ಅಥಣಿ

ಮಕ್ಕಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ: ಸಂಗಮೇಶ ಬಬಲೇಶ್ವರ

ಮಕ್ಕಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ: ಸಂಗಮೇಶ ಬಬಲೇಶ್ವರ

ಅಥಣಿ, 28: ಮಕ್ಕಳ ಹಕ್ಕಿಗಾಗಿ, ಶೈಕ್ಷಣಿಕ ಭವಿಷ್ಯಕ್ಕಾಗಿ, ಒಳ್ಳೆಯ ಆರೋಗ್ಯಕ್ಕಾಗಿ ರಾಜ್ಯಾದ್ಯಂತ ನಿರಂತರವಾಗಿ ಇಡೀ ರಾಜ್ಯ ಪ್ರವಾಸ ಮಾಡಿ ಪರಶೀಲಿಸುತ್ತಿರುವೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ತಿಳಿಸಿದರು.  

ಅವರು ಅಧಿಕೃತ ಪ್ರವಾಸದ ಸಂದರ್ಭದಲ್ಲಿ ಮಾದ್ಯಮ ಜೋತೆ ಮಾತನಾಡಿ.  ಬಾಲ ವಿಕಾಸ ಅಕಾಡೆಮಿಗೆ ಅಧ್ಯಕ್ಷನಾಗಿ  ಜೂನ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ 6 ಜಿಲ್ಲೆಗಳ 20 ಕ್ಕೂ ಹೆಚ್ಚು ತಾಲೂಕುಗಳಿಗೆ ಭೇಟಿ ನೀಡಿ ತಾಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಮಕ್ಕಳು ವಾಸ ಮಾಡುವ ವಸತಿ ನಿಲಯಗಳಿಗೆ ತೆರಳಿ ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸಿದ್ದಲ್ಲದೆ ಮಕ್ಕಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆ ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದ ಅವರು ವಸತಿ ನಿಲಯಗಳಲ್ಲಿ ಪ್ರಮುಖವಾಗಿ ಸ್ವಚ್ಛತೆ, ಊಟದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವೆ ಎಂದರು.     

ವಸತಿ ನಿಲಯಗಳಲ್ಲಿ ಮಕ್ಕಳಿಗೆ ಯಾವುದೇ ತೊಂದರೆ ಉಂಟಾದಲ್ಲಿ ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಸರಿ ಪಡಿಸಬೇಕು ಇಲ್ಲದೇ ಹೋದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಮಕ್ಕಳಿಗೆ ಹೇಳಿರುವೆ ಎಂದ ಅವರು ರಾಜ್ಯದ 2 ಕೋಟಿಗೂ ಹೆಚ್ಚು  ಮಕ್ಕಳ ಭವಿಷ್ಯಕ್ಕಾಗಿ  ಬಾಲ ವಿಕಾಸ ಅಕಾಡೆಮಿ ಕಾರ್ಯಮಾಡುತ್ತಿದೆ ಎಂದರು.     

ಅಥಣಿ ಪ್ರವಾಸದ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ, ದೇವರಾಜ ಅರಸ್ ನಿಗಮದ ವಸತಿ ನಿಲಯಗಳಿಗೆ ಭೇಟಿ ನೀಡಿ ಪರೀಶೀಲನೆ ಮಾಡಿದೆ ಜೊತೆಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳೊಂದಿಗೂ ಚರ್ಚಿಸಿರುವೆ ಎಂದ ಅವರು ದೇವರಾಜ ಅರಸ್ ನಿಗಮದ ವೆಂಕಟೇಶ ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ ಯಾದವಾಡ, ಸಿಡಿಪಿಒ ರೇಣುಕಾ ಹೊಸಮನಿ ಉತ್ತಮವಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿರುವ ವಿಷಯ ಕೂಡ ನನ್ನ ಗಮನಕ್ಕೆ ಬಂದಿದೆ ಎಂದರು. 


ಸುದ್ದಿ ಓದಿ