇಕು. ತನ್ಮೂಲಕ ಅಖಂಡ ಕನರ್ಾಟಕದ ಸಾಂಸೃತಿಕ ಮತ್ತು ಸಾಹಿತ್ಯದ ಭಾವನಾತ್ಮಕ ಬಾಂಧವ್ಯ ಗಟ್ಟಿಗೊಳ್ಳಬೇಕು".ಎಂದು ಅಭಿಪ್ರಾಯಿಸಿದರು. ಇದೇ ಸಂದರ್ಭದಲ್ಲಿ ಈಶ್ವರ ಮಮದಾಪೂರ ಇವರನ್ನು ಸಂಘಟಕರು ಸತ್ಕರಿಸಿ ಗೌರವಿಸಿದರು.

ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಮೂವತ್ತಕ್ಕೂ ಹೆಚ್ಚು ಕವಿಗಳು ಚುಟುಕು ಕವನಗಳನ್ನು ವಾಚಿಸಿದರು. ಮೈಸೂರು ಜಿಲ್ಲಾ ಕಸಾಪ ಮಾಜಿಅಧ್ಯಕ್ಷ ಮಡ್ಡೀಕೆರೆ ಗೋಪಾಲ, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ ಚಂದ್ರಶೇಖರ, ಮೈಸೂರು ಜಿಲ್ಲಾಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಡಾ. ರತ್ನಾ ಹಾಲಪ್ಪಗೌಡ, ಕಸಾಪ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕದಂಬ, ಗಾಯತ್ರಿಕದಂಬ, ಎಚ್ಎನ್ ಲೋಕೆಶಪ್ಪ ಮೊದಲಾದವರು ಉಪಸ್ಥಿತರಿದ್ದರು. 



 

ಸುದ್ದಿ ಓದಿ