ಭಾರತ ಸಂವಿಧಾನ ಸಮರ್ಪಣ ದಿನ: ಪ್ರವಚನ ಕಾರ್ಯಕ್ರಮ
ಬಳ್ಳಾರಿ 02: ಅಖಿಲ ಭಾರತೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯುವಜನ ಸಮಾರ (ರಿ) ವತಿಯಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಮಹಾ ಮಾನವತಾವಾಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನ, ಸಮರ್ಪಣ ದಿನದ ಅಂಗವಾಗಿ ವಿಶೇಷ ಪ್ರವಚನ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಲ್ಯಾಣ ಶ್ರೀಗಳು, ಕರವೇ ಜಿಲ್ಲಾಧ್ಯಕ್ಷರಾದ ಚಾನಾಳ್ ಶೇಖರ್, ಬಿ.ಜೆ.ಪಿ. ಯುವ ಮುಖಂಡ ಉಮಾರಾಜ್ ಬಂಗಿ, ಕಾಂಗ್ರೆಸ್ ಯುವ ಮುಖಂಡರಾದ ವೆಂಕಟೇಶ್ ಪ್ರಸಾದ್, ರಾಜ್ಯಾಧ್ಯಕ್ಷರಾದ ಕೆ.ಆರ್.ರಂಗನಾಥನ್, ಬಳ್ಳಾರಿ ಜಿಲ್ಲಾಧ್ಯಕ್ಷರಾದ ತೋರನಗಲ್ಲು ರಾಮಕೃಷ್ಣ, ದೊಡ್ಡ ಯರ್ರಿಸ್ವಾಮಿ ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾ ಬಳ್ಳಾರಿ ಜಿಲ್ಲಾಧ್ಯಕ್ಷರು ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ತದ ನಂತರ ಉದ್ಘಾಟನೆ ಕಾರ್ಯಕ್ರಮ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಕೆ.ಆರ್.ರಂಗನಾಥನ್ ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿ ಸತ್ಕಾರ್ಯದಿಂದ ಬರುವ ಎಲ್ಲಾ ಸೌಕರ್ಯಗಳನ್ನು ಮೂಲತಃ ಫಲಾನುಭವಿಗಳಿಗೆ ಕೈಗೆ ಸೇರಿಸಲು ನಮ್ಮ ಸಂಘಟನೆಯ ನೂತನವಾಗಿ ಬಳ್ಳಾರಿಯಲ್ಲಿ ಪ್ರಾರಂಭವಾಗಿದ್ದು, ನಮ್ಮ ಪದಾಧಿಕಾರಿಗೆ ಈ ಸಂದರ್ಭದಲ್ಲಿ ತಿಳಿಸಿದರು. ನಂತರ ಪದಾಧಿಕಾರಿಗಳ ಆಯ್ಕೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾಗಿ ಅರುಣ್ ಬಾಲಚಂದ್ರ ರವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬಳ್ಳಾರಿಯ 8 ತಾಲ್ಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಳ್ಳಾರಿ ನಗರ ಅಧ್ಯಕ್ಷರಾಗಿ ಬಿ.ಅಂಜಿ, ಸಿರುಗಪ್ಪ ತಾಲ್ಲೂಕು ಅಧ್ಯಕ್ಷರು ಬಿ.ರಾಮಕೃಷ್ಣ, ಹೊಸಪೇಟೆ ಅಧ್ಯಕ್ಷರನ್ನಾಗಿ ಸೂರ್ಯನಾರಾಯಣ ಕೊಳಗಲ್ಲು, ಸಂಡೂರು ತಾಲ್ಲೂಕು ಅಧ್ಯಕ್ಷರನ್ನಾಗಿ ಮಲಿಯಪ್ಪ, ಹಗರಿಬೊಮ್ಮನಹಳ್ಳಿ ಅಧ್ಯಕ್ಷರಾಗಿ ವೆಂಕಟೇಶ್.ಎ.ಪಿ, ಹಡಗಲಿ ಅಧ್ಯಕ್ಷರಾಗಿ ಶಿವರಾಜ್, ಕಂಪ್ಲಿ ತಾಲ್ಲೂಕು ಅಧ್ಯಕ್ಷರಾಗಿ ಗೋವಿಂದಪ್ಪ ನಾಯಕ್ ಮುಂತಾದವರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ನಂತರ ಮಾತನಾಡಿದ ಶ್ರೀಗಳು ಮೊದಲಿಗೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ ಅಶರ್ೀವಾದ ಮಾಡಿ ಎಲ್ಲಾ ಪದಾಧಿಕಾರಿಗಳಿಗೆ ಈ ಸಂಘಟನೆಯು ಇನ್ನು ಬಹಳ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಇನ್ನು ಹೆಚ್ಚಿನ ರೀತಿಯಲ್ಲಿ ಪದಾಧಿಕಾರಿಗಳು ಸೇರಿ ಒಂದು ದೊಡ್ಡ ಮಟ್ಟಡ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ರಾಮಕೃಷ್ಣ, ರಾಜ್ಯ ಉಪಾಧ್ಯಕ್ಷರಾದ ಎ.ರಾಜು, ರಾಜ್ಯ ಪ್ರಧಾನ ಕಾರ್ಯದಶರ್ಿ ಮಂಜೇಶ್ಕುಮಾರ್, ಹುಡೇಕರ್ ರಾಜೇಶ್, ಹೊನ್ನೂರಪ್ಪ, ಮಹೇಂದ್ರಕುಮಾರ್, ಬಾಪೂಜಿನಗರ ಕೃಷ್ಣ, ಚಿಗುರು ಕಲಾತಂಡದ ಪದಾಧಿಕಾರಿಗಳು, ಇನ್ನು 500ರಕ್ಕೂ ಹೆಚ್ಚಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿರೂಪಣೆ ಮತ್ತು ವಂದನಾರ್ಪಣೆಯನ್ನು ಅರುಣ್ಬಾಲಚಂದ್ರ ನೇರವೇದಿಸಿದರು,