ಗದಗ

ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಸ್ನಾತಕೋತರ ಪದವಿ ವಿದ್ಯಾರ್ಥಿಗಳಿಗೆ ದೀಕ್ಷಾರಂಭ ಕಾರ್ಯಕ್ರಮ

ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ಸ್ನಾತಕೋತರ ಪದವಿ ವಿದ್ಯಾರ್ಥಿಗಳಿಗೆ ದೀಕ್ಷಾರಂಭ ಕಾರ್ಯಕ್ರಮ

          ಗದಗ 06:  "ಗುರುಗಳ ಕಾರುಣ್ಯದಿಂದ ಪಡೆದ ದೀಕ್ಷೆಯ ಪ್ರತಿಫಲ ಜೀವನದಲ್ಲಿ ಸಾಕಾರಗೊಳ್ಳಬೇಕಾದರೆ ಶಿಸ್ತುಬದ್ಧ ಅನುಷ್ಠಾನ, ಮನೋನಿಗ್ರಹ ಹಾಗೂ ನಿರಂತರ ಸಾಧನೆ ಅತ್ಯಗತ್ಯ ಎಂದು ಹೊಸಳ್ಳಿಯ ಶ್ರೀ ಜಗದ್ಗುರು ಬೂದೀಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಅಭಿನವ ಬೂದೀಶ್ವರ ಸ್ವಾಮೀಜಿಗಳು ಹೇಳಿದರು."ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ 2026ಹಿ27್ಫೂ ಸಾಲಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವಾದ ’ದೀಕ್ಷಾರಂಭ’ವನ್ನು ಉದ್ಘಾಟಿಸಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

         ಜೀವನದಲ್ಲಿ ಸ್ಪಷ್ಟವಾದ ಉದ್ದೇಶ, ಅದನ್ನು ಸಾಧಿಸುವ ಉತ್ಸಾಹ ಹಾಗೂ ಶಿಸ್ತುಬದ್ಧ ಜೀವನಶೈಲಿ ಇರಬೇಕು. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಮನಸ್ಸಿನ ನಿಯಂತ್ರಣ, ಸಮಯದ ಸದ್ಬಳಕೆ, ನಿರಂತರ ಪ್ರಯತ್ನ ಮತ್ತು ಉತ್ತಮ ನಡವಳಿಕೆ ಮುಖ್ಯ. ವಿದ್ಯಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ ಉತ್ತಮ ವ್ಯಕ್ತಿತ್ವ, ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಆಶೀರ್ವದಿಸಿದರು.

            ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಮಿಥುನ್ ಎಚ್‌. ಎನ್‌., ಐಪಿಎಸ್ ಅವರು ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ, ಕೌಶಲ್ಯ ಮತ್ತು ಅನುಭವ ಆಧಾರಿತ ಶಿಕ್ಷಣ ಅತ್ಯಂತ ಮುಖ್ಯ. ಕೇವಲ ಸೈದ್ಧಾಂತಿಕ ಜ್ಞಾನದಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಕಲಿಕೆಯ ಜೊತೆಗೆ ಪ್ರಾಯೋಗಿಕ ಅನುಭವ, ಕೌಶಲ್ಯಗಳ ಅಭಿವೃದ್ಧಿ ಹಾಗೂ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಬೆಳೆಸಿಕೊಳ್ಳಬೇಕು. 

ಸುದ್ದಿ ಓದಿ