ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಸಾವಳಗಿ ರೈತರು ಪ್ರತಿಭಟನೆ
ಹದಿನೈದು ವರ್ಷಗಳಿಂದ ಜಮೀನುಗಳಿಗೆ ಸರಿಯಾದ ಸಮಯಕ್ಕೆ ನೀರು ಒದಗಿಸದೆ ಅನ್ಯಾಯ: ಆರೋಪ
ಜಮಖಂಡಿ 11: ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಾರ್ವಜನಿಕರು, ವಿವಿಧ ರೈತ ಸಂಘಟನೆಗಳಿಂದ ಸಾವಳಗಿ, ತುಂಗಳ ಏತ ನೀರಾವರಿ ಕಾಲುವೆಗಳಿಗೆ ಸರ್ಕಾರದ ಆದೇಶದಂತೆ ಸಾವಳಗಿ, ಕನ್ನೋಳ್ಳಿ, ಕುರಗೋಡ, ಗದ್ಯಾಳ, ತುಂಗಳ ಏತ ನೀರಾವರಿ ಯೋಜನೆಯಿಂದ ರೈತರು ವಂಚಿತರಾಗಿದ್ದಾರೆಂದು ಸಾವಳಗಿ ಬಂದ ಮಾಡಿ ಪ್ರತಿಭಟನೆ ನಡೆಸಿ, ಹಿಪ್ಪರಗಿ ಜಲಾಶಯ ಎಇಇ ಶಿವಮೂರ್ತಿ ಅವರಿಗೆ ಮನವಿ ಸಲಿಸಿದರು.
ಸಾವಳಗಿ, ತುಂಗಳ ಏತ ನೀರಾವರಿ 1.28 ಟಿಎಮ್ಸಿ ನೀರನ್ನು ಸುಮಾರು 9045 ಹೆಕ್ಟರ ಪ್ರದೇಶ ಕೃಷಿ ಜಮೀನುಗಳಿಗೆ ನಿಯಮದ ಪ್ರಕಾರ ನೀರನ್ನು ಪೂರೈಸಬೇಕು.ಸುಮಾರು ಹದಿನೈದು ವರ್ಷಗಳಿಂದ ಜಮೀನುಗಳಿಗೆ ಸರಿಯಾದ ಸಮಯಕ್ಕೆ ನೀರು ಒದಗಿಸದೆ ಇಲಾಖೆಯು ರೈತರಿಗೆ ಅನ್ಯಾಯ ಮಾಡುತ್ತ ಬಂದಿದೆಂದು ಪ್ರತಿಭಟನಾಕಾರರು ಆರೋಪಿಸಿದರು.
ಹಲ್ಯಾಳ ಪೂರ್ವ ಮುಖ್ಯ ಕಾಲುವೆ ಮೂಲಕ 40 ಕಿ.ಮೀ ಅಂತರದಲ್ಲಿ ಐದು ಹಳ್ಳಿಗಳು ಅಚ್ಚುಕಟ್ಟು ಪ್ರದೇಶದಲ್ಲಿ ನೀರು ದೊರೆಯುತ್ತಿಲ್ಲ ಮುಖ್ಯ ಓಪನ್ ಕಾಲುವೆ ಇರುವುದರಿಂದ ಕಾನೂನು ಬಾಹಿರವಾಗಿ ಅಥಣಿ ಭಾಗದ ರೈತರು ಪಂಪಸೇಟ್ ಕೂಡಿಸಿ ನಮ್ಮ ಕಾಲುವೆಗೆ ಬರಬೇಕಾದ ನೀರನ್ನು ತಡೆದು ನಮ್ಮ ಭಾಗದ ರೈತರಿಗೆ ನೀರು ಇಲ್ಲದಂತೆ ಮಾಡುತ್ತಿದ್ದಾರೆ ಎಂದರು.
ಈ ಯೋಜನೆಯು 2012 ರಿಂದ ಪ್ರಾರಂಭವಾಗಿ 12 ವರ್ಷ ಕಳೆದರು ನಮ್ಮ ಭಾಗಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಆಗಿದೆ. ಯಾವ ವರ್ಷವು ಈ ಕಾಲುವೆಗೆ ಸರಿಯಾಗಿ ನೀರು ಹರಿಸಿಲ್ಲ. ತಾವು ಈ ಹಳ್ಳಿಗಳಿಗೆ ಬರುವಂತಹ ನೀರಿನ ಪಾಲನ್ನು ಒದಗಿಸಿಕೊಡಬೇಕು. ಹೊಸ ಯೋಜನೆಯಾದ ಸಾವಳಗಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿದರೆ ಮಾತ್ರ ಈ ಐದು ಹಳ್ಳಿಗಳಿಗೆ ನೀರನ್ನು ಸಮರ್ಕವಾಗಿ ಈ ಭಾಗದ ಜಮೀನುಗಳಿಗೆ ನೀರು ಹರಿಸಲು ಸಾಧ್ಯವಿದೆ ಎಂದರು.
ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಪೋನ್ ಮುಖಾಂತರ ವಾಕ್ಸಮರವೇ ನಡೆಯಿತು. ನಂತರ ಸ್ಥಳಕ್ಕಾಮಿಸಿದ ಹಿಪ್ಪರಗಿ ಜಲಾಶಯ ಎಇಇ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿ 4 ದಿನಗಳ ಕಾಲ ಗಡವು ನೀಡಿದರು. ಸ್ಫದಿಸದಿದ್ದರೆ ಮತ್ತೇ ನಮ್ಮ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.