ಧಾರವಾಡ - ಹುಬ್ಬಳ್ಳಿ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಧಾರವಾಡ ಸೆ.16: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರವನ್ನು  ಕೆಸಿಡಿ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ 15, 2025 ರಂದು ಬೆಳಿಗ್ಗೆ ವೇದಿಕೆ ಕಾರ್ಯಕ್ರಮ ಜರುಗಿಸಲಾಯಿತು.  

ಸಾರ್ವಜನಿಕವಾಗಿ ಸಂವಿಧಾನ ಪೀಠಿಕೆ ಓದಿ, ಕಾರ್ಯಕ್ರಮದ ಪ್ರಯುಕ್ತ ಧಾರವಾಡದಿಂದ ಬೆಂಗಳೂರಿನವರೆಗೆ ರಸ್ತೆ ಮೂಲಕ 10 ಅಭ್ಯರ್ಥಿಗಳಿಂದ ಬೈಕ ರಾ​‍್ಯಲಿ ಮಾಡಲಾಯಿತ್ತು. ಚಿತ್ರಕಲೆ, ಭಾಷಣ ಹಾಗೂ ಛಾಯಾಚಿತ್ರ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಯಿತು, ಸದರಿ ಸ್ಪರ್ಧೆಯಲ್ಲಿ 155 ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಸದರಿ ಕಾರ್ಯಕ್ರಮದಲ್ಲಿ 10 ವಿವಿಧ ರೀತಿಯ  ಕಲಾ ತಂಡಗಳು ಭಾಗವಹಿಸಿದವು, 1,200 ಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 1,000 ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು. ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು 524 ಜನರು ಆನ್‌ಲೈನ್‌ನಲ್ಲಿ ಮೂಲಕ ನೊಂದಣಿ ಮಾಡಿದ್ದರು. 

ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ ಪ್ರದರ್ಶನ ಮಾಡಿದರು.  ಚಿತ್ರಕಲೆ, ಭಾಷಣ ಹಾಗೂ ಛಾಯಾಚಿತ್ರ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಯಿತ್ತು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಸುದ್ದಿ ಓದಿ