ರಾಣೆಬೆನ್ನೂರ

ಕಾಳಿಕಾ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ಕಾಳಿಕಾ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ಲೋಕದರ್ಶನ ವರದಿ 

ರಾಣೇಬೆನ್ನೂರು 01:  ದಾರ್ಶನಿಕರು, ಸಂತರು, ಶರಣರು ನೆಲೆಸಿದ ಪುಣ್ಯಭೂಮಿ ರಾಣೇಬೆನ್ನೂರು ತಾಲೂಕು ಧಾರ್ಮಿಕ ಪರಂಪರೆಯ ನೆಲವೀಡು ಆಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

         ನಗರದ ಕುರುಬಗೇರಿಯ ಕಾಳಿಕಾ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನೂತನ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸದಾ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿರುವ ಹೃದಯವಂತರು. ನೀವು ಮಾಡುವ ಧರ್ಮ ಪ್ರಸಾರದ ಕಾರ್ಯ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುತ್ತೆ ಆದರೆ ಇಂದಿನ ಯುವ ಪೀಳಿಗೆಗೆ ಶಿಕ್ಷಣ ಅವಶ್ಯ ಅದರಲ್ಲೂ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಭಿತ್ತಿ ಅಂದಾಗ ಮಾತ್ರ ಜೀವನ ಸಾರ್ಥಕವಾಗುತ್ತೆ ಎಂದು ಸಲಹೆ ನೀಡಿದರು. 

          ನಂತರ ಸಮಾಳ, ಭಾಜ-ಭಜಂತ್ರಿ, ಡೊಳ್ಳು, ವಿವಿಧ ವಾದ್ಯ ಮೇಳದೊಂದಿಗೆ ನಡೆದ ರಥೋತ್ಸವದಲ್ಲಿ ಭಾಗಿಯಾದ ನೂರಕ್ಕೂ ಹೆಚ್ಚು ಕುಂಭ ಹೊತ್ತ ಮಹಿಳೆಯರು ರಾಜ ಬೀದಿಯುದ್ದಕ್ಕೂ ಮೆರವಣಿಗೆಗೆ ಶೋಭೆ ತಂದರು. 

      ಕಾರ್ಯಕ್ರಮದಲ್ಲಿ ಕಾಳಿಕಾ ದೇವಸ್ಥಾನ ಕಮೀಟಿ ಅಧ್ಯಕ್ಷ ಪಾಂಡಪ್ಪ ಅಡ್ಮನಿ, ಪ್ರಕಾಶ ಕೊಪ್ಪದ, ರಾಜು ರೇವಣಕರ, ನಾಗಪ್ಪ ಮಾಕನೂರ, ಶಿವಪುತ್ರ​‍್ಪ ಬಣಕಾರ,  ಚನ್ನಬಸಪ್ಪ ಗೌಡಶಿವಣ್ಣನವರ, ಹೇಮಪ್ಪ ಮಾಕನೂರ, ಮಹೇಶಪ್ಪ ಕೊಪ್ಪದ, ನಾಗಪ್ಪ ಬುರಡಿಕಟ್ಟಿ, ಶಂಕ್ರ​‍್ಪ ಬುರಡಿಕಟ್ಟಿ, ಮಂಜುನಾಥ ಗೌಡಶಿವಣ್ಣನವರ, ಶಿವಪ್ಪ ಯಲವಟ್ಟಿ, ಜಟ್ಟೆಪ್ಪ ಕರೇಗೌಡ್ರ, ಚನ್ನಬಸಪ್ಪ ತೋಟಪ್ಪನವರ, ರುದ್ರ​‍್ಪ ಮಾಳೇನಹಳ್ಳಿ, ಮರಡೆಪ್ಪ ಕಿಚಡಿ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು. 


ಸುದ್ದಿ ಓದಿ