ಬೆಳಗಾವಿ

“ಹೂಡಿಕೆದಾರರು ಹಾಗೂ ಶೇರುದಾರರು” ಒಂದೇ ಮುಖದ ಎರಡು ನಾಣ್ಯ ಇದ್ದ ಹಾಗೆ ಹಿ ದತ್ತಾತ್ರೇಯ ಬೋದ ಸ್ವಾಮಿಜಿ

“ಹೂಡಿಕೆದಾರರು ಹಾಗೂ ಶೇರುದಾರರು” ಒಂದೇ ಮುಖದ ಎರಡು ನಾಣ್ಯ ಇದ್ದ ಹಾಗೆ ಹಿ ದತ್ತಾತ್ರೇಯ ಬೋದ ಸ್ವಾಮಿಜಿ

ಲೋಕದರ್ಶನ ವರದಿ 


ಗುರ್ಲಾಪೂರ 13: ಮೂಡಲಗಿ ಪಟ್ಟಣದ ಲಕ್ಷ್ಮೀ ನಗರದಲ್ಲಿರುವ ಮದಗನ್ನವರ ಬಿಲ್ಡಿಂಗದಲ್ಲಿ ಇತ್ತೀಚಿಗೆ ಕೆ ಲಕ್ಷ್ಮೀ ಅರ್ಬನ ಕೋ ಆಪ್ ಕ್ರೇಡಿಟ್ ಸೋಸಾಯಿಟಿಯನ್ನು ಮೂಡಲಗಿಯ ದತ್ತಾತ್ರೇಯ ಸ್ವಾಮಿಜಿಯವರ ಅಮೃತ ಹಸ್ತದಿಂದ ಉದ್ಗಾಟನೆ ಮಾಡಿ ಮಾತನಾಡುತ್ತಾ ಮೂಡಲಗಿ ಪಟ್ಟಣವು ಸಹಕಾರಿ ನಗರವಾಗಿ ಹೋರ-ಹೋಮ್ಮಿದೆ ಹೂಡಿಕೆದಾರರು ಹಾಗೂ ಶೇರುದಾರರು ಒಂದೇ ಮುಖದ ಎರಡು ನಾಣ್ಯ ಇದ್ದ ಹಾಗೆ ಇದರಿಂದ ಪಟ್ಟಣವು ಅಬಿವೃದ್ದಿ ಜೊತೆಗೆ ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಸಹಕಾರಿ ಸಂಘವು ಅನುಕೂಲವಾಗಿ ಸಮಾಜದಲ್ಲಿ ಎಲ್ಲರು ಆರ್ಥಿಕವಾಗಿ ಮುಂದೆ ಬರಬೇಕೆಂದು. 

 ಮುಖ್ಯ ಅಥೀತಿಗಳಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ತಮ್ಮಣ್ಣ ಕೆಂಚರೆಡ್ಡಿ ಮಾತನಾಡುತ್ತಾ ಸಹಕಾರಿ ಸಂಘಗಳು ಬೆಳೆಯುವಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರ ಜವಾಬ್ದಾರಿಯನ್ನು ತಿಳಿಸುತ್ತಾ ಸಂಘದ ಸದಸ್ಯರು ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿ ಸಂಘವು ಅಬಿವೃಧ್ದಿ ಹೊಂದಲು ಸಹಕರಿಸಬೇಕು ಹಾಗೇ ಹೂಡಿಕೆದಾರರ ವಿಶ್ವಾಸವನ್ನು ಸಂಘವು ಕಾಯ್ದುಕೊಳ್ಳಬೇಕೆಂದು 

ಕೆ ಲಕ್ಷ್ಮೀ ಅರ್ಬನ ಕೋ ಆಪ್ ಕ್ರೇಡಿಟ್ ಸೋಸಾಯಿಟಿಯ ಅಧ್ಯಕ್ಷರಾದ ಮಲ್ಲಪ್ಪ ಚಿಪ್ಪಲಕಟ್ಟಿ ಮಾತನಾಡುತ್ತಾ ಹೊಸದಾಗಿ ಪ್ರಾರಂಭ ಮಾಡಿದ ಸಂಘವು ಪ್ರಗತಿ ಹೊಂದಲು ನಿಮ್ಮೆಲರ ಸಹಕಾರ ಅವಶ್ಯವಾಗಿದೆ ಹೂಡಿಕೆದಾರರ ಶೇರುದಾರರಿಗೆ ಯಾವುದೆ ತೊಂದರೆ ಆಗದಂತೆ ನಡೆದುಕೊಳ್ಳುತ್ತೆವೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಸಂತೋಷ ಸೋನವಾಲ್ಕರ, ಹಣಮಂತ ಗುಡ್ಲಮನಿ, ಪ್ರದೀಪ ಲಂಕೇಪ್ಪನವರ, ವೇಂಕಟೇಶ ಬಾಲರೇಡ್ಡಿ, ಬಾಲಶೇಕರ ಬಂದಿ, ಡಾ. ಎಸ್ ಎಸ್ ದಂಡಪ್ಪನವರ, ಬಿ ವಾಯ್ ಪಾಟೀಲ, ಪಿ ಡಿ ಗಾಣಿಗೇರ, ಶಿವಾನಂದ ಮರಾಠೆ, ಜಯಪ್ರಕಾಶ ಗಾಣಿಗೇರ, ಶ್ರೀಶೈಲ ಜಯನಾಪೂರ, ಮಲ್ಲಪ್ಪ ಮದಗುಣಕಿ ಹಾಗೂ ಸಂಘದ ಉಪಾಧ್ಯಕ್ಷರಾದ ಬಸವರಾಜ ಮುಧೋಳ ನಿರ್ದೇಶಕರಾದ ಡಾ, ಪ್ರಶಾಂತ ಬಾಬಣ್ಣವರ, ವಿಶಾಲ ಪಾಟೀಲ, ಸುರೇಶ ಚಿಪ್ಪಲಕಟ್ಟಿ, ರವಿ ನಂದಗಾವಿ, ಲಕ್ಷ್ಮೀಬಾಯಿ ಸೋನ್ನದ ಲಲಿತಾ ಚಿಪ್ಪಲಕಟ್ಟಿ, ಪದ್ಮಾ ಸತರೇಡ್ಡಿ, ವಿಠ್ಠಲ ಸೋನವಾಲ್ಕರ, ರಕ್ಷೀತ ಚಿಪ್ಪಲಕಟ್ಟಿ, ಶಿವಬೋದ ಈರ​‍್ಪನ್ನವರ ಹಾಗೂ ಪ್ರವೀಣ ಕಂಕಣವಾಡಿ ಉಪಸ್ಥಿತರಿದ್ದರು. 


ಸುದ್ದಿ ಓದಿ