ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ: ಬುಂದೆ ಲಾಡು ಹಂಚು ಭಕ್ತಿಯ ನಮನ
ಜಮಖಂಡಿ 23: ನಗರದ ಹೃದಯಭಾಗದ ಹನುಮಾನ ದೇವಸ್ಥಾನದಲ್ಲಿ ಶಾಸಕ ಜಗದೀಶ ಗುಡಗುಂಟಿ ಅವರು ಅಯೋಧ್ಯ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಹನುಮಾನ ದೇವರಿಗೆ ಪೂಜೆಯನ್ನು ಸಲ್ಲಿಸಿ ಶ್ರೀರಾಮನ ಭಕ್ತರಿಗೆ ಬುಂದೆ ಲಾಡು ಹಂಚುವ ಮೂಲಕ ಶ್ರೀರಾಮನಿಗೆ ಭಕ್ತಿಯ ನಮನವನ್ನು ಸಲಿಸಿದರು.
ಇಲ್ಲಿನ ಕಿತ್ತೂರ ರಾಣಿ ಚನ್ನಮ್ಮ ಮಾರುಗಟ್ಟೆ ಆವರಣದಲ್ಲಿ ನಡೆದ ಹಿಂದೂ ಸ್ವರಾಜ್ಯ ಸೇನಾ ಹಾಗೂ ಹಿಂದೂಸ್ಥಾನ ಸಹಯೋಗದಲ್ಲಿ ಅಯೋಧ್ಯಾಪತಿ ಪ್ರಭು ಶ್ರೀರಾಮನ ಭವ್ಯ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾನಾ ಅಂಗವಾಗಿ ಭವ್ಯವಾದ ಶ್ರೀರಾಮನ ಮೂರ್ತಿಗೆ ಪೂಜೆಯನ್ನು ಸಲ್ಲಿಸಿದರು. ನೂರಾರು ಶ್ರೀರಾಮನ ಭಕ್ತಾಧಿಗಳು ರಾಮನಾಮ ಜಪವನ್ನು ಮಾಡುವ ಮೂಲಕ ಭಕ್ತಿಯನ್ನು ಮೆರೆದರು.
ಓಲೇಮಠದ ಸಭಾ ಭವನದಲ್ಲಿ ಮಹಿಳಾ ಹೊಲಿಗೆ ತರಬೇತಿ ಸಂಘಟನೆ ಮಹಿಳೆಯರು ಪುಟ್ಟ ಮಗುವಿಗೆ ಶ್ರೀರಾಮನ ಛದ್ಮ ವೇಷಭೂಷಣವನ್ನು ತೊಡಿಸಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲಿಸುವ ಜೊತೆಗೆ ಭಕ್ತಿಯಿಂದ ಗೌರವಿಸಿದರು.
ದಾನಮ್ಮ ದೇವಿ ದೇವಸ್ಥಾನದಲ್ಲಿ ದಾನಮ್ಮ ದೇವಿ ಗಜಾನನ ಉತ್ಸವ ಸಮಿತಿ ಅವರು ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಿದರು. ವೀರ ರಾಣೆ ಕಿತ್ತೂರ ಚನ್ನಮ್ಮ ಮಹಿಳಾ ಸಂಘ ಹಾಗೂ ದಾನೇಶ್ವರಿ ಮಹಿಳಾ ಮಂಡಳದವರು ಶ್ರೀರಾಮನಗೆ ಪೂಜೆ ಸಲ್ಲಿಸಿದರು.
ಮೋರೆ ಪ್ಲಾಟ್ದಲ್ಲಿ ಶ್ರೀರಾಮಲಿಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಬಿರಾದರ ಆಸ್ಪತ್ರೆಯ ಆವರದಲ್ಲಿ ಹಾಗೂ ಮೋರೆ ಕುಟುಂಬಸ್ಥರಿಂದ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನಪ್ರಸಾದವನ್ನು ನೆರವೇರಿಸಿದರು. ಶಿವಾಜಿ ವೃತ್ತದಲ್ಲಿ ಬೃಹತ್ ಗಾತ್ರದ ಶ್ರೀರಾಮ ಹಾಗೂ ಹುನುಮಾನ ಮೂರ್ತಿಗೆ ನೂರಾರು ಭಕ್ತರು ಸೇರಿ ಪೂಜೆ ಸಲ್ಲಿಸಿ ಬುಂದೆ ಲಾಡುವನ್ನು ಹಂಚಿದರು.
ಹೊಕ್ಕಳಬಾವಿ ಆವರಣದಲ್ಲಿ ಹಾಗೂ ಶ್ರೀರಾಮ ಮಂದಿರದಲ್ಲಿ ನಡೆದ ಶ್ರೀರಾಮನ ಜಪ ಮಾಡುವ ಮೂಲಕ ರಾಮ ತಾರಕ ಹೋಮವನ್ನು ಮಾಡಿದರು. ಹೋಮದಲ್ಲಿ ರಾಮ ಮಂದಿರದಲ್ಲಿ 13 ಜೋಡಿ ದಂಪತಿಗಳು, ಹೊಕ್ಕಳಬಾವಿಯಲ್ಲಿ ಎರಡು ಜೋಡಿ ದಂಪತಿಗಳು ಇದ್ದರು. ನೂರಾರು ಭಕ್ತರು ರಾಮನಾಮ ಜಪವನ್ನು ಮಾಡುತ್ತಿದರು. ನಗರದ ಬಸ್ ನಿಲ್ದಾಣ ಬಳಿ ಕಾನಿಪ ಸಂಘದ ಅಧ್ಯಕ್ಷ ಅಪ್ಪು ಪೋತರಾಜ ಅವರು ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಶ್ರೀರಾಮನಿಗೆ ಪೂಜೆಯನ್ನು ಸಲ್ಲಿಸಿ ಸಾರ್ವಜನಿಕರಿಗೆ ಅನ್ನಸಂತರೆ್ಣ ಮಾಡಿದರು.